ಸಾರ್ವಜನಿಕ ಶ್ರೀ ಗಣೇಶೋತ್ಸವ : ಹೇಗಿರಬಾರದು ಮತ್ತು ಹೇಗಿರಬೇಕು ?

ಉತ್ಸವದಲ್ಲಿ ಯಾವ ಸಂಗತಿಗಳು ಇರಬಾರದು?

ಅಶಾಸ್ತ್ರೀಯ ಮೂರ್ತಿ

ಅ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಗಳು

ಆ. ಚಿತ್ರವಿಚಿತ್ರ ರೂಪದಲ್ಲಿನ ಮೂರ್ತಿಗಳು

ಇ. ದೊಡ್ಡ ಆಕಾರದ ಮೂರ್ತಿಗಳು

ಮೆರವಣಿಗೆಯಲ್ಲಿನ ತಪ್ಪು ಆಚರಣೆಗಳು

ಅ. ಇತರ ವಾಹನಗಳಿಗೆ ಅಡ್ಡಿ ಮಾಡುವ ಮಂದಗತಿಯ ಮೆರವಣಿಗೆ

ಆ. ಒತ್ತಾಯಪೂರ್ವಕವಾಗಿ ಇತರರ ಮೇಲೆ ಗುಲಾಲವನ್ನು ಎರಚುವುದು

ಇ. ಮದ್ಯಪಾನ ಮಾಡಿ ಮೆರವಣಿಗೆ ಅಥವಾ ಮಂಟಪಕ್ಕೆ ಬರುವುದು

ಈ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವುದು

ಉ. ಕಿವಿಗಡಕಚ್ಚುವಷ್ಟು ಪಟಾಕಿಗಳನ್ನು ಸಿಡಿಸುವುದು

ಊ. ರಾತ್ರಿ ೧೦ ಗಂಟೆಯ ನಂತರ ಮೂರ್ತಿವಿಸರ್ಜನೆ ಮಾಡುವುದು.

ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು

ಅ. ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು

ಆ. ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು

ಇ. ಮಂಟಪಗಳಲ್ಲಿ ಜೂಜಾಡುವುದು

ವ್ಯಾಪಾರದ ಉದ್ದೇಶದಿಂದ ಮಾಡಿದ ಜಾಹೀರಾತುಗಳಿಂದ ಆಗುವ ವಿಡಂಬನೆ

ಉದಾ.‘ಝಂಡು ಬಾಮ್ ಹಚ್ಚುವ’, ‘ಸ್ಕೂಟರಿನ ಮೇಲೆ ಸವಾರಿ ಮಾಡುವ’ ಗಣೇಶನನ್ನು ತೋರಿಸುವುದು.

ಉತ್ಸವದಲ್ಲಿ ಯಾವ ಸಂಗತಿಗಳು ಇರಬೇಕು?

ಮೂರ್ತಿಶಾಸ್ತ್ರಕ್ಕನುಸಾರ ಮೂರ್ತಿಗಳ ಸ್ಥಾಪನೆ

ಪೂಜೆಯ ಸ್ಥಳದಲ್ಲಿ ಹಾಗೂ ಉತ್ಸವ ಮಂಟಪದಲ್ಲಿ ಶಿಸ್ತು ಮತ್ತು ಪಾವಿತ್ರ್ಯ

ಧಾರ್ಮಿಕ ವಿಧಿ ಹಾಗೂ ದೇವತೆಗಳ ಅಧ್ಯಾತ್ಮಶಾಸ್ತ್ರದ ಅರ್ಥವನ್ನು ತಿಳಿದುಕೊಂಡು ಉತ್ಸವದ ಎಲ್ಲ ಕಾರ್ಯಗಳನ್ನು ಸೇವೆಯೆಂದು ಮಾಡುವ ಕಾರ್ಯಕರ್ತರು

ಸಮಾಜಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯಕ್ರಮಗಳು

ಅ. ಪ್ರವಚನಗಳು

೧. ಧರ್ಮ, ಸಾಧನೆ, ಗುರು, ಶಿಷ್ಯ ಇತ್ಯಾದಿ ಆಧ್ಯಾತ್ಮಿಕ ಪ್ರವಚನಗಳು

೨. ಭ್ರಷ್ಟಾಚಾರ, ಜಾತೀವಾದ, ಭಯೋತ್ಪಾದನೆ, ಪ್ರಾಂತೀಯವಾದ ಮುಂತಾದವುಗಳ ವಿರುದ್ಧ ಜನತೆಗೆ ಅರಿವು ಮಾಡಿಕೊಡುವ ಪ್ರವಚನಗಳು

೩. ಗುಟಕಾ, ತಂಬಾಕು, ಸಾರಾಯಿ,  ಏಡ್ಸ್ ಇತ್ಯಾದಿಗಳ ಬಗ್ಗೆ ಜನಜಾಗೃತಿಯನ್ನು ಉಂಟುಮಾಡುವ ವ್ಯಾಖ್ಯಾನಗಳು

ಆ. ಸಂಗೀತ ಮತ್ತು ಭಜನೆಗಳು: ವೀರಗೀತೆಗಳು, ಶಾಸ್ತ್ರೀಯ ಸಂಗೀತ ಮತ್ತು ಸಂತರ ಭಜನೆಗಳ ಕಾರ್ಯಕ್ರಮ

ಇ. ನಾಟಕ ಮತ್ತು ಬೀದಿನಾಟಕ: ದೇಶಭಕ್ತಿ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಆಧಾರಿತ ನಾಟಕ ಮತ್ತು ಬೀದಿನಾಟಕಗಳು