ಅತ್ಯಾಚಾರದ ಸೇಡನ್ನು ತೀರಿಸಿಕೊಳ್ಳಲು, ತನ್ನ ಗಂಡನೊಂದಿಗೆ ಸೇರಿ ಅತ್ಯಾಚಾರಿಯ ಹತ್ಯೆಯನ್ನು ಮಾಡಿದ ಸಂತ್ರಸ್ತೆ !

ಅತ್ಯಾಚಾರಕ್ಕೊಳಗಾದವರು ಕಾನೂನನ್ನು ಕೈಗೆತ್ತಿಕೊಂಡು ಇಂತಹ ಕ್ರಮ ಏಕೆ ತೆಗೆದುಕೊಳ್ಳುತ್ತಾರೆ ಎಂದು ಯೋಚಿಸುವ ಸಮಯ ಇದು!

ಗಿರಿಡಿಹ್ (ಜಾರಖಂಡ್) – ಹಬೀಬುಲ್ಲಾ ಎಂಬ ಯುವಕ ಓರ್ವ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರ ಸೇಡು ತೀರಿಸಿಕೊಳ್ಳಲು ವಿವಾಹಿತ ಮಹಿಳೆಯು ತನ್ನ ಗಂಡನ ಸಹಾಯದಿಂದ ಹಬೀಬುಲ್ಲಾನನ್ನು ಕೊಂದಳು. ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಮಹಿಳೆಯು ತನ್ನ ಗಂಡನನ್ನು ಉಳಿಸಲು ಯುವಕರಿಬ್ಬರ ಹೆಸರನ್ನು ತೆಗೆದುಕೊಂಡಿದ್ದಾಳೆ; ಆದರೆ ಆ ಯುವಕರ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಮೇ ೧೬ ರ ರಾತ್ರಿ ಹಬೀಬುಲ್ಲಾ ಗ್ರಾಮದಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ಆತ ಮನೆಗೆ ಹಿಂತಿರುಗಲಿಲ್ಲ, ಆದ್ದರಿಂದ ಅವನ ತಂದೆ ಅವನ ಮೊಬೈಲ್ ಫೋನ್‍ಗೆ ಸಂಪರ್ಕಿಸಿದರು; ಆದರೆ ಅದು ಬಂದಾಗಿತ್ತು. ಮರುದಿನ, ಹಬೀಬುಲ್ಲಾನ ಶವ ಹೊಲವೊಂದರಲ್ಲಿ ಪತ್ತೆಯಾಗಿದೆ. ಪೊಲೀಸರು ಅದರ ತನಿಖೆ ನಡೆಸುತ್ತಿರುವಾಗ, ದಂಪತಿಗಳ ಬಗ್ಗೆ ಅನುಮಾನಾಸ್ಪದ ಮಾಹಿತಿ ಸಿಕ್ಕಿತು. ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ನಂತರ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮದುವೆಯ ದಿನ, ಮಹಿಳೆ ಹಬೀಬುಲ್ಲಾನನ್ನು ಭೇಟಿಯಾಗಲು ದೂರವಾಣಿ ಕರೆ ಮಾಡಿದಳು. ನಂತರ ಮಹಿಳೆಯು ತನ್ನ ಗಂಡನೊಂದಿಗೆ ಸೇರಿ ಅವನನ್ನು ಕೊಂದಳು. ಆತನ ಕುತ್ತಿಗೆ ಕತ್ತರಿಸಲಾಯಿತು, ಮತ್ತು ಅವನ ಜನನಾಂಗಗಳ ಮೇಲೆ ಮರ್ಮಾಘಾತ ಮಾಡಲಾಗಿತ್ತು.