ಭಾರತೀಯ ಸಂಸ್ಕೃತಿಯಂತೆ ಯುಗಾದಿಯ ದಿನ ಸಾತ್ತ್ವಿಕ ವಾತಾವರಣದಲ್ಲಿ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸ ವರ್ಷ ಸ್ವಾಗತಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ !

ಭಾರತೀಯ ಪರಂಪರೆಗನುಸಾರ ಚೈತ್ರ ಶುಕ್ಲ ಪಕ್ಷ ಪಾಡ್ಯ, ಅಂದರೆ ಯುಗಾದಿಯು ಹೊಸವರ್ಷದ ಆರಂಭವಾಗಿದೆ ! ಈ ದಿನ ಮುಂಜಾನೆ ಅಭ್ಯಂಗ ಸ್ನಾನ ಮಾಡಿ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸವರ್ಷವನ್ನು ಸ್ವಾಗತಿಸಲಾಗುತ್ತದೆ. ಕಳೆದ ಕೆಲವು ದಶಕಗಳಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಡಿಸೆಂಬರ್ ೩೧ ರಂದು ಮಧ್ಯರಾತ್ರಿ ಪಾಶ್ಚಾತ್ಯ ಪದ್ದತಿಯಿಂದ ಔತಣ, ಮದ್ಯ, ನೃತ್ಯ ಇಂತಹ ವಾತಾವರಣದಲ್ಲಿ ಹೊಸವರ್ಷವನ್ನು ಆರಂಭಿಸುವ ರೂಢಿ ಪ್ರಾರಂಭವಾಗಿದೆ. ಇವೆರಡೂ ಪದ್ಧತಿಯಿಂದ ಮಾಡಿದ ಹೊಸ ವರ್ಷದ ಸ್ವಾಗತದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ನಿರ್ಧಿಷ್ಟವಾಗಿ ಏನು ಪರಿಣಾಮವಾಗುತ್ತದೆ, ಎಂಬುದನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ವೈಜ್ಞಾನಿಕ ಯಂತ್ರ ಮತ್ತು ಸೂಕ್ಷ್ಮ ಪರೀಕ್ಷಣೆಯ ಮಾಧ್ಯಮದಿಂದ ಅಧ್ಯಯನ ಮಾಡಲಾಯಿತು. ಅದರ ನಿಷ್ಕರ್ಷದ ಸಾರಾಂಶವನ್ನು ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಯಂತ್ರದ ಮೂಲಕ ಮಾಡಿದ ಅಧ್ಯಯನ

ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ

ಮಾಜಿ ಅಣುವಿಜ್ಞಾನಿ ಡಾ. ಮನ್ನಮ್ ಮೂರ್ತಿ ಇವರು ಈ ಉಪಕರಣವನ್ನು ವಿಕಸಿತಗೊಳಿಸಿದ್ದಾರೆ. ಈ ಉಪಕರಣದ ಮೂಲಕ ಯಾವುದಾದರೊಂದು ವಸ್ತು, ವಾಸ್ತು, ವನಸ್ಪತಿ, ಪ್ರಾಣಿ ಅಥವಾ ಮನುಷ್ಯ ಇವರಲ್ಲಿನ ಸೂಕ್ಷ್ಮ ಸಕಾರಾತ್ಮಕ ಊರ್ಜೆಯ ಹಾಗೂ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಹಾಗೂ ಅವುಗಳ ಒಟ್ಟು ಪ್ರಭಾವಲಯವನ್ನು ಅಳೆಯಲು ಸಾಧ್ಯವಾಗುತ್ತದೆ. ನಕಾರಾತ್ಮಕ ಊರ್ಜೆಯು ಎರಡು ಪ್ರಕಾರದ್ದಾಗಿರುತ್ತವೆ. ಅವುಗಳಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯು ಆ ಘಟಕದ ಸುತ್ತಲಿನ ನಕಾರಾತ್ಮಕ ಊರ್ಜೆಯಾಗಿರುತ್ತದೆ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಆ ಘಟಕದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ತೋರಿಸುತ್ತದೆ. ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನಲ್ಲಿ ನಕಾರಾತ್ಮಕ ಊರ್ಜೆ ಇರಬಹುದು. ಅದರೆ ಸಕಾರಾತ್ಮಕ ಊರ್ಜೆ ಇರುತ್ತದೆ ಎಂದೇನಿಲ್ಲ. ಕಳೆದ ೫ ವರ್ಷಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಯು.ಎ.ಎಸ್.’ ಉಪಕರಣದ ಮೂಲಕ ವ್ಯಾಪಕ ಸಂಶೋಧನೆಯನ್ನು ಮಾಡಲಾಗಿದೆ. ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ೧೦ ಸಾವಿರಕ್ಕಿಂತಲೂ ಹೆಚ್ಚು ಸಜೀವ ಹಾಗೂ ನಿರ್ಜೀವ ಘಟಕಗಳ ಪರೀಕ್ಷಣೆಯನ್ನು ಈ ಉಪಕರಣದಿಂದ ಮಾಡಲಾಗಿದೆ.

