ಸಂಚಾರ ನಿಷೇಧದ ಸಮಯದಲ್ಲಿ ಔಷಧಿ ತೆಗೆದುಕೊಳ್ಳಲು ಹೊರಟ ಯುವಕನ ಕೆನ್ನೆಗೆ ಬಾರಿಸಿದ ಜಿಲ್ಲಾಧಿಕಾರಿ ಹುದ್ದೆಯಿಂದ ವಜಾ !

ಪರಿಸ್ಥಿತಿ ತಿಳಿಯದೆ ಅಮಾಯಕ ಜನರನ್ನು ಥಳಿಸುವವರ ವಿರುದ್ಧ ಅಪರಾಧ ದಾಖಲಿಸಿ ಸೆರೆಮನೆಗಟ್ಟಬೇಕು !

ಸೂರಜಪುರ (ಛತ್ತೀಸಗಡ) – ರಾಜ್ಯದಲ್ಲಿ ಸಂಚಾರ ನಿಷೇಧದ ಸಂದರ್ಭದಲ್ಲಿ ಔಷಧಿ ತರಲು ಹೊರಟಿದ್ದ ಯುವಕನ ಕೆನ್ನೆಗೆ ಬಾರಿಸಿ ಹಾಗೂ ಆತನ ಸಂಚಾರವಾಣಿಯನ್ನು ನೆಲಕ್ಕೆ ಅಪ್ಪಳಿಸಿದ ಆರೋಪದ ಮೇಲೆ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ನಂತರ, ಮುಖ್ಯಮಂತ್ರಿ ಭೂಪೇಶ ಬಘೆಲರು ಶರ್ಮಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಿದರು.

ಮುಖ್ಯಮಂತ್ರಿ ಬಘೆಲ್ ಅವರು ಟ್ವೀಟ್ ಮಾಡಿ, ಸಾಮಾಜಿಕ ಮಾಧ್ಯಮದಿಂದ ಸೂರಜಪುರದ ಜಿಲ್ಲಾಧಿಕಾರಿ ರಣವೀರ ಶರ್ಮಾ ಅವರು ಯುವಕನ ಮೇಲೆ ತಪ್ಪಾಗಿ ವರ್ತಿಸಿದ ಪ್ರಕರಣವನ್ನು ನಾನು ನೋಡಿದೆ. ಇದು ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದೆ. ಛತ್ತಿಸಗಡದಲ್ಲಿ ಇಂತಹ ಕೃತ್ಯವನ್ನು ಸಹಿಸಲಾಗುವುದಿಲ್ಲ. ಯಾವುದೇ ಅಧಿಕಾರಿಯ ಆಡಳಿತಾವಧಿಯಲ್ಲಿ ಈ ರೀತಿಯ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ಈ ಘಟನೆಯಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ನಾನು ಯುವಕ ಮತ್ತು ಅವನ ಕುಟುಂಬದ ಬಗ್ಗೆ ವಿಷಾದಿಸುತ್ತೇನೆ ಎಂದು ಹೇಳಿದರು.