ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು. ಅಂದಿನಿಂದ ಬ್ರಹ್ಮಧ್ವಜ ಸ್ಥಾಪನೆಯು ಪ್ರಾರಂಭವಾಗಿದೆ. ಈ ದಿನದಂದು ಪ್ರಜಾಪತಿಯ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಈ ಲಹರಿಗಳ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನ ತತ್ತ್ವವು ಕಾರ್ಯನಿರತವಾಗಿರುತ್ತದೆ. ಅಲ್ಲದೇ ಈ ದಿನದಂದು ರಾಮತತ್ತ್ವ ಶೇ. ೧೦೦ ರಷ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಬ್ರಹ್ಮಧ್ವಜದ ಮಾಧ್ಯಮದಿಂದ ಕಾರ್ಯನಿರತವಾಗಿರುವ ಈಶ್ವರನ ಶಕ್ತಿಯು ಜೀವಕ್ಕೆ ಲಾಭದಾಯಕವಾಗಿರುತ್ತದೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)
ಯುಗಾದಿಯ ದಿನ ಮಾಡುವ ಪಂಚಾಂಗದ ಪೂಜೆ ಮತ್ತು ಶ್ರವಣಯುಗಾದಿಯ ದಿನದಂದು ಪಂಚಾಂಗದ ಮೇಲಿರುವ ಗಣಪತಿಯನ್ನು ಪೂಜಿಸಬೇಕು ಮತ್ತು ಪಂಚಾಂಗದಲ್ಲಿ ತಿಳಿಸಿರುವ ವರ್ಷಫಲವನ್ನು ಓದಬೇಕು. ಹಿಂದಿನ ಕಾಲದಲ್ಲಿ ಜ್ಯೋತಿಷಿಗಳು ಪ್ರತಿ ಮನೆಗೆ ಹೋಗಿ ವರ್ಷಫಲವನ್ನು ಓದುತ್ತಿದ್ದರು. ಅದು ಯುಗಾದಿಯ ಒಂದು ವಿಧಿಯೇ ಆಗಿತ್ತು. ಇಂದಿಗೂ ಅನೇಕ ಸ್ಥಳಗಳಲ್ಲಿ ಯುಗಾದಿಯ ದಿನದಂದು ಬೆಳಗ್ಗೆ ಪಂಚಾಂಗವನ್ನು ಮನೆಗೆ ತಂದು ಅದನ್ನು ಪೂಜಿಸಿ, ಶ್ರದ್ಧೆಯಿಂದ ಸಂವತ್ಸರಫಲವನ್ನು ಓದಲಾಗುತ್ತದೆ. ಯುಗಾದಿಯ ದಿನದಂದು ಮನೆಯಲ್ಲಿ ಸಿಹಿ ಅಡುಗೆ ಮಾಡಿ, ಆನಂದದಿಂದ ಆಚರಿಸುವ ಪದ್ಧತಿಯಿದೆ. ಈ ದಿನವನ್ನು ಸಂತೋಷದಿಂದ ಆಚರಿಸಿದರೆ ವರ್ಷವೆಲ್ಲ ಆನಂದಮಯವಾಗಿರುತ್ತದೆ ಎನ್ನುವುದು ಅದರ ಹಿಂದಿನ ಭಾವನೆಯಾಗಿದೆ. ಈ ದಿನದಂದು ಕೇವಲ ಆನಂದದಿಂದಷ್ಟೇ ಅಲ್ಲ, ಗೌರವದ ಪ್ರತೀಕವೆಂದೂ ಆಚರಿಸಬೇಕು. ನಮ್ಮಲ್ಲಿ ಮೂರೂವರೆ ಮುಹೂರ್ತಗಳಿಗೆ ವಿಶೇಷ ಮಹತ್ವವಿದೆ. ಅದರಲ್ಲಿ ಯುಗಾದಿಯು ಒಂದು ಶುಭ ಮುಹೂರ್ತವೆಂದು ತಿಳಿಯಲಾಗುತ್ತದೆ. ಮದುವೆಯ ನಿಶ್ಚಿತಾರ್ಥ, ಮದುವೆ, ಉಪನಯನ, ಗೃಹಪ್ರವೇಶ ಹೀಗೆ ಎಲ್ಲ ಮಂಗಲಕಾರ್ಯಗಳಿಗೆ ಈ ದಿನವನ್ನು ಪ್ರಶಸ್ತವೆಂದು ತಿಳಿಯಲಾಗುತ್ತದೆ. – ಜ್ಯೋತಿರ್ಭಾಸ್ಕರ ಜಯಂತ ಸಾಳಗಾಂವಕರ |