ವಾತಾವರಣದಲ್ಲಿ ಸಾಮಾನ್ಯ ಆಕಾಶದೀಪದಿಂದ ಬಹಳಷ್ಟು ನಕಾರಾತ್ಮಕ ಸ್ಪಂದನಗಳು ಮತ್ತು ಸನಾತನ-ನಿರ್ಮಿತ ಆಕಾಶದೀಪದಿಂದ ಬಹಳಷ್ಟು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಸಾಮಾನ್ಯ ಆಕಾಶದೀಪ ಮತ್ತು ‘ಸನಾತನ-ನಿರ್ಮಿತ ಆಕಾಶದೀಪ ಇವುಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ಅಸಾತ್ತ್ವಿಕ ರಂಗೋಲಿಯಿಂದ ಬಹಳ ನಕಾರಾತ್ಮಕ ಸ್ಪಂದನಗಳು ಮತ್ತು ಸಾತ್ತ್ವಿಕ ರಂಗೋಲಿಯಿಂದ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು !

ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳು, ಹಾಗೆಯೇ ವಿಧಿಗಳು ಯಾವುದಾದರೊಂದು ದೇವತೆಗಳೊಂದಿಗೆ ಸಂಬಂಧಿಸಿರುತ್ತದೆ. ಆಯಾ ಹಬ್ಬದ ದಿನ ಅಥವಾ ವಿಧಿಗಳ ದಿನದಂದು ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ ಅಥವಾ ವಿಧಿಗಳಿಂದಾಗಿ ಅಲ್ಲಿ ಆಕರ್ಷಿತವಾಗುತ್ತದೆ. ಆ ತತ್ತ್ವವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂದು ಎಲ್ಲರಿಗೂ ಲಾಭವಾಗಬೇಕೆಂದು, ಆ ತತ್ತ್ವಗಳನ್ನು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿರಿ.

ವಿದ್ಯುತ್ ತಂಪುಪೆಟ್ಟಿಗೆಯ ತುಲನೆಯಲ್ಲಿ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಟ್ಟಿದ್ದ ಆಹಾರದಿಂದ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಬಹಳ ಹೆಚ್ಚು ಪ್ರಕ್ಷೇಪಿತವಾಗುವುದು

‘ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಮಣ್ಣಿನ ತಂಪು ಪೆಟ್ಟಿಗೆಗಳನ್ನು (ಟಿಪ್ಪಣಿ) ಉಪಯೋಗಿಸುತ್ತಿದ್ದರು. ಇದರಿಂದ ಆಹಾರಪದಾರ್ಥಗಳು ಸ್ಥೂಲದಲ್ಲಿ ಉತ್ತಮವಾಗಿ ಉಳಿದು ಅವುಗಳಲ್ಲಿ ಸಾತ್ತ್ವಿಕತೆಯೂ ಉಳಿಯುತ್ತಿತ್ತು. ನೈಸರ್ಗಿಕ ಪದ್ಧತಿಯಿಂದ ಉಳಿಸಿಡಲಾದ ಆಹಾರ ಪದಾರ್ಥಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಸೇವಿಸುವವರಿಗೆ ಅವುಗಳಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿತ್ತು.

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಇತರ ವೃಕ್ಷಗಳಿಗೆ ಹೋಲಿಸಿದರೆ ಮಂದಾರದ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಿರುತ್ತದೆ. ಈ ಎಲೆಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅವುಗಳಲ್ಲಿದ್ದ ತೇಜತತ್ತ್ವ ಕಾರ್ಯನಿರತವಾಗಲು ಪ್ರಾರಂಭವಾಗುತ್ತದೆ. ಎಲೆಗಳಿಂದ ಪ್ರಕ್ಷೇಪಿಸುವ ತೇಜೋಲಹರಿಗಳು ವಾತಾವರಣದಲ್ಲಿ ದೀರ್ಘಕಾಲ ಉಳಿಯುತ್ತವೆ.’

ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

‘ಔಷಧಿಗಳ ಮೇಲೆ ತುಳಸಿ ದಳವನ್ನು ಇಟ್ಟರೆ ಅವುಗಳ ಮೇಲೆ (ಔಷಧಿಗಳ ಮೇಲೆ) ಏನು ಪರಿಣಾಮವಾಗುತ್ತದೆ?, ಎನ್ನುವುದನ್ನು ಅಧ್ಯಯನ ಮಾಡಲು ಎಪ್ರಿಲ್ ೨೦೨೦ ರಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ‘ತುಳಸಿ ದಳಗಳನ್ನು ಇಡುವುದರಿಂದ ಔಷಧಿಗಳಲ್ಲಿ ಸಕಾರಾತ್ಮಕ ಶಕ್ತಿ ನಿರ್ಮಾಣವಾಗುತ್ತದೆ ಎನ್ನುವುದನ್ನು ಕೂಡ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆಯಿಂದ ಮಂಡಿಸಿದ್ದಾರೆ.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.

ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಚ್ಚಿನ ಜನರು ಉಪವಾಸವನ್ನು ಮಾಡುತ್ತಾರೆ. ಒಂಬತ್ತು ದಿನಗಳು ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರಥಮ ದಿನ ಹಾಗೂ ಅಷ್ಟಮಿಯಂದು ಉಪವಾಸವನ್ನು ಅವಶ್ಯವಾಗಿ ಮಾಡುತ್ತಾರೆ. ದೇವಿ ಉಪಾಸನೆಯ ಇತರ ಭಾಗಗಳೊಂದಿಗೆ ನವರಾತ್ರಿಯ ಕಾಲಾವಧಿಯಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂದು ಜಪಿಸಬೇಕು.

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಈ ಅಗ್ನಿ ನೈಸರ್ಗಿಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿಸಲ್ಪಡುವ ಸೂಕ್ಷ್ಮ ತೇಜದಾಯಕ ಲಹರಿಗಳು ಸೂಕ್ಷ್ಮ ಸ್ತರದಲ್ಲಿರುವ ರಜ-ತಮಾತ್ಮಕ ಕಣಗಳನ್ನು ವಿಘಟಿತಗೊಳಿಸಬಲ್ಲವು. ಒಲೆಯ ಮೇಲಿನ ಅಡುಗೆಯನ್ನು ತಯಾರಿಸುವಾಗ ಆಹಾರದ ಮೇಲೆ ಅಗ್ನಿಯ ಸಂಸ್ಕಾರವಾಗಿ ಸಾತ್ತ್ವಿಕ ಆಹಾರ ತಯಾರಾಗುತ್ತದೆ. ಇದರದೇ ಅನುಭವವು ಪರೀಕ್ಷಣೆಯಲ್ಲಿ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಕಂಡು ಬಂದಿತು. ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪವೂ ನಕಾರಾತ್ಮಕ ಸ್ಪಂದನಗಳು ಇರಲಿಲ್ಲ ಹಾಗೂ ಬಹಳ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು.