ಕೊರೊನಾದೊಂದಿಗೆ ಹೋರಾಡುವಾಗ ನಿರಂತರವಾಗಿ ಬದಲಾವಣೆ ಮತ್ತು ಪ್ರಯೋಗ ಮಾಡುವುದು ಅವಶ್ಯಕ ! – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ – ಕೊರೊನಾ ಸಾಂಕ್ರಾಮಿಕ ರೋಗವು ಕಳೆದ ೧೦೦ ವರ್ಷಗಳಲ್ಲಿನ ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ. ಕೊರೊನಾ ಸೋಂಕು ನಿಮ್ಮ ಮುಂದಿರುವ ಸವಾಲನ್ನು ಹೆಚ್ಚಿಸಿದೆ. ಈ ಹಿಂದಿನ ಅನಾರೋಗ್ಯವಾಗಿರಲಿ ಅಥವಾ ಕೊರೊನಾ ಸೋಂಕು ಆಗಿರಲಿ, ಅದು ಖಂಡಿತವಾಗಿಯೂ ನಮಗೆ ಒಂದು ವಿಷಯವನ್ನು ಕಲಿಸಿದೆ ಅದೆಂದರೆ ಇಂತಹ ಪರಿಸ್ಥಿತಿಯಲ್ಲಿ ಬಿಕ್ಕಟ್ಟಿನೊಂದಿಗೆ ಕೈ ಕೈ ಮಿಲಾಯಿಸುತ್ತಿರುವಾಗ ನಿರಂತರವಾಗಿ ಅಗತ್ಯಕ್ಕನುಸಾರ ಬದಲಾವಣೆ ಮತ್ತು ಪ್ರಯೋಗ ಮಾಡುವುದು ಬಹಳ ಮುಖ್ಯವಾಗಿದೆ. ಈ ರೋಗಾಣು ತನ್ನ ಸ್ವರೂಪವನ್ನು ಬದಲಾಯಿಸುವಲ್ಲಿ ಚತುರವಾಗಿದೆ. ಆದ್ದರಿಂದ ನಮ್ಮ ಪದ್ದತಿಗಳು ಮತ್ತು ಕಾರ್ಯತಂತ್ರಗಳನ್ನು ವಿಸ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ೧೦ ರಾಜ್ಯಗಳ ಮುಖ್ಯಮಂತ್ರಿ ಮತ್ತು ಆಡಳಿತ ಅಧಿಕಾರಿಗಳೊಂದಿಗೆ ಆನ್‍ಲೈನ್ ಸಭೆಯಲ್ಲಿ ಹೇಳಿದರು.

ಪ್ರಧಾನಿ ಮೋದಿಯವರು ಮಂಡಿಸಿದ ಸೂತ್ರಗಳು

೧. ಒಂದು ಲಸಿಕೆಯ ವ್ಯರ್ಥವಾಯಿತು ಎಂದರೆ ಒಂದು ಜೀವನಕ್ಕೆ ಅಗತ್ಯವಾದ ರಕ್ಷಣೆ ನೀಡುವಲ್ಲಿ ವೈಫಲ್ಯವಾದಂತಾಗುತ್ತದೆ. ಆದ್ದರಿಂದ ಲಸಿಕೆಗಳನ್ನು ವ್ಯರ್ಥವಾಗದಂತೆ ಜಾಗರೂಕತೆಯನ್ನು ವಹಿಸಬೇಕು.

೨. ಪ್ರತ್ಯಕ್ಷವಾಗಿ ಯುದ್ಧಭೂಮಿಯಲ್ಲಿ ಮಾಡಿದ ಕೆಲಸದಿಂದ, ನಮ್ಮ ಅನುಭವದಿಂದ ಮತ್ತು ಅದರಿಂದ ಹೊಳೆದ ಸಲಹೆಗಳಿಂದ ವ್ಯವಹಾರಿಕ ಮತ್ತು ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸಬಹುದು.

‘ನಮಗೆ ಮಾತನಾಡಲು ಬಿಡಲಿಲ್ಲ !’ (ವಂತೆ) – ಮಮತಾ ಬ್ಯಾನರ್ಜಿಯ ಆರೋಪ

ಮಮತಾ ಬ್ಯಾನರ್ಜಿ

ಕೋಲ್ಕತಾ – ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರಕಾರವನ್ನು ಟೀಕಿಸಿದರು. ಅವರು, ಸಭೆಯಲ್ಲಿ ೧೦ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು. ನಾನು ಮುಖ್ಯಮಂತ್ರಿ ಎಂದು ಹಾಜರಿದ್ದೆ. ಹಾಗಾಗಿ ನಾನು ಜಿಲ್ಲಾಧಿಕಾರಿಗೆ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಬಿಜೆಪಿಯ ಕೆಲವು ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಮೋದಿ ತಮ್ಮ ಸೂತ್ರಗಳನ್ನು ಮಂಡಿಸಿದರು; ಆದರೆ ನನಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಎಲ್ಲಾ ಮುಖ್ಯಮಂತ್ರಿಗಳು ಸುಮ್ಮನೆ ಮೌನವಾಗಿ ಕುಳಿತಿದ್ದರು. ಯಾರೂ ಏನೂ ಹೇಳಲಿಲ್ಲ. ನಮಗೆ ಕೊರೊನಾ ಲಸಿಕೆಯ ಬೇಡಿಕೆಯನ್ನು ನೀಡಕ್ಕಿತ್ತು; ಆದರೆ ಮಾತನಾಡಲು ಬಿಡಲೇ ಇಲ್ಲ, ಎಂದು ಮಮತಾ ಬ್ಯಾನರ್ಜಿ ಅವರು ಆರೋಪಿಸಿದರು. ಮಮತಾ ಬ್ಯಾನರ್ಜಿ ತಮ್ಮ ಮಾತನ್ನು ಮುಂದುವರೆಸುತ್ತಾ, ಕೊರೊನಾ ಸೋಂಕು ಕಡಿಮೆ ಆಗುತ್ತಿದೆ ಎಂದು ಮೋದಿ ಹೇಳಿದ್ದಾರೆ; ಆದರೆ ಮೊದಲು ಹಾಗೆಯೇ ಆಗಿತ್ತು. ನಾವು ೩ ಕೋಟಿ ಲಸಿಕೆಗಳನ್ನು ಬೇಡಿಕೆ ಇಡುವವರಿದ್ದೆವು. ಈ ತಿಂಗಳಲ್ಲಿ ೨೪ ಲಕ್ಷ ಲಸಿಕೆಗಳು ಸಿಗುವುದಿತ್ತು; ಆದರೆ ಕೇವಲ ೧೩ ಲಕ್ಷ ಲಸಿಕೆಗಳು ಮಾತ್ರ ಸಿಕ್ಕಿವೆ ಎಂದು ಹೇಳಿದರು.