‘ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಇರುವ ಮತ್ತು ಭದ್ರಾ (ಟಿಪ್ಪಣಿ) ರಹಿತ ಶ್ರಾವಣ ಹುಣ್ಣಿಮೆಯಂದು ಮಧ್ಯಾಹ್ನ ಅಥವಾ ಪ್ರದೋಷಕಾಲದಲ್ಲಿ ರಕ್ಷಾಬಂಧನವನ್ನು ಮಾಡಬೇಕು’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
ಟಿಪ್ಪಣಿ – ‘ವಿಷ್ಟಿ’ ಹೆಸರಿನ ಕರಣಕ್ಕೆ ಭದ್ರಾ ಎಂದು ಹೇಳುತ್ತಾರೆ. ಕರಣ ಅಂದರೆ ತಿಥಿಯ ಅರ್ಧ ಭಾಗ. ಭದ್ರಾ ಕರಣವು ಅಶುಭವೆಂದು ನಂಬಲಾಗುತ್ತದೆ.
ಅ. ೩೧.೮.೨೦೨೩ ರಂದು ಹುಣ್ಣಿಮೆ ತಿಥಿಯು ಬೆಳಗ್ಗೆ ೭.೦೬ ಗಂಟೆಗೆ ಮುಕ್ತಾಯವಾಗುತ್ತದೆ. ಅದು ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಸಮಯ ಇಲ್ಲ; ಆದುದರಿಂದ ೩೧.೮.೨೦೨೩ ರಂದು ರಕ್ಷಾಬಂಧನವನ್ನು ಮಾಡಲು ಬರುವುದಿಲ್ಲ.
ಆ. ೩೦.೮.೨೦೨೩ ರಂದು ಬೆಳಗ್ಗೆ ೧೦.೫೯ ಗಂಟೆಗೆ ಹುಣ್ಣಿಮೆ ಆರಂಭವಾಗುತ್ತದೆ. ಈ ದಿನ ಭದ್ರಾಕಾಲವು ಬೆಳಗ್ಗೆ ೧೦.೫೯ ರಿಂದ ರಾತ್ರಿ ೯.೦೨ ಈ ಕಾಲಾವಧಿಯಲ್ಲಿರುವುದರಿಂದ ಈ ಸಮಯದಲ್ಲಿಯೂ ರಕ್ಷಾಬಂಧನವನ್ನು ಮಾಡಸಲು ಬರುವುದಿಲ್ಲ.
ಇ. ಹೀಗಿರುವಾಗ ಭದ್ರಾಕಾಲದ ‘ಭದ್ರಾಪುಚ್ಛ’ ಈ ಮುಹೂರ್ತದಿಂದ ಈ ಸಮಸ್ಯೆಯನ್ನು ದೂರ ಮಾಡಬಹುದು. ಮುಹೂರ್ತ ಗ್ರಂಥಗಳಲ್ಲಿ ‘ಭದ್ರಾಕಾಲದಲ್ಲಿ ಭದ್ರಾಪುಚ್ಛವನ್ನು ಪ್ರಸಂಗವಿಶೇಷ ಶುಭ’ವೆಂದು ತಿಳಿಯಬೇಕೆಂದು ಬರೆಯಲಾಗಿದೆ.
ಈ. ೩೦.೮.೨೦೨೩ ರಂದು ಭದ್ರಾಪುಚ್ಛದ ಸಮಯ ಸಂಜೆ ೫.೧೮ ರಿಂದ ೬.೩೦ ಎಂದಿದೆ. ಆದುದರಿಂದ ಈ ಸಮಯದಲ್ಲಿ ರಕ್ಷಾಬಂಧನವನ್ನು ಮಾಡಬೇಕು.’
– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೮.೨೦೨೩)