ಪಾಪನಾಶಕ್ಕೆ ಪ್ರಾಯಶ್ಚಿತ್ತ ಮತ್ತು ನಾಮಜಪ

ಜೀವದಿಂದ ಏನಾದರೊಂದು ಪಾಪಕರ್ಮವು ಘಟಿಸಿದರೆ ಅವನು ಬ್ರಾಹ್ಮಣರಲ್ಲಿ ವಿಚಾರಿಸಿಕೊಂಡು ಅದರ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿರುತ್ತಾನೆ. ಸತತವಾಗಿ ಪ್ರಾಯಶ್ಚಿತ್ತಗಳನ್ನ್ನು ತೆಗೆದುಕೊಳ್ಳುತ್ತಾ ಹೋದರೆ ಅವನಲ್ಲಿ ಪಾಪ-ಪುಣ್ಯದ ಕಲ್ಪನೆಯು ದೃಢವಾಗುತ್ತಾ ಹೋಗುತ್ತದೆ. ಸತ್ಸಂಗದಲ್ಲಿ ಹಾಗೆ ಆಗುವುದಿಲ್ಲ; ಏಕೆಂದರೆ ಧರ್ಮಾಚರಣೆ ಮಾಡುವವನು ಸತ್ಸಂಗದಲ್ಲಿ ಬಂದ ಕೂಡಲೇ ಭಕ್ತನಾಗುತ್ತಾನೆ ಆಮೇಲೆ ಅವನಿಂದ ಪಾಪಗಳೇ ಆಗುವುದಿಲ್ಲ. ಒಂದು ವೇಳೆ ಪ್ರಾರಬ್ಧದಿಂದಾಗಿ ಯಾವುದಾದರೊಂದು ಪಾಪವು ಘಟಿಸಿದರೂ ಅವನು ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳುತ್ತಾ ಕುಳಿತುಕೊಳ್ಳುವುದಿಲ್ಲ, ಮತ್ತೆ ನಾಮಸ್ಮರಣೆಯಲ್ಲಿ ಮಗ್ನನಾಗುತ್ತಾನೆ. ಯಾವುದಾದರೊಂದು ಪಾಪವು ಘಟಿಸಿದರೆ ನಾಮಸ್ಮರಣೆಯಿಂದ ದೂರವಾಗುತ್ತದೆ. ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ಕೇವಲ ಪಾಪದ ನಾಶವಾಗುತ್ತದೆ, ಆದರೆ ಪಾಪ ಮಾಡುವ ವಾಸನೆಯು ನಾಶವಾಗುವುದಿಲ್ಲ. ಮುಮುಕ್ಷತ್ವ ಪ್ರಾಪ್ತವಾದೊಡನೆ ನಾಮದಿಂದ ವಾಸನಾನಾಶ ಮತ್ತು ಪಾಪನಾಶ ಇವೆರಡೂ ಆಗುತ್ತವೆ.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಪುಣ್ಯ-ಪಾಪ ಮತ್ತು ಪಾಪದ ಪ್ರಾಯಶ್ಚಿತ್ತ’)