‘ದೇವಸ್ಥಾನಗಳಲ್ಲಿ ಭಕ್ತರು ಭಕ್ತಿಭಾವದಿಂದ ದೇವರ ದರ್ಶನವನ್ನು ತೆಗೆದುಕೊಳ್ಳುತ್ತಾರೆ. ದೇವಸ್ಥಾನದ ಅರ್ಚಕರು ಕೆಲವೊಮ್ಮೆ ಭಕ್ತರಿಗೆ ಪ್ರಸಾದ ವೆಂದು ಕೆಲವು ವಸ್ತುಗಳನ್ನು ನೀಡುತ್ತಾರೆ, ಉದಾ. ದೇವರಿಗೆ ಅರ್ಪಿಸಿದ ಮಾಲೆ, ವಸ್ತ್ರಗಳು ಇತ್ಯಾದಿ. ದೇವರಿಗೆ ಅರ್ಪಿಸಿದ ವಸ್ತುಗಳಲ್ಲಿ ಚೈತನ್ಯವಿರುತ್ತದೆ. ಆದುದರಿಂದ ಆ ವಸ್ತುಗಳನ್ನು ಹತ್ತಿರವಿಟ್ಟುಕೊಂಡರೆ ಭಕ್ತರಿಗೆ ಚೈತನ್ಯ ಸಿಗುತ್ತದೆ. ಪ್ರಸ್ತುತ, ವಾತಾವರಣವು ಬಹಳ ರಜ-ತಮಪ್ರಧಾನವಾಗಿದೆ. ಆದುದರಿಂದ ಚೈತನ್ಯಮಯ ವಸ್ತುಗಳ ಮೇಲೆ ರಜ-ತಮದ ಆವರಣ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಆದುದರಿಂದ ಯಾವುದೇ ವಸ್ತುವನ್ನು ಬಳಸುವ ಮೊದಲು ಅದರ ಮೇಲೆ ತೊಂದರೆದಾಯಕ ಆವರಣ ಇಲ್ಲವಲ್ಲ ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
೧. ವಸ್ತುಗಳ ಮೇಲೆ ಆವರಣ ಬಂದಿರುವುದನ್ನು ಹೇಗೆ ಗುರುತಿಸಬೇಕು ?
ವಸ್ತುವನ್ನು ಕೈಯಲ್ಲಿ ಹಿಡಿದಾಗ ‘ಮನಸ್ಸಿಗೆ ಏನೆನಿಸುತ್ತದೆ ?’, ಎಂಬುದನ್ನು ಅಧ್ಯಯನ ಮಾಡಬೇಕು. ವಸ್ತುವನ್ನು ಕೈಯಲ್ಲಿ ಹಿಡಿದಾಗ ಮನಸ್ಸಿಗೆ ತೊಂದರೆಯೆನಿಸಿದರೆ, ‘ವಸ್ತುವಿನ ಮೇಲೆ ಆವರಣವಿದೆ’, ಎಂದು ತಿಳಿಯಬೇಕು. ವಸ್ತುವನ್ನು ಕೈಯಲ್ಲಿ ಹಿಡಿದಾಗ ಮನಸ್ಸಿಗೆ ಒಳ್ಳೆಯ ಸ್ಪಂದನಗಳ ಅರಿವಾದರೆ ‘ವಸ್ತು ಗಳ ಮೇಲೆ ಆವರಣವಿಲ್ಲ’, ಎಂದು ತಿಳಿಯಬೇಕು. ಕೆಲವೊಮ್ಮೆ ಮನಸ್ಸಿಗೆ ತೊಂದರೆದಾಯಕ ಮತ್ತು ಒಳ್ಳೆಯ ಹೀಗೆ ಎರಡೂ ವಿಧದ ಸ್ಪಂದನಗಳ ಅರಿವಾಗುತ್ತದೆ. ಇಂತಹ ಸಮಯದಲ್ಲಿಯೂ ‘ವಸ್ತುಗಳ ಮೇಲೆ ಆವರಣವಿದೆ’, ಎಂದು ತಿಳಿಯಬೇಕು.
೨. ವಸ್ತುಗಳ ಶುದ್ಧಿ ಮಾಡಿದ ನಂತರ ಅದರಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲದಂತಾಗುವುದು
ಜುಲೈ ೨೦೨೩ ರಲ್ಲಿ ಓರ್ವ ಭಕ್ತನಿಗೆ ಶಿವಲಿಂಗಕ್ಕೆ ಅರ್ಪಿಸಿದ ರುದ್ರಾಕ್ಷಿಯ ಮಾಲೆಗಳು ಪ್ರಸಾದವೆಂದು ದೊರಕಿತ್ತು. ಅವರು ಆ ಮಾಲೆಗಳನ್ನು ಪ್ರೀತಿಯಿಂದ ಒಂದು ಆಧ್ಯಾತ್ಮಿಕ ಸಂಸ್ಥೆಗೆ ಉಡುಗೊರೆಯಾಗಿ ನೀಡಿದರು. ಆ ಮಾಲೆಗಳನ್ನು ಕೈಯಲ್ಲಿ ತೆಗೆದುಕೊಂಡಾಗ ಅವುಗಳ ಮೇಲೆ ತೊಂದರೆದಾಯಕ ಆವರಣವಿರುವುದು ಅರಿವಾಯಿತು. ಈ ಮಾಲೆಗಳ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣ ಮತ್ತು ಲೋಲಕದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಇದರಿಂದ ಮಾಲೆಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಮತ್ತು ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು. ಈ ಮಾಲೆಗಳ ಮೇಲೆ ಲೋಲಕವನ್ನು ಹಿಡಿದಾಗ ಅದು ಮಾಲೆಗಳಲ್ಲಿ ನಕಾರಾತ್ಮಕ ಸ್ಪಂದನಗಳಿರುವುದಾಗಿ ತೋರಿಸಿತು. ಅನಂತರ ಈ ಮಾಲೆಗಳ ಶುದ್ಧಿಯನ್ನು (ಟಿಪ್ಪಣಿ) ಮಾಡಿ ಪುನಃ ಅವುಗಳ ಪರೀಕ್ಷಣೆಯನ್ನು ಮಾಡಿದಾಗ ಆ ಮಾಲೆಗಳಲ್ಲಿನ ನಕಾರಾತ್ಮಕ ಊರ್ಜೆಯು ಇಲ್ಲದಂತಾಗಿ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯು ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ಈ ಮಾಲೆಗಳ ಮೇಲೆ ಲೋಲಕವನ್ನು ಹಿಡಿದಾಗ ಅದು ಮಾಲೆಗಳಲ್ಲಿ ಸಕಾರಾತ್ಮಕ ಸ್ಪಂದನಗಳಿರುವುದು ತೋರಿಸಿತು.
(ಟಿಪ್ಪಣಿ – ವಸ್ತುಗಳ ಶುದ್ಧಿ ಮಾಡುವುದು ಎಂದರೆ ಅದರ ಮೇಲಿನ ತೊಂದರೆದಾಯಕ ಆವರಣವನ್ನು ತೆಗೆಯುವುದು. ಆವರಣವನ್ನು ತೆಗೆಯುವ ವಿವಿಧ ಪದ್ಧತಿಗಳಿವೆ, ಉದಾ. ವಸ್ತುಗಳನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಇಡುವುದು, ವಸ್ತುವಿಗೆ ಸಾತ್ತ್ವಿಕ ಊದುಬತ್ತಿಯ ಹೊಗೆ ತೋರಿಸುವುದು, ವಸ್ತುವಿನ ದೃಷ್ಟಿಯನ್ನು ತೆಗೆಯುವುದು, ಇತ್ಯಾದಿ.)
‘ವಸ್ತುವಿನ ಛಾಯಾಚಿತ್ರದ ಮೇಲಿನ ಆವರಣವನ್ನು ತೆಗೆದರೆ ಅದರಿಂದ ಪ್ರಕ್ಷೇಪಣೆ ಯಾಗುವ ಸ್ಪಂದನಗಳಲ್ಲಿ ಏನಾದರೂ ಬದಲಾವಣೆ ಯಾಗುತ್ತದೆಯೇ ?’, ಎಂಬುದರ ಅಧ್ಯಯನ ಮಾಡಲು ನಮಗೆ ಒಂದು ಪ್ರಯೋಗವು ಹೊಳೆಯಿತು. ಇದರಲ್ಲಿ ಸಾಧಕನು ನಾಮಜಪವನ್ನು ಮಾಡುತ್ತಾ, ಕೈಯಿಂದ ಸುಮಾರು ೩ ರಿಂದ ೫ ನಿಮಿಷಗಳ ಕಾಲ ಮಾಲೆಗಳ ಛಾಯಾಚಿತ್ರಗಳ ಮೇಲಿನ ಆವರಣವನ್ನು ತೆಗೆದನು. ಹೀಗೆ ಮಾಡಿದಾಗ ಅದರಿಂದ ಪ್ರಕ್ಷೇಪಣೆಯಾಗುವ ನಕಾರಾತ್ಮಕ ಸ್ಪಂದನಗಳು ಇಲ್ಲದಂತಾಗಿ ಅದರಲ್ಲಿನ ಸಕಾರಾತ್ಮಕ ಸ್ಪಂದನಗಳಲ್ಲಿ ಬಹಳ ಹೆಚ್ಚಳವಾಯಿತು ಎಂಬುದು ನಮ್ಮ ಗಮನಕ್ಕೆ ಬಂದಿತು.
– ಸೌ. ಮಧುರಾ ಕರ್ವೆ, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ
ವಿ – ಅಂಚೆ : [email protected]
ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿರುತ್ತವೆ. ‘ಅಥರ್ವ ವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯ ಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಇದರ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಸೂಕ್ಷ್ಮ ಪರೀಕ್ಷಣೆ: ಒಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಅರಿವಾಗುವುದನ್ನು ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ. ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇದ್ದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿದ್ದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಈ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. |