ಜೀವನದ ಗೂಢ ಜ್ಞಾನವನ್ನು ಕಲಿಸುವ ಬ್ರಹ್ಮಧ್ವಜ !

೧. ಪ್ರತಿಯೊಂದು ಕ್ಷಣ ನಮ್ಮ ಧ್ಯೇಯದ ಕಡೆಗೆ ಎಚ್ಚರಿಕೆಯಿಂದ ಸಾಗಬೇಕು, ಎಂಬುದನ್ನು ‘ಪಾಡ್ಯ’ವು ಕಲಿಸುತ್ತದೆ !

ಪರಾತ್ಪರ ಗುರು ಪಾಂಡೆ ಮಹಾರಾಜರು

‘ಬ್ರಹ್ಮಧ್ವಜವು ಜೀವನದಲ್ಲಿ ನಮಗೆ ಏನು ಸಾಧಿಸಬೇಕಾಗಿದೆಯೋ, ಅದರ ಪ್ರತೀಕವಾಗಿದೆ. ಯುಗಾದಿಯು ಚೈತ್ರ ಮಾಸದ ಮೊದಲ ದಿನ ಬರುವುದರಿಂದ ಆ ದಿನಕ್ಕೆ ‘ಪಾಡ್ಯ’ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಕ್ಷಣವನ್ನು ಈಶ್ವರಪ್ರಾಪ್ತಿಗಾಗಿ ಉಪಯೋಗಿಸಬೇಕು. ಸಮರ್ಥವಾಗಿ ಮುಂದೆ ಹೋಗಲು ಪ್ರತಿಯೊಂದು ಕ್ಷಣ ಮಹತ್ವದ್ದಾಗಿದೆ. ಅದರ ಬೆಲೆ ತಿಳಿಯಲು ಪ್ರತಿಯೊಂದು ಕ್ಷಣ ಅವಕಾಶ ಸಿಗುತ್ತದೆ. ಪಾಡ್ಯವು ‘ಅದನ್ನು ಅರಿತುಕೊಂಡು ಜೀವನವನ್ನು ನಡೆಸಬೇಕು’, ಎಂಬುದನ್ನು ಹೇಳುತ್ತದೆ.

ನಾವು ಯುಗಾದಿಯ ದಿನ ದೊರಕಿದ ಅವಕಾಶದ ಸದುಪಯೋಗವನ್ನು ಮಾಡಿಕೊಳ್ಳೋಣ. ಧ್ಯೇಯದ ದೃಷ್ಟಿಯಿಂದ ಸಾಗುತ್ತಿರುವಾಗ ಪ್ರತಿಯೊಂದು ಕ್ಷಣವನ್ನು ಆ ದೃಷ್ಟಿಯಿಂದ ಸಮರ್ಥವಾಗಿ ಉಪಯೋಗಿಸುವುದೆಂದರೆ ಪಾಡ್ಯ ! ಮೃತ್ಯು ಯಾವಾಗ ಬರುವುದು, ಎಂಬುದನ್ನು ಹೇಳಲು ಬರುವುದಿಲ್ಲ. ಪಾಡ್ಯ ಎಂದರೆ ಪ್ರತಿಯೊಂದು ಕ್ಷಣ ಎಚ್ಚರದಿಂದ ನಮ್ಮ ಧ್ಯೇಯದ ಕಡೆಗೆ ಸಾಗುವುದಾಗಿದೆ. ಪಾಡ್ಯ ಎಂದರೆ ಪ್ರತಿಯೊಂದು ಕ್ಷಣ ಎಚ್ಚರದಿಂದಿರುವುದು.’

೨. ಕಹಿಬೇವಿನ ಸಾಮಥ್ರ್ಯ

ಬ್ರಹ್ಮಧ್ವಜಕ್ಕೆ ಕಹಿಬೇವನ್ನು ಏಕೆ ಕಟ್ಟುತ್ತಾರೆ ? ಕಹಿಬೇವು ಕಹಿಯಾಗಿದ್ದರೂ, ಅದು ಗುಣಕಾರಿಯಾಗಿದೆ. ಸತ್ಯವು ಕೂಡ ಕಹಿಯೇ ಆಗಿರುತ್ತದೆ. ಆದುದರಿಂದ ಬ್ರಹ್ಮಧ್ವಜಕ್ಕೆ ಕಹಿಬೇವನ್ನು ಕಟ್ಟುತ್ತಾರೆ. ಅದು ವನಸ್ಪತಿಗಳ ಸತ್ಕಾರವಾಗಿದೆ.