೧ ಅ. ಪಾಶ್ಚಿಮಾತ್ಯ ಪದ್ಧತಿಯಿಂದ ಡಿಸೆಂಬರ್ ೩೧ ರ ಮಧ್ಯರಾತ್ರಿ ಮಾಡಿದ ಹೊಸವರ್ಷಾರಂಭದಿಂದ ಆಗುವ ಪರಿಣಾಮದ ಪರೀಕ್ಷಣೆ :

೩೧ ಡಿಸೆಂಬರ್ ೨೦೧೮ ರಂದು ರಾತ್ರಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೇಶ-ವಿದೇಶಗಳಲ್ಲಿನ ಸಾಧಕರು ಪಾಶ್ಚಾತ್ಯ ಸಂಸ್ಕೃತಿಗನುಸಾರ ಕೇಶವಿನ್ಯಾಸ (ಹೇರ್ ಸ್ಟೈಲ್), ಅಲಂಕಾರ ಮತ್ತು ಉಡುಪುಗಳನ್ನು ಧರಿಸಿ ಗೋವಾದ ಒಂದು ಹೆಸರಾಂತ ಹೊಟೇಲ್‍ನಲ್ಲಿ ಆಯೋಜಿಸಿದ ‘ನ್ಯೂ ಇಯರ್ ಪಾರ್ಟಿ’ಯಲ್ಲಿ ಪಾಲ್ಗೊಂಡರು. ಈ ಎಲ್ಲ ಸಾಧಕರು ಅಲ್ಲಿ ೫ ಗಂಟೆ ಇದ್ದರು. ೩೧-೧೨-೨೦೧೮ ರ ರಾತ್ರಿ ಪಾರ್ಟಿಗೆ ಹೋಗುವ ಮೊದಲು ಹಾಗೂ ೧-೧-೨೦೧೯ ರಂದು ಮುಂಜಾನೆ ಪಾರ್ಟಿಯಿಂದ ಹಿಂತಿರುಗಿದ ನಂತರ ಅವರೆಲ್ಲರ ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆ ಮಾಡಿ, ಅದರ ನೋಂದಣಿಗಳನ್ನು ಬರೆದಿಡಲಾಯಿತು.

