ಹಿಂದೂಗಳ ಮತ್ತು ಇತರ ಪಂಥದವರ ಕಾಲಗಣನೆ

ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಿಂದೂಗಳ ಭಾರತೀಯ ಕಾಲಗಣನೆಯು ಯುಗಾದಿಯಿಂದ ಪ್ರಾರಂಭವಾಗುತ್ತದೆ. ವರ್ಷದ ಪ್ರತಿಯೊಂದು ಅಮಾವಾಸ್ಯೆಗೆ ಚಂದ್ರ-ರವಿ ಒಂದುಗೂಡುತ್ತಾರೆ ಮತ್ತು ಹುಣ್ಣಿಮೆಗೆ ಅವರು ಎದುರುಬದುರು ಬರುತ್ತಾರೆ. ಚೈತ್ರ ಅಮಾವಾಸ್ಯೆಗೆ ಚಂದ್ರ ಮತ್ತು ರವಿ ಇಬ್ಬರೂ ಮೇಷ ಎಂದರೆ ಮೊದಲ ರಾಶಿಯಲ್ಲಿ ಒಟ್ಟಿಗೆ ಇರುತ್ತಾರೆ. ಸೂರ್ಯೋದಯದಿಂದ ನಮ್ಮ ದಿನವು ಪ್ರಾರಂಭವಾಗುತ್ತದೆ. ಕ್ರೈಸ್ತರ ಕಾಲಗಣನೆಗನುಸಾರ ಮಧ್ಯರಾತ್ರಿ ೧೨ ಗಂಟೆಯಿಂದ ದಿನವು ಪ್ರಾರಂಭವಾಗುತ್ತದೆ ಮತ್ತು ಮುಸ್ಲಿಂ ಕಾಲಗಣನೆಗನುಸಾರ ಸಾಯಂಕಾಲದಿಂದ ದಿನವು ಪ್ರಾರಂಭವಾಗುತ್ತದೆ. ನಮ್ಮ ದಿನವು ಸೂರ್ಯನ ಉದಯದೊಂದಿಗೆ ಪ್ರಾರಂಭವಾಗುತ್ತದೆ. ಅದರಿಂದ ನಮ್ಮ ದಿನದ ಪ್ರಾರಂಭಕ್ಕೆ ನೈಸರ್ಗಿಕ ಅಧಿಷ್ಠಾನ ದೊರಕಿದೆ. ನಮ್ಮಲ್ಲಿ ವಾರದ ಪ್ರಾರಂಭದಲ್ಲಿ ಆ ವಾರದ ದೇವತೆಯ ಮೊದಲ ‘ಹೋರಾ’ ಇರುತ್ತದೆ. ‘ಹೋರಾ’ ಎಂದರೆ ೬೦ ನಿಮಿಷಗಳು ಅಂದರೆ ಎರಡೂವರೆ ಘಟಕ. ಪ್ರತಿಯೊಂದು ಘಟಕವು ೨೪ ನಿಮಿಷಗಳದ್ದಾಗಿರುತ್ತದೆ. ಆದ್ದರಿಂದ ಎರಡೂವರೆ ಘಟಕಗಳ ಒಂದು ಗಂಟೆಯಾಗುತ್ತದೆ. ಈ ಗಂಟೆಗೆ ಆಂಗ್ಲ ಭಾಷೆಯಲ್ಲಿ ‘ಅವರ್’ (Hour) ಎನ್ನುತ್ತಾರೆ. ಆ ಶಬ್ದವು ‘ಹೋರಾ’ದಿಂದಲೇ ಬಂದಿದೆ. ‘ಹೋರಾ’ ಎಂದರೆ ಅಹೋರಾತ್ರ ಈ ನಾಲ್ಕು ಅಕ್ಷರಗಳ ಮಧ್ಯದ ಎರಡು ಅಕ್ಷರಗಳಾಗಿವೆ. ಸಾವಿರಾರು ವರ್ಷ ಗಳಿಂದ ಪ್ರಚಲಿತವಿರುವ ನಮ್ಮ ಕಾಲ ಗಣನೆಯು ಖಗೋಳಶಾಸ್ತ್ರಕ್ಕನುಸಾರ ಸಾಧ್ಯವಾದಷ್ಟು ಅಧಿಕ ಚಂದ್ರ-ಸೂರ್ಯರ ಸ್ಥಿತಿಯ ಸೂಕ್ಷ್ಮತೆಯೊಂದಿಗೆ ಸಮತೋಲನಗೊಳಿಸಲು ಪ್ರಯತ್ನಿಸಿದೆ.

– ಜ್ಯೋತಿರ್ಭಾಸ್ಕರ ಜಯಂತ ಸಾಳಗಾಂವಕರ