ಆಯುರ್ಬಲಂ ಯಶೋ ವರ್ಚಃ ಪ್ರಜಾಃ ಪಶುವಸೂನಿ ಚ |

ಬ್ರಹ್ಮ ಪ್ರಜ್ಞಾಂ ಚ ಮೇಧಾಂ ಚ ತ್ವಂ ನೋ ದೇಹಿ ವನಸ್ಪತೇ ||

– ಅಶ್ವತ್ಥಸ್ತೋತ್ರ, ಶ್ಲೋಕ ೧೨

ಅರ್ಥ : ಹೇ ವನಸ್ಪತಿಯೇ, ನೀನು ನಮಗೆ ಆಯುಷ್ಯ, ಬಲ, ಯಶಸ್ಸು, ತೇಜಸ್ಸು, ಪ್ರಜಾ, ಪಶು, ಸಂಪತ್ತು ಮತ್ತು ಹಾಗೆಯೇ, ಬ್ರಹ್ಮನನ್ನು ತಿಳಿದುಕೊಳ್ಳುವ ಮತ್ತು ಅವನ ಕಲ್ಪನೆಯನ್ನು ಮಾಡುವ  ತೀಕ್ಷ್ಣ ಬುದ್ಧಿಯನ್ನು ಕೊಡು. ‘ವನಸ್ಪತಿಯಲ್ಲಿ ಎಷ್ಟು ಸಾಮಥ್ರ್ಯವಿದೆ’, ಎಂಬುದು ಇದರಿಂದ ತಿಳಿಯುತ್ತದೆ. ಅದರ ಸತ್ಕಾರಕ್ಕಾಗಿ  ಈ ಹಬ್ಬದ ದಿನ ಅದಕ್ಕೆ ಮಹತ್ವವನ್ನು ನೀಡಲಾಗುತ್ತದೆ.

೩. ಕಲಶವು ಜ್ಞಾನಶಕ್ತಿಯ ಪ್ರತೀಕವಾಗಿದೆ

ಬ್ರಹ್ಮಧ್ವಜದ ಮೇಲೆ ಕೆಳಗೆ ಮುಖ ಮಾಡಿ ಇಟ್ಟಿರುವ ಕಲಶವು (ತಾಮ್ರದ ತಂಬಿಗೆಯು), ಜ್ಞಾನಶಕ್ತಿಯ ಪ್ರತೀಕವಾಗಿದೆ. ಅದು ಕಳಸ (ಶಿಖರ)ವಾಗಿದೆ. ಅದನ್ನು ಪ್ರಾಪ್ತ ಮಾಡಿಕೊಳ್ಳುವುದೆಂದರೆ ಯಶಸ್ವಿಯಾಗುವುದು.

