೨೦೧೩ ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜಪಾಲ್ ಖುಲಾಸೆ

ಗೋವಾದ ಸೆಷನ್ಸ್ ನ್ಯಾಯಾಲಯದ ತೀರ್ಪು

ತರುಣ್ ತೇಜಪಾಲ್

ಪಣಜಿ (ಗೋವಾ) – ಸಹೋದ್ಯೋಗಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ತೆಹಲ್ಕಾ ಸಂಸ್ಥಾಪಕ ಮತ್ತು ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರನ್ನು ಮೇ ೨೧ ರಂದು ಮಾಪ್ಸಾದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

೨೦೧೩ ರಲ್ಲಿ ಬಂಬೋಳಿಯ ಸ್ಟಾರ್ ಹೋಟೆಲ್‍ನಲ್ಲಿ ನಡೆದ ಉತ್ಸವದಲ್ಲಿ ಮಹಿಳಾ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೇಜಪಾಲ್ ಅವರನ್ನು ನವೆಂಬರ್ ೩೦, ೨೦೧೩ ರಂದು ಬಂಧಿಸಲಾಗಿತ್ತು. ನಂತರ ಅವರನ್ನು ಮೇ ೨೦೧೪ ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಪರಾಧ ತನಿಖಾ ದಳ (ಸಿ.ಐ.ಡಿ.) ೨೦೧೪ ರ ಫೆಬ್ರವರಿ ೧೭ ರಂದು ತೇಜಪಾಲ್ ವಿರುದ್ಧ ನ್ಯಾಯಾಲಯದಲ್ಲಿ ೩೦೦೦ ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿತ್ತು. ಅವರ ವಿರುದ್ಧದ ಆರೋಪಗಳನ್ನು ಸೆಪ್ಟೆಂಬರ್ ೨೮ ರಂದು ನಿಗದಿಪಡಿಸಲಾಯಿತು ಮತ್ತು ವಿಚಾರಣೆಯನ್ನು ಮಾರ್ಚ್ ೧೫, ೨೦೧೮ ರಂದು ಪ್ರಾರಂಭಿಸಲಾಯಿತು. ಜನವರಿ ೨೦೨೧ ರಲ್ಲಿ ಪೊಲೀಸರು ತೇಜಪಾಲ್ ವಿರುದ್ಧ ೧೬೧ ಪುಟಗಳ ಪೂರಕ ಚಾರ್ಜ್‍ಶೀಟ್ ಸಲ್ಲಿಸಿದರು. ಈ ಖಟ್ಲೆಯಲ್ಲಿ ವಿಶೇಷ ಸರಕಾರಿ ನ್ಯಾಯವಾದಿ ಫ್ರಾನ್ಸಿಸ್ಕೊ ತಾವೆರೊ ಮತ್ತು ಸಹಾಯಕ ಸರಕಾರಿ ನ್ಯಾಯವಾದಿ ಸಿಂಡಿಯಾನಾ ಸಿಲ್ವಾ ಇವರು ಆಡಳಿತದ ಪರವಾಗಿ ವಾದ ಮಾಡಿದ್ದರು.