ಕೊರೊನಾದ ಪ್ರಭಾವವನ್ನು ಕಡಿಮೆಗೊಳಿಸಲು ಕೊಯಮತ್ತೂರಿನಲ್ಲಿ (ತಮಿಳುನಾಡು) ‘ಕೊರೊನಾ ದೇವಿ’ ದೇವಸ್ಥಾನದ ಸ್ಥಾಪನೆ

೪೮ ದಿನಗಳವರೆಗೆ ನಡೆಯಲಿದೆ ಮಹಾಯಜ್ಞ !

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರಿಂದ ಈ ರೀತಿಯ ಅಧಾರ್ಮಿಕ ಕೃತಿ ಆಗುತ್ತಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಮೂಲಕ ಸಾಧನೆಯನ್ನು ಕಲಿಸಲಾಗುವುದು !

ಕೊಯಮತ್ತೂರು (ತಮಿಳುನಾಡು) – ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ‘ಕೊರೊನಾದಿಂದ ರಕ್ಷಿಸಲು ದೇವರು ಮಾತ್ರ ಸಹಾಯ ಮಾಡಬಹುದು’, ಎಂಬ ಶ್ರದ್ಧೆಯಿಂದ ಸ್ಥಳೀಯರು ನಗರದ ಹೊರಗೆ ಕೊರೊನಾ ದೇವಿಯ ದೇವಾಲಯವನ್ನು ನಿರ್ಮಿಸಿದ್ದಾರೆ.

೧೦೦ ವರ್ಷಗಳ ಹಿಂದೆ ಪ್ಲೇಗ್ ಸಮಯದಲ್ಲಿ ಪ್ಲೇಗ್ ಮರಿಯಮ್ಮನ ದೇವಾಲಯವನ್ನು ಇಲ್ಲಿ ಸ್ಥಾಪಿಸಲಾಗಿತ್ತು. ಜನರು ಈ ದೇವಿಯನ್ನು ಪೂಜಿಸಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದ ನಂತರ, ಪ್ಲೇಗ ಸಾಂಕ್ರಾಮಿಕ ರೋಗವು ಕಡಿಮೆಯಾದ ವಿಷಯವನ್ನು ತಮ್ಮ ಪೂರ್ವಜರು ಹೇಳಿದ್ದನ್ನು ಕೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ದೇವಾಲಯವನ್ನು ಸಹ ಈಗ ಅದೇ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ನಗರದ ಹೊರವಲಯದಲ್ಲಿರುವ ಇರುಗುರನಲ್ಲಿ ಕಾಮತ್ವಿಪುರಿ ಅಧಿನಮ್ ಎಂಬ ಹೆಸರಿನ ಮಠವು ಈ ದೇವಾಲಯವನ್ನು ಸ್ಥಾಪಿಸಿದೆ. ಈ ದೇವಾಲಯದಲ್ಲಿ ಕೊರೊನಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹವು ಎರಡೂವರೆ ಅಡಿ ಎತ್ತರವಿದೆ. ಕೊರೊನಾದಿಂದ ಮುಕ್ತಿ ಸಿಗಲು ಈ ಸ್ಥಳದಲ್ಲಿ ೪೮ ದಿನಗಳ ಮಹಾಯಜ್ಞವನ್ನು ಆಯೋಜಿಸಲಾಗಿದೆ.