೪. ಬ್ರಹ್ಮಧ್ವಜವೆಂದರೆ ತ್ಯಾಗಮಯ ಜೀವನವನ್ನು ನಡೆಸುವುದರ ಪ್ರತೀಕ

ಬ್ರಹ್ಮಧ್ವಜವು ತ್ಯಾಗಮಯ ಜೀವನವನ್ನು ನಡೆಸುವುದರ ಪ್ರತೀಕವಾಗಿದೆ.  ಮೂರ್ತಿಗಳನ್ನು ಸ್ಥಾಪಿಸುವುದೂ ಒಂದು ಪ್ರತೀಕವೇ ಆಗಿದೆ. ಅದು ತೇಜಸ್ವಿಯಾಗಿರಬೇಕು. ಆ ಪ್ರತೀಕದ ಕಡೆಗೆ ಅಥವಾ ಆ ಹೊರವಲಯದ ಕಡೆಗೆ ನೋಡದೇ, ಅದರಲ್ಲಿನ ಚೈತನ್ಯಶಕ್ತಿಯನ್ನು ನೋಡಬೇಕು. ಅದಕ್ಕಾಗಿ ಗುರುಗಳಿಂದ ಜ್ಞಾನ, ಅಂದರೆ ದೀಕ್ಷೆಯನ್ನು ಪಡೆಯಬೇಕು. ಅವರು ಶಿಕ್ಷೆಯನ್ನು ಕೊಡಬೇಕು, ಅಂದರೆ ಅವರು ಆವರಣವನ್ನು ತೆಗೆಯಬೇಕು. ಅದಕ್ಕಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು. ಪ್ರಾಯಶ್ಚಿತ್ತವು ಒಂದು ಶಿಕ್ಷೆಯಾಗಿದೆ. ‘ಶಿಕ್ಷೆ’ಯಿಂದ ಶಿಕ್ಷಣ ಶಬ್ದ ನಿರ್ಮಾಣವಾಗಿದೆ. ಅದರಿಂದ ಶಿಕ್ಷಕರು, ಪರೀಕ್ಷಣೆ, ಪರೀಕ್ಷೆ, ಕಕ್ಷೆ ಮುಂತಾದ ‘ಕ್ಷ’ದಿಂದ ನಿರ್ಮಾಣವಾದ ಶಬ್ದಗಳಿವೆ. ಅದರ ನಂತರ ಅವನ ಉತ್ತೀರ್ಣಕ್ಕೆ ‘ಸಮಾವರ್ತನ ಕ್ರಿಯೆ’ ಎನ್ನುತ್ತಾರೆ. ಅಂದರೆ ‘ಆವರಣವನ್ನು ತೆಗೆದು ಜ್ಞಾನವನ್ನು ಮೇಲೆ ತರುವುದು’ ಇದು ಕೊನೆಯದಾಗಿದೆ.

೫. ಸಂಸಾರವನ್ನು ಸಮತ್ವ ಬುದ್ಧಿಯಿಂದ ಮತ್ತು ಸಮಭಾವದಿಂದ ನೋಡಲು ಕಲಿಯಬೇಕು !

ಸಂಸಾರವೆಂದರೆ ಜ್ಞಾನದ ಸಾರವಾಗಿದೆ ! ಅದನ್ನು ಸಮತ್ವ ಬುದ್ಧಿಯಿಂದ ಮತ್ತು ಸಮಭಾವದಿಂದ ನೋಡಲು ಕಲಿಯಬೇಕು. “ಸಮತ್ವಂ ಯೋಗ ಉಚ್ಯತೆ” (ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೪೮) ಅಂದರೆ ‘ಸಮಭಾವಕ್ಕೇ ‘ಯೋಗ’ವೆಂದು ಹೇಳುತ್ತಾರೆ’, ಎಂದು ಗೀತೆಯಲ್ಲಿ ಹೇಳಲಾಗಿದೆ.

೬. ಬ್ರಹ್ಮಧ್ವಜವನ್ನು ನಿಲ್ಲಿಸುವಾಗ ಬಿದಿರಿನ ಕೋಲನ್ನು ಏಕೆ ಉಪಯೋಗಿಸುತ್ತಾರೆ ?

