ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ಗೋಮಯದಿಂದ ತಯಾರಿಸಿದ ಅಸಾತ್ತ್ವಿಕ ಗಣೇಶ ಮೂರ್ತಿ

ಗೋಮಯದಿಂದ ತಯಾರಿಸಿದ ಗಣೇಶಮೂರ್ತಿ

‘ಗೋಮಯದಿಂದ (ಆಕಳ ಸೆಗಣಿಯಿಂದ) ತಯಾರಿಸಿದ ‘ಗೋಬರ್‌ ಗಣೇಶಮೂರ್ತಿ’ಯ ಪೂಜೆ ಮಾಡಿದರೆ ಬೇಗನೇ ಫಲ ಪ್ರಾಪ್ತಿಯಾಗುತ್ತದೆ, ಹಾಗೆಯೇ ಮಣ್ಣು ಮತ್ತು ಗೋಮಯಗಳಿಂದ ತಯಾರಿಸಿದ ಮೂರ್ತಿಯಲ್ಲಿ ಪಂಚತತ್ತ್ವಗಳು ವಾಸಿಸುತ್ತವೆ’, ಮುಂತಾದ ಅಯೋಗ್ಯ ಪ್ರಚಾರ ಮಾಡಲಾಗುತ್ತದೆ. ಗೋಮಯದಿಂದ ತಯಾರಿಸಿದ ಗಣೇಶಮೂರ್ತಿ ಅಶಾಸ್ತ್ರೀಯವಾಗಿದೆ. ಇದರ ಕಾರಣ ಹೀಗಿದೆ – ಗೋಮಯ ಅಥವಾ ಗೋಮೂತ್ರ ಇವುಗಳಲ್ಲಿ ಮೂಲತಃ ಗೋಮಾತೆಯ ತತ್ತ್ವವಿರುತ್ತದೆ. ಶಾಸ್ತ್ರಕ್ಕನುಸಾರ ಯಾವುದಾದರೊಂದು ವಸ್ತುವಿನಲ್ಲಿ ಮೊದಲೇ ಬೇರೆ ತತ್ತ್ವವಿದ್ದಲ್ಲಿ, ಅಲ್ಲಿ ಇನ್ನೊಂದು ತತ್ತ ಬರುವುದಿಲ್ಲ. ಆದ್ದರಿಂದ ನೈಸರ್ಗಿಕವಾಗಿ ಗೋಮಾತೆಯ ತತ್ತ  ವ್ ವಿರುವ ಗೋಮಯದಲ್ಲಿ ಗಣೇಶತತ್ತ ಆಕರ್ಷಿತವಾಗಲು ಸಾಧ್ಯವಿಲ್ಲ.

‘ಇಕೊ-ಫ್ರೆಂಡ್ಲಿ’ ಗಣೇಶಮೂರ್ತಿ ವ್ಯಾಪಾರಿಗಳ ವಂಚನೆಯಿಂದ ಎಚ್ಚರ !

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್‌ ಫ್ರೆಂಡ್ಲಿ’ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ. ಈ ರೀತಿಯ ಮೂರ್ತಿಗಳು ಅಶಾಸ್ತ್ರೀಯವಾಗಿವೆ, ಅಲ್ಲದೇ ಪರಿಸರಕ್ಕೂ ಹಾನಿಕರವಾಗಿದೆ, ಕಾಗದದ ಮುದ್ದೆಗಳಿಂದ ಶ್ರೀ ಗಣೇಶಮೂರ್ತಿಯನ್ನು ತಯಾರಿಸುವುದರಿಂದಾಗುವ ಹಾನಿಗಳು ಮುಂದಿನಂತಿವೆ.

೧. ಕಾಗದದ ಮುದ್ದೆಯು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರಿಕೊಳ್ಳುತ್ತದೆ ಮತ್ತು ಅದರಿಂದ ಜೀವ ಸೃಷ್ಟಿಗೆ ಹಾನಿಕರವಾದ ‘ಮಿಥೇನ್’ ವಾಯು ಉತ್ಪನ್ನವಾಗುತ್ತದೆ.

೨. ‘ಕಾಗದದ ಮುದ್ದೆಯಲ್ಲಿ ‘ಟಾಲ್ಕ್‌’ ಎಂಬ ಅಜೈವಿಕ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಅದು ನೀರಿನಲ್ಲಿ ಕರಗುವುದಿಲ್ಲ.

೩. ಮರದಿಂದ ನಿರ್ಮಿಸಿದ ಕಾಗದದ ತಿರುಳಿನಲ್ಲಿ ‘ಲಿಗ್ನಿನ್’ ಎಂಬ ಹೆಸರಿನ ವಿಷಕಾರಿ ಪದಾರ್ಥವಿರುತ್ತದೆ. ಒಂದು ವೇಳೆ ಅದು ನೀರಿನಲ್ಲಿ ಸೇರಿಕೊಂಡರೆ ಅದರಿಂದ ಗಂಭೀರ ಪರಿಣಾಮಗಳಾಗಬಹುದು.

೪. ಕಾಗದದ ಮುದ್ದೆಯಿಂದ ನೀರಿನಲ್ಲಿರುವ ಬಿ.ಒ.ಡಿ. (ಬಯಾಲಾಜಿಕಲ್‌ ಆಕ್ಸಿಜನ್‌ ಡಿಮಾಂಡ್) ಮತ್ತು ಸಿ.ಒ.ಡಿ. (ಕೆಮಿಕಲ್‌ ಆಕ್ಸಿಜನ್‌ ಡಿಮಾಂಡ್) ಪ್ರಚಂಡ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಮತ್ತು ನೀರು ಕಪ್ಪಾಗುತ್ತದೆ.

೫. ನೀರಿನಲ್ಲಿ ತೇಲುವ ಕಾಗದದ ಮುದ್ದೆಯ ತುಂಡುಗಳು ಮೀನುಗಳ ಜಲ ಪುಪ್ಪುಸಗಳಲ್ಲಿ ಸಿಲುಕಿ ಅವು ಸಾವನ್ನಪ್ಪುವ ಪ್ರಮಾಣ ಹೆಚ್ಚಾಗುತ್ತದೆ.’ ಸಂಬಂಧಪಟ್ಟ ಸಂಸ್ಥೆಗಳ ಪರಿಸರದ ಕಾಳಜಿಯು ಕೇವಲ ಮೇಲು ಮೇಲಿನದ್ದಾಗಿದೆ ಎಂಬುದನ್ನು ಗಮನದಲ್ಲಿಡಬೇಕು. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನು ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.