ಚೈತ್ರ ಪ್ರತಿಪದೆಯ ಈ ‘ಯುಗಾದಿಯ ತಿಥಿ’ಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗುವುದಕ್ಕಾಗಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯನ್ನು ಮಾಡಿರಿ !

ಯುಗಾದಿ ನಿಮಿತ್ತ ಸಂದೇಶ

ಪರಾತ್ಪರ ಗುರು ಡಾ. ಆಠವಲೆ

‘ಚೈತ್ರ ಪ್ರತಿಪದೆಯು ಯುಗಾದಿಯ ತಿಥಿಯಾಗಿದೆ. ‘ಯುಗ’ ಮತ್ತು ‘ಆದಿ’ ಈ ಶಬ್ದಗಳ ಸಂಧಿಯಿಂದ ‘ಯುಗಾದಿ’ ಪದವಾಗಿದೆ. ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆಯೂ ಜನವರಿ ೧ ರಂದು ಹೊಸವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಂಸ್ಕೃತಿಯ ಪರಾಭವವಾಗಿದೆ. ಯುಗಾದಿ ತಿಥಿಯ ಅನಾದಿಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಕೃತಿಯ ಪರಾಭವದ ಇತಿಹಾಸವನ್ನು ಬದಲಾಯಿಸಲು ಚೈತ್ರ ಪ್ರತಿಪದೆ ಈ ‘ಯುಗಾದಿ ತಿಥಿ’ಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗಬೇಕೆಂದು ಭಾರತವು ಸಾಂವಿಧಾನಿಕ ದೃಷ್ಟಿಯಿಂದ ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲ್ಪಡುವುದು ಅನಿವಾರ್ಯವಾಗಿದೆ.

ಭಾರತದ ಪುರುಷಾರ್ಥಿ ಸಾಮ್ರಾಟರು ‘ಯುಗಾದಿ ತಿಥಿ’ಯ ಮಹತ್ವವನ್ನು ಅರಿತು ಈ ದಿನದಿಂದಲೇ ‘ವಿಕ್ರಮ ಸಂವತ್ಸರ (ಉಜ್ಜೈನಿಯ ರಾಜನಾದ ವಿಕ್ರಮಾದಿತ್ಯನು ಆರಂಭಿಸಿದ ಕಾಲಗಣನೆ)’, ‘ಶಾಲಿವಾಹನ ಶಕೆ (ಕ್ರಿ.ಶ. ೭೮ ರಲ್ಲಿ ಶಾಲಿವಾಹನನೆಂಬ ರಾಜನು ಆರಂಭಿಸಿದ ಕಾಲಗಣನೆ)’, ‘ಯುಧಿಷ್ಠಿರ ಸಂವತ್ಸರ’ (ಯುಧಿಷ್ಠಿರ ರಾಜನು ಪ್ರಾರಂಭಿಸಿದ ಕಾಲಗಣನೆ) ಈ ರೀತಿಯಾಗಿ ಕಾಲಗಣನೆಗಳು ಆರಂಭವಾದವು. ಅವರ ಪರಾಕ್ರಮದ ಸ್ಮೃತಿಗಳನ್ನು ಸ್ಮರಿಸುವ ಸಮಯವು ಇದಾಗಿದೆ. ಹಿಂದೂಗಳೇ, ಚೈತ್ರಪ್ರತಿಪದೆಯ ಈ ‘ಯುಗಾದಿ ತಿಥಿ’ಗೆ ನವವರ್ಷಾಂಭದ ದಿನವೆಂಬ ರಾಜಮಾನ್ಯತೆ ಸಿಗಲು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ರಾಜನೈತಿಕ ಪ್ರಯತ್ನಗಳ ಪರಾಕಾಷ್ಠೆಯನ್ನು ಮಾಡಿ ಮತ್ತು ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯನ್ನು ಮಾಡಿರಿ !’

– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.