೧ ಆ. ಭಾರತೀಯ ಪದ್ಧತಿಯಿಂದ ಯುಗಾದಿಯ ದಿನ ಬ್ರಹ್ಮಧ್ವಜಪೂಜೆಯಿಂದ ಮಾಡಿದ ಹೊಸವರ್ಷಾರಂಭದಿಂದ ಆಗುವ ಪರಿಣಾಮದ ಪರೀಕ್ಷಣೆ : ೬-೪-೨೦೧೯ ರಂದು ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ವಿಧಿಪೂರ್ವಕ ಬ್ರಹ್ಮಧ್ವಜ ಪೂಜೆಯನ್ನು ಮಾಡಿ ಹೊಸವರ್ಷವನ್ನು ಸ್ವಾಗತಿಸಲಾಯಿತು. ಈ ಪೂಜೆಯಲ್ಲಿ ವಿಷಯ ಕ್ರ. ‘೧ ಅ.’ ದಲ್ಲಿನ ೧೨ ರಲ್ಲಿನ ೧೦ ಸಾಧಕರು ಪಾಲ್ಗೊಂಡಿದ್ದರು. ಆಗ ಮೊದಲಿನ ಪರೀಕ್ಷಣೆಯಲ್ಲಿನ ಇಬ್ಬರು ಸಾಧಕರು ವಿದೇಶದಲ್ಲಿದ್ದ ಕಾರಣ ಅವರಿಗೆ ಈ ಪರೀಕ್ಷಣೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಬ್ರಹ್ಮಧ್ವಜದ ಪೂಜೆಯ ಮೊದಲು ಮತ್ತು ಪೂಜೆಯ ನಂತರ ಅವರೆಲ್ಲರ ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಿ ಅವುಗಳ ನೋಂದಣಿಗಳನ್ನು ಬರೆದಿಡಲಾಯಿತು.

೧ ಇ. ಪಾಶ್ಚಾತ್ಯ ಹಾಗೂ ಭಾರತೀಯ ಪದ್ಧತಿಯಿಂದ ಮಾಡಿದ ಹೊಸವರ್ಷಾರಂಭದ ಪರಿಣಾಮಗಳ ತುಲನೆ : ಎರಡೂ ಪರೀಕ್ಷಣೆಗಳಲ್ಲಿ ಮಾಡಿದ ಪರೀಕ್ಷಣೆಯ ನೋಂದಣಿಗಳ ವಿಶ್ಲೇಷಣೆಯನ್ನು ಮಾಡಿದಾಗ ಈ ಮುಂದಿನ ವಿಷಯಗಳು ಸ್ಪಷ್ಟವಾಗಿ ಅರಿವಾದವು.

೧ ಇ ೧. ಪಾಶ್ಚಾತ್ಯರಂತೆ ಆಚರಿಸಿದ ಹೊಸವರ್ಷಾರಂಭದ ಪರಿಣಾಮ

ಅ. ಸಾಧಕರಲ್ಲಿನ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಇವೆರಡೂ ಪ್ರಕಾರದ ನಕಾರಾತ್ಮಕ ಊರ್ಜೆಯು ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಮೂರು ಪಟ್ಟು ಹೆಚ್ಚಾಯಿತು.

ಆ. ಸಾಧಕರಲ್ಲಿನ ಸಕಾರಾತ್ಮಕ ಊರ್ಜೆಯು ಮಾತ್ರ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಯಿತು.

೧ ಇ ೨. ಭಾರತೀಯ ರೀತಿಯಲ್ಲಿ ಆಚರಿಸಿದ ಹೊಸವರ್ಷಾರಂಭದ ಪರಿಣಾಮ

ಅ. ಸಾಧಕರಲ್ಲಿನ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಯಿತು.

ಆ. ಸಾಧಕರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಕಾರ್ಯಕ್ರಮದ ಮೊದಲಿನ ತುಲನೆಯಲ್ಲಿ ಕಾರ್ಯಕ್ರಮದ ನಂತರ ಸರಾಸರಿ ಒಂದುವರೆ ಪಟ್ಟು ಹೆಚ್ಚಾಯಿತು.

೨. ಪಾಶ್ಚಾತ್ಯ ಮತ್ತು ಭಾರತೀಯ ಪದ್ಧತಿಯಿಂದ ಮಾಡಿದ ಹೊಸವರ್ಷಾರಂಭದ ಸ್ವಾಗತದ ಸಮಯದಲ್ಲಿ ಪಾಲ್ಗೊಂಡ ಸಾಧಕರಿಗೆ ಅರಿವಾದ ತುಲನಾತ್ಮಕ ವಿಷಯಗಳು

ಅ. ೩೧ ಡಿಸೆಂಬರ್ ೨೦೧೮ ರ ಹಿಂದಿನ ರಾತ್ರಿ ನಾನು ತುಂಬಾ ಅಸ್ಥಿರನಾಗಿದ್ದೆನು. ನನ್ನ ಮನಸ್ಸಿನಲ್ಲಿ ನಿರಂತರವಾಗಿ ಮರುದಿನದ ಪಾರ್ಟಿಯ ಸಂಭ್ರಮದ ವಿಚಾರಗಳು ಮರುಕಳಿಸುತ್ತಿದ್ದವು. ತದ್ವಿರುದ್ಧ ಯುಗಾದಿಯ ಹಿಂದಿನ ರಾತ್ರಿ ಮನಸ್ಸು ಶಾಂತ ಹಾಗೂ ಆನಂದದಲ್ಲಿತ್ತು. ಡಿಸೆಂಬರ್ ೩೧ ರ ಪಾರ್ಟಿಯ ಮರುದಿನ ನನಗೆ ತುಂಬಾ ತೊಂದರೆಯಾಗುತ್ತಿತ್ತು. ನನ್ನ ಮನಸ್ಸು ಯಾವುದರಲ್ಲಿಯೂ ರಮಿಸುತ್ತಿರಲಿಲ್ಲ. ನನಗೆ ಶಕ್ತಿಯಿಲ್ಲದಂತೆ ಅನಿಸುತ್ತಿತ್ತು. ಯುಗಾದಿಯ ಮರುದಿನ ನನಗೆ ಉಲ್ಲಾಸ ಹಾಗೂ ಉತ್ಸಾಹದ ಅರಿವಾಗುತ್ತಿತ್ತು. ನಾನು ಶಾಂತ ಹಾಗೂ ಸ್ಥಿರವಾಗಿದ್ದೆ. ಅನೇಕ ಸೇವೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಲು ಸಾಧ್ಯವಾಯಿತು.

ಆ. ಹೊಸವರ್ಷದ ಪಾರ್ಟಿಯಲ್ಲಿ ನಾನು ಮೇಲ್ನೋಟಕ್ಕೆ ತುಂಬಾ ಮಜಾ ಮಾಡುತ್ತಿರುವುದು ಕಾಣಿಸುತ್ತಿದ್ದರೂ ನನ್ನ ಮೇಲೆ ಸೂಕ್ಷ್ಮದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಬರುತ್ತಿರುವುದು ಸ್ಪಷ್ಟವಾಗಿ ಅರಿವಾಗುತ್ತಿತ್ತು. ನನ್ನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆ ಆಗುತ್ತಿರುವುದು ಅರಿವಾಗುತ್ತಿತ್ತು. ಅಲ್ಲಿನ ಎಲ್ಲ ವಾತಾವರಣವು ಬಹಿರ್ಮುಖತೆ ಹಾಗೂ ಅಹಂನ್ನು ಹೆಚ್ಚಿಸುವುದಾಗಿತ್ತು. ಅಲ್ಲಿರುವ ವ್ಯಕ್ತಿಗಳಿಂದ ತುಂಬಾ ಪ್ರಮಾಣದಲ್ಲಿ ಲೈಂಗಿಕ ಸ್ಪಂದನಗಳು ಪ್ರಕ್ಷೇಪಣೆಯಾಗುವುದು ಅರಿವಾಯಿತು. ತದ್ವಿರುದ್ಧ ಯುಗಾದಿಯ ಕಾರ್ಯಕ್ರಮದಲ್ಲಿ ವಾತಾವರಣದಲ್ಲಿ ಸಕಾರಾತ್ಮಕತೆಯು ಹೆಚ್ಚುತ್ತಾ ಹೋಗುತ್ತಿರುವುದು ಅರಿವಾಗಿ ಮನಸ್ಸು ಅಂತರ್ಮುಖವಾಯಿತು. ಎಲ್ಲರ ಮೇಲೆ ಆಧ್ಯಾತ್ಮಿಕ ಉಪಾಯವಾಗುತ್ತದೆ ಎಂದರಿವಾಯಿತು.

ಇ. ಪಾಶ್ಚಾತ್ಯ ಹಾಗೂ ಭಾರತೀಯ ಪದ್ಧತಿಯ ಹೊಸವರ್ಷಾರಂಭಗಳಲ್ಲಿ ತುಲನೆಯಾಗಲು ಸಾಧ್ಯವೇ ಇಲ್ಲ. ಎರಡೂ ಕಾರ್ಯಕ್ರಮಗಳಲ್ಲಿ ಅನುಕ್ರಮವಾಗಿ ತಮದ ವಿರುದ್ಧ ಸತ್ತ್ವ, ಗಲಾಟೆಯ ವಿರುದ್ಧ ಶಾಂತಿ, ಭಾಸಮಾನದ ವಿರುದ್ಧ ಸತ್ಯ, ಅಲ್ಪಕಾಲದ ವಿರುದ್ಧ ದೀರ್ಘಕಾಲ ಬಾಳುವ, ಬಹಿರ್ಮುಖ ವಿರುದ್ಧ ಅಂತರ್ಮುಖ ಹೀಗೆ ಸ್ಪಷ್ಟ ವ್ಯತ್ಯಾಸದ ಅರಿವಾಯಿತು. ಆ ಪಾರ್ಟಿಯ ವಿಚಾರದಿಂದಲೇ ಮನಸ್ಸಿಗೆ ತೊಂದರೆ ಆಗುತ್ತದೆ. ತದ್ವಿರುದ್ಧ ಯುಗಾದಿಯ ಸಮಯದಲ್ಲಿ ನನ್ನ ವಿಚಾರಗಳು ಬಹಳ ಶುದ್ಧ, ಸರಳ ಹಾಗೂ ಸಕಾರಾತ್ಮಕವಾಗಿದ್ದವು.

೩. ಸೂಕ್ಷ್ಮ ಪರೀಕ್ಷಣೆಯ ಮಾಧ್ಯಮದಿಂದ ಮಾಡಿದ ಅಭ್ಯಾಸ

‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ನ ಸಾಧಕಿ ಪೂ. (ಸೌ.) ಯೋಯಾ ವಾಲೆ ಇವರು ಪಾಶ್ಚಾತ್ಯ ಪದ್ಧತಿಯಲ್ಲಿ ಡಿಸೆಂಬರ ೩೧ ರಂದು ಮಧ್ಯರಾತ್ರಿ ಮಾಡಿದ ಹೊಸವರ್ಷಾರಂಭ ಹಾಗೂ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕು. ಪ್ರಿಯಾಂಕಾ ಲೋಟಲೀಕರ (ಈಗಿನ ಸೌ. ಪ್ರಿಯಾಂಕಾ ಗಾಡಗೀಳ) ಇವರು ಭಾರತೀಯ ಪದ್ಧತಿಯಿಂದ ಯುಗಾದಿಯಂದು ಮುಂಜಾನೆ ಬ್ರಹ್ಮಧ್ವಜದ ಪೂಜೆಯೊಂದಿಗೆ ಮಾಡಿದ ಹೊಸವರ್ಷಾರಂಭದಿಂದಾಗುವ ಪರಿಣಾಮಗಳ ಸೂಕ್ಷ್ಮ ಪರೀಕ್ಷಣೆಯನ್ನು, ಅವರು ಚಿತ್ರಿಸಿದ ಸೂಕ್ಷ್ಮಚಿತ್ರಗಳಿಂದ ತಿಳಿದುಕೊಳ್ಳೋಣ.

ಮೇಲೆ ನೀಡಿದ ಸೂಕ್ಷ್ಮ ಚಿತ್ರಗಳಿಂದ, ಪಾಶ್ಚಾತ್ಯ ಹೊಸ ವರ್ಷಾರಂಭದ ಕಾರ್ಯಕ್ರಮದಿಂದ ತುಂಬಾ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಇದರಿಂದ ಅದರಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳ ಮೇಲೆ ಅವುಗಳ ಆವರಣ ಬರುತ್ತದೆ. ಇಂತಹ ಸ್ಥಳದಲ್ಲಿ ಸೂಕ್ಷ್ಮ ಅನಿಷ್ಟ (ಕೆಟ್ಟ) ಶಕ್ತಿಗಳ ಅಸ್ತಿತ್ವ ಇರುತ್ತದೆ ಮತ್ತು ಅವು ವ್ಯಕ್ತಿ ಮತ್ತು ವಾತಾವರಣ ಇವೆರಡರ ಮೇಲೆಯೂ ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಪರಿಣಾಮವನ್ನು ಮಾಡುತ್ತವೆ. ಆದುದರಿಂದ ‘ಪಾಶ್ಚಾತ್ಯ ಪದ್ಧತಿಯಿಂದ ಹೊಸವರ್ಷಾರಂಭ ಮಾಡುವುದು ಎಷ್ಟು ಹಾನಿಕರವಾಗಿದೆ’, ಎಂಬುದು ಸ್ಪಷ್ಟವಾಗುತ್ತದೆ.

