ಪರಾತ್ಪರ ಗುರು ಡಾಕ್ಟರ ಇವರನ್ನು ಸ್ಥೂಲಕ್ಕಿಂತ ಸೂಕ್ಷ್ಮದಲ್ಲಿ ಅನುಭವಿಸುವುದರಿಂದಾಗುವ ಲಾಭ
ಯಾವ ಸಾಧಕರು ನನ್ನನ್ನು ಸ್ಥೂಲದಲ್ಲಿ ನೋಡುತ್ತಾರೋ, ಅವರಿಗೆ ನಾನು ಕೆಲವೇ ಗಂಟೆಗಳ ತನಕ ಅವರೊಂದಿಗಿರುವ ಅನುಭವವಾಗುತ್ತದೆ, ಯಾವ ಸಾಧಕರು ನನ್ನನ್ನು ಸೂಕ್ಷ್ಮದಲ್ಲಿ ಅನುಭವಿಸಲು ಪ್ರಯತ್ನಿಸುತ್ತಾರೆಯೋ ಅವರಿಗೆ ನಾನು ೨೪ ಗಂಟೆಗಳ ಕಾಲ ಅವರೊಂದಿಗಿರುವ ಅನುಭವವಾಗುತ್ತದೆ.
ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !
ಗಣೇಶಸ್ತೋತ್ರದ ಪಠಣ ಮಾಡಿದರೆ ಜ್ಞಾಪಕಶಕ್ತಿಯು ಬೆಳೆಯುತ್ತದೆ ಮತ್ತು ಶರೀರದ ಸುತ್ತಲು ಸೂಕ್ಷ್ಮ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ. ಸ್ತೋತ್ರದಲ್ಲಿನ ಸಂಸ್ಕೃತ ಭಾಷೆಯಿಂದಾಗಿ ಉಚ್ಚಾರವೂ ಸುಧಾರಿಸುತ್ತದೆ. ಇದಕ್ಕಾಗಿ ಪ್ರತಿನಿತ್ಯ ಗಣೇಶಸ್ತೋತ್ರದ ಪಠಣ ಮಾಡಿರಿ ಮತ್ತು ಮಕ್ಕಳಿಂದ ಮಾಡಿಸಿಕೊಳ್ಳಿ !
ಶ್ರೀಗಣೇಶ ಮೂರ್ತಿಯ ಅಲಂಕಾರ ಹೀಗಿರಲಿ !
ಗಣೇಶತತ್ತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಎಂದರೆ ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು ಶ್ರೀಗಣೇಶನತತ್ತ್ವವನ್ನು ಆಕರ್ಷಿಸುವ ರಂಗೋಲಿ ಶ್ರೀಗಣೇಶನ ಸಾತ್ತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿಗಳನ್ನು ಬಳಸಬೇಕು.
ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ
ದೂಃಅವಮ್ ಹೀಗೆ ದೂರ್ವೆ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕ ಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದೇ ದೂರ್ವೆ.
ಶ್ರೀ ಗಣೇಶನಿಗೆ ಕೆಂಪು ಬಣ್ಣದ ವಸ್ತುಗಳನ್ನೇಕೆ ಅರ್ಪಿಸುತ್ತಾರೆ ?
ದಾಸವಾಳ ಹೂವಿನಲ್ಲಿರುವ ವರ್ಣಕಣ ಮತ್ತು ಗಂಧಕಣಗಳಿಂದಾಗಿ ಬ್ರಹ್ಮಾಂಡ ಮಂಡಲದಲ್ಲಿನ ಗಣೇಶ ತತ್ತ್ವದ ಪವಿತ್ರಕಗಳು ಹೂವಿನ ಕಡೆಗೆ ಆಕರ್ಷಿಸುತ್ತವೆ.
ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಯಾವ ಪ್ರಕಾರ ಮಾಡಬೇಕು ?
ಶ್ರೀ ಗಣಪತಿಯ ನಾಮಜಪವನ್ನು ಮಾಡುವುದರಿಂದ ಚತುರ್ಥಿಯ ಸಮಯದಲ್ಲಿ ನಮಗೆ ಗಣೇಶತತ್ವದ ಲಾಭವು ಪ್ರಾಪ್ತವಾಗುತ್ತದೆ.
ಗಣೇಶೋತ್ಸವದ ನಿಮಿತ್ತ ಊರಿಗೆ ಹೋಗುವಾಗ, ಹಾಗೇ ಇತರ ಸಮಯಗಳಲ್ಲಿ ಪ್ರಯಾಣ ಮಾಡುವಾಗ, ಸನಾತನದ ಗ್ರಂಥಗಳು, ಕಿರುಗ್ರಂಥಗಳು ಜೊತೆಗಿಟ್ಟುಕೊಳ್ಳಿ ಮತ್ತು ಅವುಗಳ ಪ್ರಸಾರ ಮಾಡಿ !
ಪ್ರಯಾಣದ ಸಮಯದಲ್ಲಿ ತಮ್ಮ ಬಳಿ ಗ್ರಂಥಗಳು, ಕಿರುಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ನ ಪತ್ರಿಕೆಗಳನ್ನು ಇಟ್ಟುಕೊಳ್ಳಿ !
ಶ್ರೀ ಗಣೇಶ ಚತುರ್ಥಿಯ ಸಮಯದಲ್ಲಿ ಬರುವ ವ್ರತಗಳು
ಗೌರಿಯ ಸ್ಥಾಪನೆ ಮಾಡಿದ ನಂತರ ಮರುದಿನ ಅವಳ ಪೂಜೆಯನ್ನು ಮಾಡಿ ನೈವೇದ್ಯವನ್ನು ತೋರಿಸುತ್ತಾರೆ.