‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಮಹರ್ಷಿಗಳ ಆಜ್ಞೆಯಿಂದ ಮೇ ೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ಸುದರ್ಶನಯಾಗ (೧೯.೫.೨೦೨೨), ಮೃತ್ಯುಂಜಯಯಾಗ (೨೦.೫.೨೦೨೨), ಶ್ರೀ ಬಗಲಾಮುಖಿಯಾಗ (೨೪.೫.೨೦೨೨), ಶ್ರೀ ಪ್ರತ್ಯಂಗಿರಾಯಾಗ (೨೫.೫.೨೦೨೨) ಮತ್ತು ಶ್ರೀ ಚಂಡಿಯಾಗ (೨೬ ಮತ್ತು ೨೭.೫.೨೦೨೨)ಗಳನ್ನು ಮಾಡಲಾಯಿತು. ಹಾಗೆಯೇ ೨೦.೫.೨೦೨೨ ರಂದು ಸಂತರ (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ) ಹಸ್ತದಿಂದ ಶ್ರೀ ಕಾರ್ತಿಕೇಯ ಮತ್ತು ಶ್ರೀ ಸಿದ್ಧಿವಿನಾಯಕ ಈ ದೇವತೆಗಳ ಮೂರ್ತಿಗಳಿಗೆ ಅಭಿಷೇಕವನ್ನು ಮಾಡಲಾಯಿತು. ಸನಾತನದ ಆಶ್ರಮದಲ್ಲಿ ನಡೆದ ಯಾಗಗಳಿಗೆ ಸಂಬಂಧಿಸಿದಂತೆ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಸಂಶೋಧನೆಯನ್ನು ಮಾಡಲಾಯಿತು. ಅದನ್ನು ಮುಂದೆ ನೀಡಲಾಗಿದೆ. ೨೪/೪೭ ನೇ ಸಂಚಿಕೆಯ ಲೇಖನದಲ್ಲಿ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಓದಿದೆವು. ಇಂದು ಈ ಲೇಖನದ ಕೊನೆಯ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ. |
೧ ಇ. ಮಹರ್ಷಿಗಳು ಮೂರೂ ಗುರುಗಳ ರಕ್ಷಣೆಗಾಗಿ ಅವರ ಕೋಣೆಗಳಲ್ಲಿ ಇಡಲು ನೀಡಿದ ಅರಿಶಿಣದ ಗಡ್ಡೆಗಳು ಯಾಗಗಳಲ್ಲಿನ ಚೈತನ್ಯದಿಂದ ಭರಿತವಾಗುವುದು : ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾನ ಕಾರ್ಯದಲ್ಲಿ ಅಡಚಣೆಗಳನ್ನು ತರಲು ದೊಡ್ಡ ಕೆಟ್ಟ ಶಕ್ತಿಗಳು ಮೂರೂ ಗುರುಗಳ ಮೇಲೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಅವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳÀ (ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಮೇಲೆ ಸೂಕ್ಷ್ಮದಿಂದ ಮಾರಣಾಂತಿಕ ಹಲ್ಲೆಗಳನ್ನು ಮಾಡುತ್ತವೆ. ಅವುಗಳಿಂದ ಮೂರೂ ಗುರುಗಳ ರಕ್ಷಣೆಯಾಗಬೇಕು, ಎಂದು ಮಹರ್ಷಿಗಳು ಅರಶಿಣದ ೧-೧ ಗಡ್ಡೆಯನ್ನು (ಟಿಪ್ಪಣಿ) ಮೂರೂ ಗುರುಗಳ ಕೋಣೆಯಲ್ಲಿ ಇಡಲು ಹೇಳಿದರು. ಯಾಗದ ಚೈತನ್ಯದಿಂದ ಭರಿತವಾಗಲು ಈ ಮೂರೂ ಗಡ್ಡೆ(ಬೇರು)ಗಳನ್ನು ಪ್ರತಿದಿನ ಯಾಗದ ಸ್ಥಳದಲ್ಲಿ ಇಡಲಾಯಿತು. ಪ್ರತಿಯೊಂದು ಯಾಗದ ಮೊದಲು ಮೂರೂ ಗಡ್ಡೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಸಕಾರಾತ್ಮಕ ಊಜೆಯು ಕಂಡು ಬಂದಿತು. ಯಾಗದ ನಂತರ ಮಾತ್ರ ಗಡ್ಡೆಗಳಲ್ಲಿನ ನಕಾರಾತ್ಮಕ ಊರ್ಜೆಯು ಇಲ್ಲದಂತಾಗಿ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಹೆಚ್ಚಳವಾಯಿತು. ಇದರಿಂದ ‘ಮಹರ್ಷಿಗಳು ಮೂರೂ ಗುರುಗಳ ರಕ್ಷಣೆಗಾಗಿ ಎಷ್ಟು ನಿಖರ ಮತ್ತು ಪರಿಣಾಮಕಾರಿ ಆಧ್ಯಾತ್ಮಿಕ ಉಪಾಯವನ್ನು ಹೇಳಿದರು’, ಎಂದು ಗಮನಕ್ಕೆ ಬರುತ್ತದೆ.
ಟಿಪ್ಪಣಿ – ‘ಗಡ್ಡೆ ಎಂದರೆ ಕಪ್ಪು ಅರಿಶಿಣ. ಇದರಲ್ಲಿ ಮಹಾಕಾಲಿ ದೇವಿಯ ಮಾರಕ ಶಕ್ತಿಗೆ ಸಂಬಂಧಿಸಿದ ತತ್ತ್ವವಿರುತ್ತದೆ. ಇದು ಸಂರಕ್ಷಣ-ಕವಚವನ್ನುಂಟು ಮಾಡಲು ಇರುತ್ತದೆ.’
೧ ಇ. ೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಲ್ಲಿನ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕೋಣೆಯಲ್ಲಿನ ಗಡ್ಡೆಯಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳು ಸುದರ್ಶನಯಾಗದ ನಂತರ ಕಡಿಮೆಯಾಗುವುದರ ಹಿಂದಿನ ಕಾರಣ : ‘ಗಡ್ಡೆ’ರೂಪಿ ಕಪ್ಪು ಬಣ್ಣದ ಅರಿಶಿಣದಲ್ಲಿ ಮುಖ್ಯವಾಗಿ ಶ್ರೀ ಮಹಾಕಾಲಿದೇವಿಯ ತತ್ತ್ವವು ಕಾರ್ಯನಿರತವಾಗಿರುತ್ತದೆ. ಸುದರ್ಶನಯಾಗದ ಮೊದಲು ಈ ಅರಶಿಣದಲ್ಲಿ ಶ್ರೀ ಮಹಾಕಾಲಿ ದೇವಿಯ ಸಗುಣ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯ ನಿರತವಾಗಿತ್ತು. ಆದುದರಿಂದ ಈ ಗಡ್ಡೆಯ ನೋಂದಣಿಯಲ್ಲಿ ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಿದೆ. ಸುದರ್ಶನ ಯಾಗದ ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕೋಣೆಯ ಗಡ್ಡೆ ಯಲ್ಲಿನ ಶ್ರೀ ಮಹಾಕಾಲಿ ದೇವಿಯ ಸಗುಣ ತತ್ತ್ವವು ಕಡಿಮೆ ಯಾಯಿತು. ಹಾಗೆಯೇ ಅವರಿಬ್ಬರೂ ಸನಾತನ ಸಂಸ್ಥೆಯ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾಗಿರುವುದರಿಂದ ಅವರ ಮೇಲಾದ ದೊಡ್ಡ ಕೆಟ್ಟ ಶಕ್ತಿಗಳ ಆಕ್ರಮಣವು ಗಡ್ಡೆಯಲ್ಲಿ ಆಕರ್ಷಿತಗೊಂಡಿತು. ಆಕ್ರಮಣದಲ್ಲಿನ ತೊಂದರೆದಾಯಕ ಶಕ್ತಿಯೊಂದಿಗೆ ಹೋರಾಟ ದಲ್ಲಿ ಗಡ್ಡೆಗಳಲ್ಲಿರುವ ಸಕಾರಾತ್ಮಕ ಊರ್ಜೆಯು ಖರ್ಚಾಯಿತು. ಆದುದರಿಂದ ಅವರ ಕೋಣೆಯಲ್ಲಿಟ್ಟ ಗಡ್ಡೆಯಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಸುದರ್ಶನಯಾಗದ ನಂತರ ಕಡಿಮೆಯಾಯಿತು. ಇದಕ್ಕೆ ‘ದೈವೀ ಕೃಪೆಯಿಂದ ಸದ್ಗುರುಗಳ ಮೇಲಿನ ಗಂಡಾಂತರ ತಪ್ಪುವುದು’, ಎಂದು ಹೇಳುತ್ತಾರೆ.’