ಬಿದಿರಿನ ಕೋಲು ಸುಷುಮ್ನಾ ನಾಡಿಯ ಪ್ರತೀಕವಾಗಿದ್ದು ಅದು ಶರೀರದಲ್ಲಿ ಎಲ್ಲೆಡೆ ಚೈತನ್ಯಶಕ್ತಿಯ (ಕುಂಡಲಿನಿ ಶಕ್ತಿಯ) ಕಾರ್ಯವನ್ನು ಮಾಡುತ್ತದೆ. ಅದನ್ನು ಕಾರ್ಯಕ್ಕಾಗಿ ಜಾಗೃತಗೊಳಿಸಲು ಈ ಪೂಜೆಯನ್ನು ಮಾಡಲಾಗುತ್ತದೆ. ಆ ಶಕ್ತಿಯನ್ನು ಸಿಂಗರಿಸಲು ಕೋಲಿಗೆ ವಸ್ತ್ರವನ್ನು ತೊಡಿಸಲಾಗುತ್ತದೆ. ಭಾಗವತದಲ್ಲಿ ಅಧ್ಯಾಯ ೫ ರಲ್ಲಿ ಧುಂಧುಕ್ಕಾರಿ ಮತ್ತು ಗೋಕರ್ಣ ಇವರ ಕಥೆಯಿದೆ. ಇವರಿಬ್ಬರೂ ಸಹೋದರರಾಗಿರುತ್ತಾರೆ. ಧುಂಧುಕ್ಕಾರಿಯು ಕೆಟ್ಟ ವೃತ್ತಿಯವನಾಗಿರುತ್ತಾನೆ. ಕೆಟ್ಟ ಸಂಗತಿಯಿಂದಾಗಿ ಅವನಿಂದ ಪಾಪವಾಗುತ್ತದೆ. ಮೃತ್ಯುವಿನ ನಂತರ ಅವನು ಭಯಂಕರ ಯೋನಿಯಲ್ಲಿ ಹೋಗುತ್ತಾನೆ. ಗೋಕರ್ಣನು ಸಾಧನೆಯನ್ನು ಮಾಡಲು ವನಕ್ಕೆ ಹೋಗಿರುತ್ತಾನೆ. ಅವನು ಹಿಂದಿರುಗಿ ಬರುತ್ತಾನೆ, ಆಗ ಮರಣ ಹೊಂದಿದ ಧುಂಧುಕ್ಕಾರಿಯು ವಿವಿಧ ರೂಪಗಳನ್ನು ಧರಿಸಿ ಗೋಕರ್ಣನ ಬಳಿ ತನ್ನನ್ನು ಉದ್ಧರಿಸುವಂತೆ ವಿನಂತಿಸಿಕೊಳ್ಳುತ್ತಾನೆ. ಗೋಕರ್ಣನು ಅವನಿಗಾಗಿ ಭಾಗವತದ ಕಥೆಯನ್ನು ಹೇಳಲು ಆರಂಭಿಸುತ್ತಾನೆ. ಕಥೆಯನ್ನು ಕೇಳಲು ಅವನು ವಾಯುರೂಪವಾಗಿ ಅಲ್ಲಿರುವ ಬಿದಿರಿನ ಮರದ ಕೆಳಗಿನ ಗೆಣ್ಣಿನಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಗೋಕರ್ಣನ ಒಂದೊಂದು ಅಧ್ಯಾಯ ಪೂರ್ಣವಾಗುತ್ತಾ ಹೋದಂತೆ, ಬಿದಿರಿನ ಗಿಡದ ಒಂದೊಂದು ಕಾಂಡವು ಭಂಗವಾಗುತ್ತಾ ಹೋಗುತ್ತದೆ. ಈ ರೀತಿ ಏಳು ದಿನಗಳ ಭಾಗವತ ಪಾರಾಯಣದಿಂದ ಧುಂಧುಕಾರಿಯ ಎಲ್ಲ ಭೋಗಗಳು ನಾಶವಾಗುತ್ತವೆ.

ಮೇಲಿನ ಕಥೆಯಿಂದ ಬಿದಿರಿನ ಮಹಾತ್ಮೆಯು ಗಮನಕ್ಕೆ ಬರುತ್ತದೆ. ಜೀವದ ಉದ್ಧಾರಕ್ಕಾಗಿ ಸುಷುಮ್ನಾನಾಡಿಯು ಶುದ್ಧವಾಗಿರುವುದು ಆವಶ್ಯಕವಾಗಿದೆ. ಅದರಿಂದ ಆ ಜೀವವು ಶುದ್ಧವಾಗುತ್ತದೆ; ಈ ಸಾಮಥ್ರ್ಯ ಮತ್ತು ಈ ಗೂಢ  ಜ್ಞಾನವು ಈ ಭಾಗವತದಲ್ಲಿನ ಕಥೆಯಿಂದ ಗಮನಕ್ಕೆ ಬರುತ್ತದೆ.  ಈ ರೀತಿ ಬ್ರಹ್ಮಧ್ವಜದ ಮಹತ್ವವು ಮಹಾನವಾಗಿದೆ. ಜೀವನದ ಆದರ್ಶವಾದ ಬ್ರಹ್ಮಧ್ವಜವು ನಮಗೆ ನಮ್ಮ ಜೀವನದ ಗೂಢ ಜ್ಞಾನವನ್ನು ತೋರಿಸುತ್ತದೆ.’

– (ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ. (೨೮-೩-೨೦೨೭)