ಸಾರ್ವಜನಿಕ ಶ್ರೀ ಗಣೇಶೋತ್ಸವ : ಹೇಗಿರಬಾರದು ಮತ್ತು ಹೇಗಿರಬೇಕು ?

ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು : ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು, ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು, ಮಂಟಪಗಳಲ್ಲಿ ಜೂಜಾಡುವುದು

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರಧಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಪ್ರಾಣಶಕ್ತಿಯನ್ನು ನೀಡು.

ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಿಂದ ಉತ್ತರ ಪೂಜೆಯ ವರೆಗಿನ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ  ಮಾಡಬೇಕು, ಗಣೇಶ ಪೂಜೆಗಾಗಿ ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿರಬೇಕು, ಎಂಬ ಕುರಿತು ವಿವೇಚನೆಯನ್ನು ಈ ಕಿರುಗ್ರಂಥದಲ್ಲಿ ಅರ್ಥಸಹಿತ ಕೊಡಲಾಗಿದೆ.

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು.

ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದ ಕುಂಭಾಶಿಯ ಶ್ರೀ ಮಹಾಗಣಪತಿ !

ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.

ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತರುವ ಪದ್ಧತಿ

ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸಗುಣ ತತ್ತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ತ್ವ ಪ್ರಕ್ಷೇಪಿಸುತ್ತಿರುತ್ತದೆ.

ಶ್ರೀ ಗಣೇಶ ಚತುರ್ಥಿಯ ಸಮಯದಲ್ಲಿ ಬರುವ ವ್ರತಗಳು

ಇದರಲ್ಲಿ ಧಾತುವಿನ (ಲೋಹದ), ಮಣ್ಣಿನ ಪ್ರತಿಮೆಯನ್ನು ಮಾಡಿ ಅಥವಾ ಕಾಗದದ ಮೇಲೆ ಶ್ರೀ ಲಕ್ಷ್ಮೀಯ ಚಿತ್ರವನ್ನು ಬಿಡಿಸಿ, ಮತ್ತೆ ಕೆಲವು ಕಡೆಗಳಲ್ಲಿ ನದಿ ದಡದಿಂದ ಐದು ಸಣ್ಣ ಕಲ್ಲುಗಳನ್ನು ತಂದು ಅವುಗಳನ್ನು ಗೌರಿ ಎಂದು ಪೂಜಿಸುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರು ತಮ್ಮ ೮೦ ನೇ ಜನ್ಮೋತ್ಸವದ ನಿಮಿತ್ತ ಆಚರಿಸಲಾದ ರಥೋತ್ಸವದ ಸಮಯದಲ್ಲಿ ಧರಿಸಿದ ವಸ್ತ್ರಾಲಂಕಾರಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ರೂಪದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರದ ದಿವ್ಯತೆಯನ್ನು ಎಲ್ಲರೂ ಅನುಭವಿಸಬೇಕು’, ಎಂದು ಸಪ್ತರ್ಷಿಗಳು ಈ ಬಾರಿ ರಥೋತ್ಸವವನ್ನು ಆಚರಿಸಲು ಹೇಳಿದರು. ರಥೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳವೇ ಇದರ ಸೂಚಕವಾಗಿದೆ.

ಶ್ರೀಕೃಷ್ಣನು ಪೂರ್ಣಾವತಾರ ಆಗಿರುವುದರ ಉದಾಹರಣೆಗಳು !

ತನ್ನ ೭ ನೇ ವಯಸ್ಸಿನಲ್ಲಿ ಘೋರವಾದ ಪರ್ಜನ್ಯ ವೃಷ್ಟಿಯಿಂದ ವ್ರಜವಾಸಿಗಳಾದ ಗೋಪಸಮಾಜವನ್ನು ಮತ್ತು ಅವರ ಪಶುಧನವನ್ನು ರಕ್ಷಣೆ ಮಾಡಲು ೭ ದಿನಗಳ ವರೆಗೆ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನು ಶಿಲಿಂಧ್ರಪುಷ್ಪದ ಹಾಗೆ ನಿರಾಯಾಸವಾಗಿ ಎತ್ತಿಹಿಡಿದನು.

ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಚರಿತ್ರೆ !

ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ.