ಸಂಚಾರ ನಿಷೇಧದ ಸಮಯದಲ್ಲಿ ಔಷಧಿ ತೆಗೆದುಕೊಳ್ಳಲು ಹೊರಟ ಯುವಕನ ಕೆನ್ನೆಗೆ ಬಾರಿಸಿದ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾ !

ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಧಾರ್ಮಿಕ ಭಾವನೆಗಳನ್ನು ನೋಯಿಸಿದ ಬಗ್ಗೆ ಶಾರ್ಜೀಲ್ ಉಸ್ಮಾನಿಯ ವಿರುದ್ಧ ದೂರು ದಾಖಲು

ಕೇವಲ ದೂರನ್ನು ದಾಖಲಿಸುವುದು ಮಾತ್ರವಲ್ಲ, ಜೊತೆಗೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ! ಪಾಕಿಸ್ತಾನದಲ್ಲಿರುವ ಧರ್ಮನಿಂದನೆಯ ವಿರುದ್ಧ ಇರುವ ಕಾನೂನು ಭಾರತದಲ್ಲಿಯೂ ಇರಬೇಕು !

ನೆಲ್ಲೂರು (ಆಂಧ್ರಪ್ರದೇಶ)ನಲ್ಲಿ ಆಯುರ್ವೇದ ಔಷಧಿಯಿಂದ ೨ ದಿನಗಳಲ್ಲಿ ಗುಣಮುಖರಾದ ಕೊರೊನಾ ರೋಗಿಗಳು !

ಆಯುರ್ವೇದದಲ್ಲಿನ ಔಷಧಿಗಳನ್ನು ಈಗಾಗಲೇ ಕೊರೊನಾದ ವಿರುದ್ಧ ಅಭ್ಯಾಸ ಮಾಡಿ ಸರಿಯಾದ ರೀತಿಯಲ್ಲಿ ಬಳಸಿದ್ದರೆ, ಇಷ್ಟರೊಳಗೆ ದೇಶದಲ್ಲಾದ ಕೊರೊನಾದ ಪರಿಣಾಮವನ್ನು ಕಡಿಮೆಯಾಗಿ ಸಾವಿರಾರು ಜೀವಗಳನ್ನು ಉಳಿಸಬಹುದಿತ್ತು ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ !

ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅಸ್ಸಾಂನ ೩ ಶಾಸಕರು !

ದೇವಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಿಗೆ ಅಭಿನಂದನೆಗಳು ! ಇವರಿಂದ ದೇಶದಲ್ಲಿ ಹೊಸದಾಗಿ ಚುನಾಯಿತರಾದ ಇತರ ಶಾಸಕರು ಸಹ ಇವರ ಆದರ್ಶವನ್ನು ತೆಗೆದುಕೊಂಡು ಇಂತಹ ಪ್ರಯತ್ನಿಸಬೇಕು !

ಕೊರೊನಾದ ಪ್ರಭಾವವನ್ನು ಕಡಿಮೆಗೊಳಿಸಲು ಕೊಯಮತ್ತೂರಿನಲ್ಲಿ (ತಮಿಳುನಾಡು) ‘ಕೊರೊನಾ ದೇವಿ’ ದೇವಸ್ಥಾನದ ಸ್ಥಾಪನೆ

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರಿಂದ ಈ ರೀತಿಯ ಅಧಾರ್ಮಿಕ ಕೃತಿ ಆಗುತ್ತಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಮೂಲಕ ಸಾಧನೆಯನ್ನು ಕಲಿಸಲಾಗುವುದು !

ಅತ್ಯಾಚಾರದ ಸೇಡನ್ನು ತೀರಿಸಿಕೊಳ್ಳಲು, ತನ್ನ ಗಂಡನೊಂದಿಗೆ ಸೇರಿ ಅತ್ಯಾಚಾರಿಯ ಹತ್ಯೆಯನ್ನು ಮಾಡಿದ ಸಂತ್ರಸ್ತೆ !

ಹಬೀಬುಲ್ಲಾ ಎಂಬ ಯುವಕ ಓರ್ವ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರ ಸೇಡು ತೀರಿಸಿಕೊಳ್ಳಲು ವಿವಾಹಿತ ಮಹಿಳೆಯು ತನ್ನ ಗಂಡನ ಸಹಾಯದಿಂದ ಹಬೀಬುಲ್ಲಾನನ್ನು ಕೊಂದಳು. ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ನಕಲಿ ಕೊರೋನಾ ಪ್ರಮಾಣ ಪತ್ರ ನೀಡಿದ ವೈದ್ಯರಿಬ್ಬರ ಬಂಧನ

ಜನರಿಗೆ ನಕಲಿ ಕೊರೋನಾ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಹಾಗೂ ರೆಮಡೆಸಿವಿರ್ ಚುಚ್ಚುಮದ್ದಿನ ಕಾಳಸಂತೆಯನ್ನು ಮಾಡುವ ಚಾಮರಾಜಪೇಟೆಯಲ್ಲಿನ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ೨ ವೈದ್ಯರನ್ನು ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಡಾ. ಬಿ. ಶೇಖರ ಮತ್ತು ಡಾ. ಪ್ರಜ್ವಲಾ ಎಂದು ಅವರ ಹೆಸರುಗಳಿವೆ.

ರಾಜೀವ್ ಗಾಂಧಿಯನ್ನು ಹತ್ಯೆಗೈದು ಶಿಕ್ಷೆ ಅನುಭವಿಸುತ್ತಿರುವ ೭ ಮಂದಿಗೆ ಕ್ಷಮೆ ನೀಡಬೇಕು !

ತಮಿಳುನಾಡಿನ ಚುನಾವಣೆಯಲ್ಲಿ ಆಯ್ಕೆಯಾದ ದ್ರಮುಕ ಪಕ್ಷದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಅಪರಾಧಿಗಳಿಗೆ ಕ್ಷಮೆ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

೨೦೧೩ ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜಪಾಲ್ ಖುಲಾಸೆ

೨೦೧೩ ರಲ್ಲಿ ಬಂಬೋಳಿಯ ಸ್ಟಾರ್ ಹೋಟೆಲ್‍ನಲ್ಲಿ ನಡೆದ ಉತ್ಸವದಲ್ಲಿ ಮಹಿಳಾ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೇಜಪಾಲ ಅವರನ್ನು ನವೆಂಬರ್ ೩೦, ೨೦೧೩ ರಂದು ಬಂಧಿಸಲಾಗಿತ್ತು. ನಂತರ ಅವರನ್ನು ಮೇ ೨೦೧೪ ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಕೊರೊನಾದೊಂದಿಗೆ ಹೋರಾಡುವಾಗ ನಿರಂತರವಾಗಿ ಬದಲಾವಣೆ ಮತ್ತು ಪ್ರಯೋಗ ಮಾಡುವುದು ಅವಶ್ಯಕ ! – ಪ್ರಧಾನಿ ನರೇಂದ್ರ ಮೋದಿ

ಈ ರೋಗಾಣು ತನ್ನ ಸ್ವರೂಪವನ್ನು ಬದಲಾಯಿಸುವಲ್ಲಿ ಚತುರವಾಗಿದೆ. ಆದ್ದರಿಂದ ನಮ್ಮ ಪದ್ದತಿಗಳು ಮತ್ತು ಕಾರ್ಯತಂತ್ರಗಳನ್ನು ವಿಸ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ೧೦ ರಾಜ್ಯಗಳ ಮುಖ್ಯಮಂತ್ರಿ ಮತ್ತು ಆಡಳಿತ ಅಧಿಕಾರಿಗಳೊಂದಿಗೆ ಆನ್‍ಲೈನ್ ಸಭೆಯಲ್ಲಿ ಹೇಳಿದರು.