೧ ಈ. ಯಾಗದಲ್ಲಿ ಹವಿರ್ದ್ರವ್ಯಗಳ ಆಹುತಿಯನ್ನು ನೀಡಿದ ನಂತರ ಯಜ್ಞಕುಂಡದಿಂದ ಹೊರಗೆ ಬರುವ ಹೊಗೆಯಿಂದ ವಾತಾವರಣದಲ್ಲಿ ಅಗಾಧ ಚೈತನ್ಯವು ಪ್ರಕ್ಷೇಪಣೆಯಾಗುವುದು : ಮಹರ್ಷಿಗಳು ಹೇಳಿದಂತೆ ಪ್ರತಿಯೊಂದು ಯಾಗದಲ್ಲಿ ಕರುಂಗಾಳಿ ಚೂರ್ಣ ಮತ್ತು ಮೂಲಿಕಾ ಚೂರ್ಣ ಈ ಹವಿರ್ದ್ರವ್ಯಗಳನ್ನು, ಹಾಗೆಯೇ ‘ಗವತಿ ಚಹಾ’ (ಮಜ್ಜಿಗೆ ಹುಲ್ಲು) ‘ಹಿನಾ’ ಮತ್ತು ‘ಮಾರವಾ’ ಈ ಸುಗಂಧದ್ರವ್ಯಗಳ ಆಹುತಿಯನ್ನು ಅರ್ಪಿಸ ಲಾಯಿತು. ಯಾಗದಲ್ಲಿ ಆಯಾ ಸಮಯದಲ್ಲಿ ಘಟಕಗಳ ಆಹುತಿಯನ್ನು ಅರ್ಪಿಸಿದ ನಂತರ ಯಜ್ಞಕುಂಡದಿಂದ ಹೊರಡುವ ಹೊಗೆಯ ಪರೀಕ್ಷಣೆಯನ್ನು ಮಾಡಲಾಯಿತು. ಯಾಗಗಳಲ್ಲಿನ ಹೊಗೆಯಲ್ಲಿ ಅಗಾಧ ಪ್ರಮಾಣದಲ್ಲಿ ಚೈತನ್ಯವಿರುವುದು ಗಮನಕ್ಕೆ ಬಂದಿತು. ಯಾಗಗಳಲ್ಲಿನ ಚೈತನ್ಯ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುವುದರಿಂದ ವಾತಾವರಣದ ಶುದ್ಧಿಯಾಗಿ ಸಾತ್ತ್ವಿಕತೆ ಹೆಚ್ಚಾಗುತ್ತದೆ.
