ಚೈತ್ರ ಪ್ರತಿಪದೆಯ ಈ ‘ಯುಗಾದಿಯ ತಿಥಿ’ಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗುವುದಕ್ಕಾಗಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯನ್ನು ಮಾಡಿರಿ !

ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆಯೂ ಜನವರಿ ೧ ರಂದು ಹೊಸವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಂಸ್ಕೃತಿಯ ಪರಾಭವವಾಗಿದೆ.

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರ ಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು

ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ

ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು.

ಜೀವನದ ಗೂಢ ಜ್ಞಾನವನ್ನು ಕಲಿಸುವ ಬ್ರಹ್ಮಧ್ವಜ !

ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ  ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ.  ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ.

ಬ್ರಹ್ಮಧ್ವಜವನ್ನು ಏರಿಸುವ ಸಮಯದಲ್ಲಿ ಮಾಡುವ ಪ್ರತಿಜ್ಞೆ ಮತ್ತು ಪ್ರಾರ್ಥನೆ

ಈ ಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ನನಗೆ ಪ್ರಾಪ್ತವಾದ ಶಕ್ತಿಯು ನಮ್ಮಿಂದ ಸಾಧನೆಗಾಗಿ, ಗುರುಸೇವೆಗಾಗಿ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಉಪಯೋಗವಾಗಲಿ’ ಎಂದು ಪ್ರಾರ್ಥನೆ.

ಭಾರತೀಯ ಸಂಸ್ಕೃತಿಯಂತೆ ಯುಗಾದಿಯ ದಿನ ಸಾತ್ತ್ವಿಕ ವಾತಾವರಣದಲ್ಲಿ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸ ವರ್ಷ ಸ್ವಾಗತಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !

ಮಾಡಿದ ಅಭ್ಯಾಸ ಹಾಗೂ ಭಾಗವಹಿಸಿದ ಸಾಧಕರ ವೈಯಕ್ತಿಕ ಅನುಭವಗಳಿಂದ ಭಾರತೀಯ ಪದ್ಧತಿಯಿಂದ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸವರ್ಷಾರಂಭ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ ಮತ್ತು ಪಾಶ್ಚಾತ್ಯ ಪದ್ಧತಿಯಲ್ಲಿ ಹೊಸವರ್ಷಾರಂಭ ಮಾಡುವುದು ಹಾನಿಕರವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ.’

ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು

ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮಥ್ರ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ.

ಯುಗಾದಿಯ ವಿಷಯದಲ್ಲಿ ಮಹಾಭಾರತದಲ್ಲಿರುವ ಕಥೆ

ಇದನ್ನೇ ಇಂದಿನ ಬ್ರಹ್ಮಧ್ವಜದ ಮೂಲಸ್ವರೂಪವೆಂದು ಹೇಳಲಾಗುತ್ತದೆ. ಪಾಡ್ಯದ ಈ ಉತ್ಸವವು ಹೊಸ ವರ್ಷದ ಪ್ರಾರಂಭವಾಗಿರುವುದರಿಂದ ಈ ದಿನವನ್ನು ಸಂತೋಷದಿಂದ ಆಚರಿಸಿದರೆ ಮುಂದಿನ ವರ್ಷವೆಲ್ಲ ಆನಂದಮಯವಾಗಿರುತ್ತದೆಯೆಂದು ನಂಬಲಾಗುತ್ತದೆ.

ಹಿಂದೂಗಳ ಮತ್ತು ಇತರ ಪಂಥದವರ ಕಾಲಗಣನೆ

‘ಹೋರಾ’ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ. ಪ್ರತಿಯೊಂದು ಘಟಕವು ೨೪ ನಿಮಿಷಗಳದ್ದಾಗಿರುತ್ತದೆ. ಆದ್ದರಿಂದ ಎರಡೂವರೆ ಘಟಕಗಳ ಒಂದು ಗಂಟೆಯಾಗುತ್ತದೆ. ಈ ಗಂಟೆಗೆ ಆಂಗ್ಲ ಭಾಷೆಯಲ್ಲಿ ‘ಅವರ್’ (Hour) ಎನ್ನುತ್ತಾರೆ. ಆ ಶಬ್ದವು ‘ಹೋರಾ’ದಿಂದಲೇ ಬಂದಿದೆ.

ತರಕಾರಿಗಳನ್ನು ಸಾತ್ತ್ವಿಕ ಪದ್ಧತಿಯಿಂದ ಹೆಚ್ಚಿ ತಯಾರಿಸಿದ ಪಲ್ಯವನ್ನು ಸೇವಿಸುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಸಾಧಕರು ಓರೆ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಯ ಪಲ್ಯವನ್ನು ಸೇವಿಸಿದ ನಂತರ ಅವರ ನಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಸ್ಪಂದನಗಳು ಕಡಿಮೆಯಾದವು. ಇದರ ಅರ್ಥ ಈ ಪಲ್ಯಗಳನ್ನು ಸೇವಿಸಿದ್ದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗದೇ, ಹಾನಿಯಾಯಿತು.