ನೆಲ್ಲೂರು (ಆಂಧ್ರಪ್ರದೇಶ)ನಲ್ಲಿ ಆಯುರ್ವೇದ ಔಷಧಿಯಿಂದ ೨ ದಿನಗಳಲ್ಲಿ ಗುಣಮುಖರಾದ ಕೊರೊನಾ ರೋಗಿಗಳು !

ಔಷಧಿಗಾಗಿ ಸಾವಿರಾರು ಜನರ ದಟ್ಟಣೆ

ಐ.ಸಿ.ಎಂ.ಆರ್.ನಿಂದ ಆಗುತ್ತಿದೆ ಪರಿಶೀಲನೆ

ಮುಖ್ಯಮಂತ್ರಿ ರೆಡ್ಡಿ ಮತ್ತು ಉಪರಾಷ್ಟ್ರಪತಿಯವರಿಂದಲೂ ದಾಖಲೆ

ಆಯುರ್ವೇದಕ್ಕೆ ಪ್ರಾಮುಖ್ಯತೆ ನೀಡದಂತೆ ತಡೆಗಟ್ಟುವವರು ಈಗ ಇದರ ಬಗ್ಗೆ ಏನಾದರೂ ಮಾತನಾಡುತ್ತಾರೆಯೇ ?

ಆಯುರ್ವೇದದಲ್ಲಿನ ಔಷಧಿಗಳನ್ನು ಈಗಾಗಲೇ ಕೊರೊನಾದ ವಿರುದ್ಧ ಅಭ್ಯಾಸ ಮಾಡಿ ಸರಿಯಾದ ರೀತಿಯಲ್ಲಿ ಬಳಸಿದ್ದರೆ, ಇಷ್ಟರೊಳಗೆ ದೇಶದಲ್ಲಾದ ಕೊರೊನಾದ ಪರಿಣಾಮವನ್ನು ಕಡಿಮೆಯಾಗಿ ಸಾವಿರಾರು ಜೀವಗಳನ್ನು ಉಳಿಸಬಹುದಿತ್ತು ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ !

(ಸಾಂಕೇತಿಕ ಛಾಯಾಚಿತ್ರ)

ನೆಲ್ಲೂರು (ಆಂಧ್ರಪ್ರದೇಶ) – ಇಲ್ಲಿನ ಕೃಷ್ಣಪಟ್ಟಣಮ್ ಗ್ರಾಮದಲ್ಲಿ, ಕೊರೊನಾ ನಿವಾರಣೆಗೆ ಆಯುರ್ವೇದ ಔಷಧಿಯನ್ನು ಪಡೆಯಲು ಸಾವಿರಾರು ಜನರು ೩ ಕಿ.ಮೀ ದೂರದ ತನಕ ಸರದಿಯ ಸಾಲಿನಲ್ಲಿ ನಿಂತಿದ್ದಾರೆ. ‘ಈ ಔಷಧಿಯಿಂದ ಕೊರೋನಾದಿಂದ ಗುಣಮುಖರಾಗಬಹುದು’ ಎಂದು ಔಷಧಿ ತೆಗೆದುಕೊಳ್ಳುವವರು ಹಾಗೂ ಔಷಧಿ ತಯಾರಕ ವೈದ್ಯರಾದ ಬೋಗಿನಿ ಆನಂದಯ್ಯ ಹೇಳುತ್ತಾರೆ. ಆನಂದಯ್ಯ ಇವರ ಔಷಧವು ಕಣ್ಣಿಗೆ ಹಾಕಿದ ನಂತರ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ. ವಿಶೇಷವೆಂದರೆ ಆನಂದಯ್ಯ ಈ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮುಖ್ಯವೆಂದರೆ ಅನೇಕ ನಾಯಕರು ಮತ್ತು ಅಧಿಕಾರಿಗಳು ಈ ಔಷಧದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಆನಂದಯ್ಯ ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ರಾಜ್ಯದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರೂ ಗಮನಿಸಿದ್ದಾರೆ. ಈ ಔಷಧಿಯನ್ನು ಪರೀಕ್ಷಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್.) ಸದಸ್ಯರ ತಂಡವನ್ನು ಗ್ರಾಮಕ್ಕೆ ಆಹ್ವಾನಿಸಲಾಗಿದೆ. ಅದೇರೀತಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಯುಷ್ ಮಂತ್ರಾಲಯದ ಸಚಿವ ಕಿರಣ ರಿಜಿಜು ಮತ್ತು ಐ.ಸಿ.ಎಂ.ಆರ್.ನ ಮಹಾನಿರ್ದೇಶಕ ಬಲರಾಮ ಭಾರ್ಗವ ಅವರೊಂದಿಗೆ ಇದರ ಬಗ್ಗೆ ಚರ್ಚಿಸಿದರು. ಈ ಔಷಧಿಯನ್ನು ಅಧ್ಯಯನ ಮಾಡಿ ಅದರ ವಿತರಣೆಯ ಕುರಿತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