ಬ್ರಹ್ಮಧ್ವಜಪೂಜೆಯ ನಂತರ ಬ್ರಹ್ಮಧ್ವಜದಿಂದ ಶಕ್ತಿ, ಚೈತನ್ಯ ಮತ್ತು ಆನಂದ ಪ್ರಕ್ಷೇಪಿಸುತ್ತದೆ ಮತ್ತು ಸೂಕ್ಷ್ಮದಲ್ಲಿನ ತೊಂದರೆದಾಯಕ ಶಕ್ತಿಗಳು ದೂರ ಹೋಗುತ್ತವೆ, ಇದು ಇಲ್ಲಿ ನೀಡಿದ ಚಿತ್ರದಿಂದ ಸ್ಪಷ್ಟವಾಗುತ್ತದೆ. ಸ್ವಲ್ಪದರಲ್ಲಿ ಹೇಳಬೇಕಾದರೆ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಮತ್ತು ಸೂಕ್ಷ್ಮ-ಚಿತ್ರಗಳ ಮೂಲಕ ಮಾಡಿದ ಅಭ್ಯಾಸ ಹಾಗೂ ಭಾಗವಹಿಸಿದ ಸಾಧಕರ ವೈಯಕ್ತಿಕ ಅನುಭವಗಳಿಂದ ಭಾರತೀಯ ಪದ್ಧತಿಯಿಂದ ಬ್ರಹ್ಮಧ್ವಜದ ಪೂಜೆ ಮಾಡಿ ಹೊಸವರ್ಷಾರಂಭ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ ಮತ್ತು ಪಾಶ್ಚಾತ್ಯ ಪದ್ಧತಿಯಲ್ಲಿ ಹೊಸವರ್ಷಾರಂಭ ಮಾಡುವುದು ಹಾನಿಕರವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ.’

– ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ೧೯-೩-೨೦೨೦)

ಹಿಂದೂ ರಾಷ್ಟ್ರ ನಿರ್ಮಿತಿಗಾಗಿ ಧರ್ಮಶಿಕ್ಷಣದ ಮಹತ್ವ

‘ಧರ್ಮಶಿಕ್ಷಣದಿಂದ ಕೃತಿ ಅಂದರೆ ಸಾಧನೆ ಆಗುವುದು, ಸಾಧನೆಯಿಂದ ಅನುಭೂತಿ ಬರುತ್ತದೆ. ಅನುಭೂತಿಗಳಿಂದ ಶ್ರದ್ಧೆಯು ಹೆಚ್ಚಾಗುತ್ತದೆ. ಶ್ರದ್ಧೆಯಿಂದ ಅಭಿಮಾನವು ಹೆಚ್ಚಾಗುತ್ತದೆ, ಅಭಿಮಾನದಿಂದ ಸಂಘಟನೆಯು ಹೆಚ್ಚಾಗುತ್ತದೆ, ಸಂಘಟನೆಯಿಂದ ಸಂರಕ್ಷಣೆ ನಿರ್ಮಾಣವಾಗುತ್ತದೆ ಮತ್ತು ಅದರಿಂದಲೇ ಹಿಂದೂ ರಾಷ್ಟ್ರದ ನಿರ್ಮಾಣ ಹಾಗೂ ಪೋಷಣೆ ಆಗುತ್ತದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

* ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ’ ಎಂದು ಹೇಳುತ್ತಾರೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು