ಮಹಾಗಣಪತಿಯ ಭಾವಾರ್ಥ

ಜಗತ್ತಿನ ಉತ್ಪತ್ತಿಯಾಗುವ ಮೊದಲು ಗಣೇಶತತ್ತ್ವವು ನಿರ್ಗುಣ ಸ್ವರೂಪದಲ್ಲಿತ್ತು. ಆದ್ದರಿಂದ ಈ ಮಹದಾಕಾರದ ತತ್ತ್ವಕ್ಕೆ ‘ಮಹಾಗಣಪತಿ’ ಎಂದು ಹೇಳುತ್ತಾರೆ. ಮಹಾಗಣಪತಿಯ ವ್ಯಾಪ್ತಿಯು ಎಷ್ಟಿದೆ ? ಅವನು ಚಂದ್ರ ಅಂದರೆ ತಲೆ, ಪೃಥ್ವಿ ಅಂದರೆ ಹೊಟ್ಟೆ ಮತ್ತು ಸಪ್ತಪಾತಾಳ ಅಂದರೆ ಕಾಲುಗಳಾಗಿವೆ. ಈ ರೀತಿ ಮಹಾಗಣಪತಿಯು ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾರೆ. ಅಂದರೆ ಸಂಪೂರ್ಣ ಬ್ರಹ್ಮಾಂಡವೇ ಮಹಾಗಣಪತಿ ಯಲ್ಲಿ ತುಂಬಿಹೋಗಿದೆ. ಶ್ರೀವಿಷ್ಣು, ಭಗವಾನ ಶಂಕರ ಈ ತ್ರಿದೇವರು ಉಪಾಸನೆ ಮಾಡಿದ ಆ ಮಹಾಗಣಪತಿಯನ್ನು ಗಣೇಶ ಚತುರ್ಥಿಯ ನಿಮಿತ್ತ ನಾವು ಸಹ ಉಪಾಸನೆ ಮಾಡೋಣ.