ಧಾರ್ಮಿಕ ಭಾವನೆಗಳನ್ನು ನೋಯಿಸಿದ ಬಗ್ಗೆ ಶಾರ್ಜೀಲ್ ಉಸ್ಮಾನಿಯ ವಿರುದ್ಧ ದೂರು ದಾಖಲು

ಕೇವಲ ದೂರನ್ನು ದಾಖಲಿಸುವುದು ಮಾತ್ರವಲ್ಲ, ಜೊತೆಗೆ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ! ಪಾಕಿಸ್ತಾನದಲ್ಲಿರುವ ಧರ್ಮನಿಂದನೆಯ ವಿರುದ್ಧ ಇರುವ ಕಾನೂನು ಭಾರತದಲ್ಲಿಯೂ ಇರಬೇಕು !

ಶಾರ್ಜೀಲ್ ಉಸ್ಮಾನಿ

ನವ ದೆಹಲಿ – ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶಾರ್ಜೀಲ್ ಉಸ್ಮಾನಿಯ ವಿರುದ್ಧ ಟ್ವೀಟ್‍ಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ್ದಕ್ಕಾಗಿ ಅಪರಾಧವನ್ನು ದಾಖಲಿಸಲಾಗಿದೆ. ‘ಯಾವ ಹಿಂದೂ ಶ್ರೀರಾಮನ ಘೋಷಣೆ ಮಾಡುತ್ತಾರೆಯೋ, ಅವರು ಭಯೋತ್ಪಾದಕರಾಗಿರುತ್ತಾರೆ’, ಎಂದು ಆತ ಟ್ವೀಟ್ ಮಾಡಿದ್ದನು. ಬಿಜೆಪಿಯ ಮುಖಂಡ ನವೀನ ಕುಮಾರ ಅವರು ನೀಡಿದ ದೂರಿನ ನಂತರ ಅಪರಾಧವನ್ನು ದಾಖಲಿಸಲಾಗಿದೆ.