ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅಸ್ಸಾಂನ ೩ ಶಾಸಕರು !

ದೇವಭಾಷೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರಿಗೆ ಅಭಿನಂದನೆಗಳು ! ಇವರಿಂದ ದೇಶದಲ್ಲಿ ಹೊಸದಾಗಿ ಚುನಾಯಿತರಾದ ಇತರ ಶಾಸಕರು ಸಹ ಇವರ ಆದರ್ಶವನ್ನು ತೆಗೆದುಕೊಂಡು ಇಂತಹ ಪ್ರಯತ್ನಿಸಬೇಕು !

(ಎಡದಿಂದ) ಅಮಿಯಾಕುಮಾರ್ ಭುಯಿಯಾ, ಜಯಂತ್ ಮಲ್ಲಾ ಬರುವಾ, ಸುಮನ್ ಹಿಪ್ರಿಯಾ

ಗೌಹಾಟಿ (ಅಸ್ಸಾಂ) – ಹೊಸದಾಗಿ ಚುನಾಯಿತರಾದ ವಿಧಾನಸಭಾ ಸದಸ್ಯರು ಅಧಿವೇಶನದ ಮೊದಲನೆಯ ದಿನದಂದು ಪ್ರಮಾಣ ವಚನವನ್ನು ಸ್ವೀಕರಿಸಿದರು. ಈ ಸದಸ್ಯರಲ್ಲಿ ೩ ಮಂದಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಸುಮನ್ ಹಿಪ್ರಿಯಾ, ಅಮಿಯಾಕುಮಾರ ಭುಯಿಯಾ  ಮತ್ತು ಜಯಂತ್ ಮಲ್ಲಾ ಬರುವಾ ಸೇರಿದ್ದಾರೆ.