ತರಕಾರಿಗಳನ್ನು ಸಾತ್ತ್ವಿಕ ಪದ್ಧತಿಯಿಂದ ಹೆಚ್ಚಿ ತಯಾರಿಸಿದ ಪಲ್ಯವನ್ನು ಸೇವಿಸುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುವುದು

ಆಹಾರ ಮತ್ತು ಆಚಾರಕ್ಕೆ ಸಂಬಂಧಿಸಿದ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಬೆಂಡೆಕಾಯಿ ಪಲ್ಯ’ ಬಹುತೇಕ ಎಲ್ಲರಿಗೂ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಬೆಂಡೆಕಾಯಿಗಳನ್ನು ಹೆಚ್ಚುವಾಗ ಪಾರಂಪರಿಕ ಪದ್ದತಿಯಂತೆ, ಅಂದರೆ ಚಿಕ್ಕ ವರ್ತುಲ ಆಕಾರದಲ್ಲಿ ಹೆಚ್ಚಲಾಗುತ್ತದೆ; ಆದರೆ ಇತ್ತೀಚೆಗೆ ಬೆಂಡೆಕಾಯಿಗಳನ್ನು ಓರೆಯಾಗಿ (ಡೊಂಕು) ಅಥವಾ ಉದ್ದವಾಗಿ ಹೆಚ್ಚುವ ಪದ್ಧತಿಯು ಪ್ರಚಲಿತವಾಗಿದೆ. ‘ವಿವಿಧ ಆಕಾರಗಳಲ್ಲಿ ಬೆಂಡೆಕಾಯಿಗಳನ್ನು ಹೆಚ್ಚಿದರೆ  ಆಧ್ಯಾತ್ಮಿಕ ದೃಷ್ಟಿಯಿಂದ ಪಲ್ಯದ ಮೇಲೆ ಏನು ಪರಿಣಾಮವಾಗುತ್ತದೆ ? ಹಾಗೆಯೇ ಆ ತರಕಾರಿಗಳನ್ನು ಬೇಯಿಸಿ ಸೇವಿಸುವುದರಿಂದ ವ್ಯಕ್ತಿಯ ಮೇಲೆ ಏನು ಪರಿಣಾಮ ಆಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಉಪಯೋಗವನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ಬೆಂಡೆಕಾಯಿಗಳನ್ನು ಹೆಚ್ಚುವ ಮೊದಲು ‘ಯು.ಎ.ಎಸ್.’ ಉಪಕರಣದ ಮೂಲಕ ಅವುಗಳ ಪರೀಕ್ಷಣೆಯನ್ನು ಮಾಡಲಾಯಿತು. ಅನಂತರ ಬೆಂಡೆಕಾಯಿಗಳನ್ನು ಓರೆಯಾಗಿ, ಉದ್ದ ಮತ್ತು ವರ್ತುಲಾಕಾರದಲ್ಲಿ ಹೆಚ್ಚಿದ ನಂತರ ಅವುಗಳ ಪರೀಕ್ಷಣೆಯನ್ನು ಮಾಡಲಾಯಿತು. ಮೂರೂ ರೀತಿಯಲ್ಲಿ  ಹೆಚ್ಚಿದ (ತುಂಡುಗಳನ್ನು ಮಾಡಿದ) ಬೆಂಡೆಕಾಯಿ ಪಲ್ಯವನ್ನು ಮಾಡಿದ ನಂತರ ಅವುಗಳ ಪರೀಕ್ಷಣೆಯನ್ನೂ ಮಾಡಲಾಯಿತು.

ಈ ಪರೀಕ್ಷಣೆಯಲ್ಲಿ ಆಧ್ಯಾತ್ಮಿಕ ತೊಂದರೆ ಇರುವ ಸಾಧಕ, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕ ಹೀಗೆ ಒಟ್ಟು ೩ ಜನ ಸಾಧಕರು ಪಾಲ್ಗೊಂಡಿದ್ದರು. ಮೂರೂ ರೀತಿಯಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯಗಳ ಪೈಕಿ ಪ್ರತಿಯೊಂದು ಪ್ರಯೋಗದಲ್ಲಿ ಒಂದು ಪಲ್ಯವನ್ನು ಪರೀಕ್ಷಣೆಯಲ್ಲಿನ ಸಾಧಕರಿಗೆ ಸೇವಿಸಲು ಹೇಳಲಾಯಿತು. ಮೂರೂ ಪ್ರಯೋಗಗಳಲ್ಲಿ ಪಲ್ಯವನ್ನು ಸೇವಿಸುವ ಮೊದಲು ಮತ್ತು ಪಲ್ಯವನ್ನು ಸೇವಿಸಿದ ೨೦ ನಿಮಿಷಗಳ ನಂತರ ಸಾಧಕರ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ಬೆಂಡೆಕಾಯಿಗಳನ್ನು ಓರೆಯಾಗಿ (ಡೊಂಕು), ಉದ್ದ ಮತ್ತು ವರ್ತುಲ ಆಕಾರದಲ್ಲಿ ಹೆಚ್ಚುವುದರಿಂದ ಬೆಂಡೆಕಾಯಿಗಳ ಮೇಲಾಗಿರುವ ಪರಿಣಾಮ

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಬೆಂಡೆಕಾಯಿ ಹೆಚ್ಚುವ ಮೊದಲು ಅವುಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಕೇವಲ ಸಕಾರಾತ್ಮಕ ಊರ್ಜೆ ಇತ್ತು.

೨. ಓರೆಯಾಗಿ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಯಲ್ಲಿ ಸಕಾರಾತ್ಮಕ್ಕಿಂತ ನಕಾರಾತ್ಮಕ ಊರ್ಜೆ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿತು.

೩. ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ, ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೧ ಆ. ಓರೆಯಾಗಿ, ಉದ್ದ ಮತ್ತು ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯವನ್ನು ತಯಾರಿಸಿದ ನಂತರ ಅವುಗಳ ಮೇಲಾದ ಪರಿಣಾಮ

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಓರೆ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು.

೨. ಓರೆಯಾಗಿ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಗಳ ಪಲ್ಯಕ್ಕಿಂತ ವರ್ತುಲ ಆಕಾರದಲ್ಲಿ ಹೆಚ್ಚಿದ ಪಲ್ಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೧ ಇ. ಓರೆಯಾಗಿ, ಉದ್ದ ಮತ್ತು ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯಗಳನ್ನು ಸೇವಿಸಿದ ನಂತರ ಪರೀಕ್ಷಣೆಯಲ್ಲಿ ಸಾಧಕರ ಮೇಲಾದ ಪರಿಣಾಮ

೧ ಇ ೧. ಓರೆಯಾಗಿ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯಗಳನ್ನು ಸೇವಿಸಿದ ನಂತರ ಸಾಧಕರ ಮೇಲೆ ನಕಾರಾತ್ಮಕ ಸ್ಪಂದನಗಳ ಪರಿಣಾಮವಾಯಿತು : ಓರೆಯಾಗಿ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯವನ್ನು ಸೇವಿಸಿದ ನಂತರ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಇಲ್ಲದ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು, ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.

೧ ಇ ೨. ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಪಲ್ಯವನ್ನು ಸೇವಿಸಿದ ನಂತರ ಸಾಧಕರ ಮೇಲೆ ಸಕಾರಾತ್ಮಕ ಸ್ಪಂದನಗಳ ಪರಿಣಾಮವಾಯಿತು : ವರ್ತುಲ ಚಪ್ಪಟೆ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯವನ್ನು ಸೇವಿಸಿದ ನಂತರ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು. ಹಾಗೆಯೇ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಇಬ್ಬರೂ ಸಾಧಕರಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ಹೆಚ್ಚಳವಾಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ತರಕಾರಿಗಳನ್ನು ಸಾತ್ತ್ವಿಕ ಆಕಾರದಲ್ಲಿ ಹೆಚ್ಚುವುದರಿಂದ ಪಲ್ಯಗಳ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ : ಹಿಂದೂ ಧರ್ಮದಲ್ಲಿ ಅಡುಗೆಗೆ ಸಂಬಂಧಿಸಿದ ಆಚಾರಗಳ ಹಿಂದೆ ಅಧ್ಯಾತ್ಮಶಾಸ್ತ್ರವಿದೆ. ತರಕಾರಿಗಳನ್ನು ಸಾತ್ತ್ವಿಕ ಆಕಾರದಲ್ಲಿ ಹೆಚ್ಚುವುದರಿಂದ ತರಕಾರಿಗಳನ್ನು ಹೆಚ್ಚುವ ಪ್ರಕ್ರಿಯೆಯಿಂದ ನಿರ್ಮಾಣವಾಗುವ ರಜ-ತಮಾತ್ಮಕ ಸ್ಪಂದನಗಳ ನಿರ್ಮಿತಿಯು ನಿಲ್ಲುತ್ತದೆ. ಇತ್ತೀಚೆಗೆ ತರಕಾರಿಗಳನ್ನು ಓರೆಯಾಗಿ (ಡೊಂಕು) ಅಥವಾ ಉದ್ದ ಆಕಾರದಲ್ಲಿ ಹೆಚ್ಚುವ ಪದ್ಧತಿಯು ಪ್ರಚಲಿತವಾಗಿವೆ. ಓರೆಯಾಗಿ ಮತ್ತು ಉದ್ದ ಆಕಾರದಲ್ಲಿ ತರಕಾರಿಗಳನ್ನು ಹೆಚ್ಚುವುದರಿಂದ ವಾಯು ಮಂಡಲದಲ್ಲಿನ ತಮೋಗುಣಿ ಲಹರಿಗಳು (ತೊಂದರೆದಾಯಕ ಸ್ಪಂದನಗಳು) ತರಕಾರಿಗಳಲ್ಲಿ ಕೂಡಲೇ ಆಕರ್ಷಿಸುತ್ತವೆ. ಇದರಿಂದಾಗಿ ತರಕಾರಿಗಳು ನಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಳ್ಳುತ್ತವೆ.

೨ ಆ. ಸಾತ್ತ್ವಿಕ ಆಕಾರದಲ್ಲಿ ಹೆಚ್ಚಿದ ತರಕಾರಿಯ ಪಲ್ಯವನ್ನು ಸೇವಿಸಿದರೆ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ : ತರಕಾರಿಗಳನ್ನು ಸಾತ್ತ್ವಿಕ ಆಕಾರದಲ್ಲಿ ಹೆಚ್ಚಿದರೆ ತರಕಾರಿಗಳ ಸಾತ್ತ್ವಿಕತೆಯಲ್ಲಿ ಹೆಚ್ಚಳವಾಗುತ್ತದೆ. ತರಕಾರಿಗಳನ್ನು ಬೇಯಿಸುವಾಗ ಅವುಗಳ ಮೇಲೆ ಅಗ್ನಿಯ ಸಂಸ್ಕಾರವಾಗುವುದರಿಂದ ಅವುಗಳಲ್ಲಿನ ಸಾತ್ತ್ವಿಕತೆಯಲ್ಲಿ ಇನ್ನೂ ಹೆಚ್ಚಳವಾಗುತ್ತದೆ. ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಯ ಪಲ್ಯವನ್ನು ಬೇಯಿಸಿದ ನಂತರ ಅದರಲ್ಲಿನ ಸಕಾರಾತ್ಮಕ ಸ್ಪಂದನಗಳಲ್ಲಿ ಇನ್ನೂ ಹೆಚ್ಚಳವಾಗಿರುವುದು ಪರೀಕ್ಷಣೆಯಲ್ಲಿ ಕಂಡುಬಂದಿತು. ಈ ಪಲ್ಯವನ್ನು ಸೇವಿಸಿದ ನಂತರ ಸಾಧಕರಿಗೆ ‘ತಮ್ಮಲ್ಲಿನ ನಕಾರಾತ್ಮಕ ಸ್ಪಂದನಗಳು ಕಡಿಮೆಯಾಗುವುದು ಮತ್ತು ಅವರಲ್ಲಿ ಸಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುವುದು ಅಥವಾ ಅವುಗಳಲ್ಲಿ ಹೆಚ್ಚಳವಾಗುವುದು’, ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿನ ಲಾಭವಾಯಿತು.

ವರ್ತುಲ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿ ಪಲ್ಯದ ತುಲನೆಯಲ್ಲಿ ಓರೆ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಗಳನ್ನು ಬೇಯಿಸಿದ ನಂತರ ಅವುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಕಂಡುಬಂದವು. ಹಾಗೆಯೇ ಓರೆ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಗಳಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು. ಸಾಧಕರು ಓರೆ ಮತ್ತು ಉದ್ದ ಆಕಾರದಲ್ಲಿ ಹೆಚ್ಚಿದ ಬೆಂಡೆಕಾಯಿಯ ಪಲ್ಯವನ್ನು ಸೇವಿಸಿದ ನಂತರ ಅವರ ನಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳವಾಗಿ ಅವರಲ್ಲಿನ ಸಕಾರಾತ್ಮಕ ಸ್ಪಂದನಗಳು ಕಡಿಮೆಯಾದವು. ಇದರ ಅರ್ಥ ಈ ಪಲ್ಯಗಳನ್ನು ಸೇವಿಸಿದ್ದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗದೇ, ಹಾನಿಯಾಯಿತು. ಸ್ವಲ್ಪದರಲ್ಲಿ ‘ತರಕಾರಿಗಳನ್ನು ಹೆಚ್ಚುವುದು ಈ ಕೃತಿಯು ಪಲ್ಯದ ಮೇಲೆ, ಹಾಗೆಯೇ ಅದನ್ನು ಸೇವಿಸುವವರ ಮೇಲೆ ಎಷ್ಟು ಸೂಕ್ಷ್ಮ ಪರಿಣಾಮವನ್ನು ಮಾಡುತ್ತದೆ’, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ. ಹಾಗೆಯೇ ‘ಹಿಂದೂ ಧರ್ಮದಲ್ಲಿ ಅಡುಗೆ ಕುರಿತು ಹೇಳಿದ ಆಚಾರಗಳು ಎಷ್ಟು ಯೋಗ್ಯ ಮತ್ತು ಪರಿಪೂರ್ಣವಾಗಿವೆ’, ಎಂಬುದೂ ಗಮನಕ್ಕೆ ಬರುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೨.೨೦೨೧)

ವಿ-ಅಂಚೆ ವಿಳಾಸ : [email protected]