೧ ಉ. ಯಾಗಗಳಲ್ಲಿನ ವಿಭೂತಿಯಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುವುದು : ಮಹರ್ಷಿಗಳ ಆಜ್ಞೆಯಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ಮಾಡಲಾದ ಯಾಗಗಳಿಂದ ಉತ್ತರೋತ್ತರ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯದ ಪ್ರಕ್ಷೇಪಣೆಯಾಯಿತು. ಈ ಚೈತನ್ಯದಿಂದ ಯಾಗದಲ್ಲಿನ ವಿಭೂತಿಯು ಭರಿತವಾಯಿತು. ಆದುದರಿಂದ ಯಾಗಗಳಲ್ಲಿನ ವಿಭೂತಿಯಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ (ಚೈತನ್ಯ) ಇದೆ. (ಇದರ ಕೋಷ್ಟಕವನ್ನು ಕೆಳಗೆ ನೀಡಲಾಗಿದೆ.)
೨. ಸಂತರು ಶ್ರೀ ಕಾರ್ತಿಕೇಯ ಮತ್ತು ಶ್ರೀ ಸಿದ್ಧಿವಿನಾಯಕ ದೇವತೆಗಳ ಮೂರ್ತಿಗಳಿಗೆ ಭಾವಪೂರ್ಣ ಅಭಿಷೇಕವನ್ನು ಮಾಡಿದ ನಂತರ ಮೂರ್ತಿಯ ಮತ್ತು ಅಭಿಷೇಕ ಮಾಡಿದ ನೀರಿನ ಚೈತನ್ಯದಲ್ಲಿ ಬಹಳ ಹೆಚ್ಚಳವಾಗುವುದು: ದೇವತೆಗಳಿಗೆ ಅಭಿಷೇಕ ಮಾಡಲು ಬಳಸಿದ ನೀರು ಸಂತರ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ) ಚೈತನ್ಯಮಯ ಹಸ್ತಸ್ಪರ್ಶದಿಂದ ಭರಿತವಾಯಿತು. ಸಂತರು ದೇವತೆಗಳಿಗೆ ಭಾವಪೂರ್ಣ ಅಭಿಷೇಕ ಮಾಡಿದುದರಿಂದ ದೇವತೆಗಳಲ್ಲಿನ ತತ್ತ್ವವು (ಚೈತನ್ಯ) ಜಾಗೃತವಾಗಿ ಕಾರ್ಯನಿರತವಾಯಿತು. ಇದರಿಂದ ಅಭಿಷೇಕದ ನಂತರ ದೇವತೆಗಳ ಮೂರ್ತಿ ಮತ್ತು ಅವುಗಳ ಮೇಲೆ ಅಭಿಷೇಕ ಮಾಡಿದ ನೀರಿನಲ್ಲಿನ ಚೈತನ್ಯದಲ್ಲಿ ಬಹಳ ಹೆಚ್ಚಳವಾಯಿತು.
ಸ್ವಲ್ಪದರಲ್ಲಿ ಯಜ್ಞಯಾಗಗಳು ಹಿಂದೂ ಸಂಸ್ಕೃತಿಯ ಮಹತ್ವಪೂರ್ಣ ಅಂಗವಾಗಿವೆ. ಯಜ್ಞಯಾಗಗಳಲ್ಲಿ ಎಲ್ಲ ಘಟಕಗಳು, ಉದಾ. ಯಾಗದ ಉದ್ದೇಶ, ಯಾಗದ ಸ್ಥಳ, ಯಾಗದ ಯಜಮಾನ ಮತ್ತು ಪುರೋಹಿತರು, ಯಾಗದಲ್ಲಿನ ಪೂಜಾಸಾಮಗ್ರಿಗಳು ಇತ್ಯಾದಿ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ ಅಷ್ಟು ಯಾಗದ ಫಲನಿಷ್ಪತ್ತಿ ಉತ್ತಮವಿರುತ್ತದೆ. ಮಹರ್ಷಿಗಳ ಆಜ್ಞೆಯಂತೆ ಸನಾತನದ ಆಶ್ರಮದಲ್ಲಿ ಮಾಡಲಾದ ಯಾಗಗಳ ಸಂಶೋಧನೆಯಿಂದ ಇದು ಗಮನಕ್ಕೆ ಬರುತ್ತದೆ.’
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ (೧೮.೪.೨೦೨೩)