ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರ ಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು

೧. ನೈಸರ್ಗಿಕ

ಜ್ಯೋತಿಷ್ಯಶಾಸ್ತ್ರಾನುಸಾರ ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ-ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (ಅಧ್ಯಾಯ ೧೦, ಶ್ಲೋಕ ೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪಾಡ್ಯದ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ.

೨. ಐತಿಹಾಸಿಕ

ಈ ದಿನದಂದು

ಅ. ರಾಮನು ವಾಲಿಯನ್ನು ವಧಿಸಿದನು.

ಆ. ಶಕರು ಹೂಣರನ್ನು ಸೋಲಿಸಿ ವಿಜಯವನ್ನು ಪಡೆದರು.

ಇ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು; ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದಿದ್ದನು.

೩. ಆಧ್ಯಾತ್ಮಿಕ

ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿಯಂದು ಶ್ರೀ ಸರಸ್ವತಿ ದೇವಿಯ ಪೂಜೆ ಮಾಡುವ ಮಹತ್ವ

ಈ ದಿನ ಶ್ರೀ ಸರಸ್ವತಿತತ್ತ್ವವು ಪೃಥ್ವಿಯ ಮೇಲೆ ಇತರ ದಿನಗಳ ತುಲನೆಯಲ್ಲಿ ಶೇ. ೩೦ ರಷ್ಟು ಹೆಚ್ಚು ಬರುತ್ತದೆ. ಈ ದಿನ ಅನೇಕರು ವಿದ್ಯೆ ಸಂಪಾದನೆಯ ಶುಭಕಾರ್ಯವನ್ನು ಪ್ರಾರಂಭಿಸುತ್ತಾರೆ. ಇದರಿಂದ ಈ ದಿನ ದೇವಿ ಮತ್ತು ಯಂತ್ರದ ಪೂಜೆ ಹಾಗೂ ಉಪಾಸನೆ ಮಾಡುತ್ತಾರೆ. – ಕು. ಮಧುರಾ ಭೋಸಲೆ

ಹಿಂದೂಗಳೇ, ಯುಗಾದಿಯ ಶುಭಮುಹೂರ್ತದಲ್ಲಿ ಕೇವಲ ಭಾರತ ಮಾತ್ರವಲ್ಲ  ಪೃಥ್ವಿಯಲ್ಲಿ ಎಲ್ಲೆಡೆ ಹಿಂದೂ ಧರ್ಮವನ್ನು ಪ್ರಸ್ಥಾಪಿತಗೊಳಿಸಿ ರಾಮರಾಜ್ಯದ ನಾಗರಿಕರಂತೆ ಅಖಿಲ ಮನುಕುಲಕ್ಕೆ ಸುಸಂಸ್ಕೃತ ಮತ್ತು ಸುಖಸಮೃದ್ಧಿಯುಕ್ತ ಜೀವನ ನೀಡಲು ನಿಶ್ಚಯಿಸೋಣ.