೧. ಐ.ಸಿ.ಎಂ.ಆರ್.ನ ತಂಡವು ಆಯುರ್ವೇದ ಔಷಧಿ ಸಸ್ಯಗಳ ಎಲೆಗಳು ಮತ್ತು ಘಟಕಗಳನ್ನು ಪರೀಕ್ಷಿಸಿತು. ಜೊತೆಗೆ ಆನಂದಯ್ಯ ಅವರ ಔಷಧಿಯ ಪ್ರಕ್ರಿಯೆಯ ಬಗ್ಗೆಯೂ ವಿಚಾರಿಸಿಕೊಂಡಿದೆ.

. ಔಷಧದ ವಿತರಣೆಗೆ ಐ.ಸಿ.ಎಂ.ಆರ್. ಅನುಮತಿ ನೀಡದ ಕಾರಣ ಈ ಔಷಧದ ವಿತರಣೆಯನ್ನು ನಿಲ್ಲಿಸಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ನಂತರ ಔಷಧ ಸಿಗದ ಕಾರಣ ನಾಗರಿಕರು ಮನೆಗೆ ಮರಳಿದರು.

೩. ಆಯುಷ್ ವಿಭಾಗದ ಆಯುರ್ವೇದ ವೈದ್ಯರ ತಂಡವು ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಔಷದಿಯ ಬಗ್ಗೆ ವಿಚಾರಿಸಿದೆ. ಈ ತಂಡವು, ಔಷಧಿಯ ತಯಾರಿಕೆ, ಚಿಕಿತ್ಸಾ ಪ್ರಕ್ರಿಯೆ ಮತ್ತು ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುವುದು ಅಗತ್ಯ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿತು.

೪. ಆನಂದಯ್ಯ ಅವರು ಕಳೆದ ಕೆಲವು ವರ್ಷಗಳಿಂದ ಆಯುರ್ವೇದ ಔಷಧೀಯ ಸಸ್ಯಗಳೊಂದಿಗೆ ಔಷಧಿಗಳನ್ನು ತಯಾರಿಸುತ್ತಿದ್ದಾರೆ. ಅವರು ಇತ್ತೀಚೆಗೆ ಕೊರೊನಾದ ಬಗ್ಗೆ ಔಷಧಿಯನ್ನು ಅಭಿವೃದ್ಧಿಪಡಿಸಿದರು. ಶುಂಠಿ, ಖರ್ಜೂರ, ಬೆಲ್ಲ, ಜೇನುತುಪ್ಪ, ಕಪ್ಪು ಜೀರಿಗೆ, ಕಾಳು ಮೆಣಸು, ಲವಂಗ, ಬೇವಿನ ಎಲೆಗಳು, ಮಾವಿನ ಮರದ ಎಲೆಗಳು, ನೆಲ್ಲಿಕಾಯಿ, ಹತ್ತಿ ಮರ, ಹೂವಿನ ಮೊಗ್ಗುಗಳು, ಮುಳ್ಳಿನ ಬದನೆಕಾಯಿ ಇತ್ಯಾದಿಗಳನ್ನು ಇದರಲ್ಲಿ ಬಳಸಲಾಗುತ್ತದೆ.

ರೋಗಿಯು ಎಷ್ಟೇ ಗಂಭೀರವಾಗಿದ್ದರೂ, ೨ ದಿನಗಳಲ್ಲಿ ಗುಣವಾಗುತ್ತದೆ ! – ಶಾಸಕರ ಹೇಳಿಕೆ

ಶಾಸಕ ಕಾಕಣಿ ಗೋವರ್ಧನ ಮತ್ತು ಮಾಜಿ ಸಚಿವ ಚಂದ್ರಮೋಹನ ರೆಡ್ಡಿಯವರು ಮಾತನಾಡಿ, ರೋಗಿಯ ಸ್ಥಿತಿ ಎಷ್ಟೇ ಗಂಭೀರವಾಗಿದ್ದರೂ, ೨ ದಿನಗಳಲ್ಲಿ ಅವರು ಪಾಸಿಟೀವ್‍ನಿಂದ ನೆಗೆಟೀವ್ ಆಗುತ್ತಿದ್ದಾರೆ. ಎದೆಯಲ್ಲಿ ಸೋಂಕಿನ ತೀವ್ರತೆಯು ೨೪-೨೫ ರ ಅವಧಿಯಲ್ಲಿದ್ದಲ್ಲಿ ಅದು ಶೂನ್ಯವಾಗುತ್ತದೆ. ಕಳೆದ ಕೆಲವು ದಿನಗಳಲ್ಲಿ ಜನರ ದಟ್ಟಣೆ ಜಾಸ್ತಿ ಆದಾಗ ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದರು ಮತ್ತು ‘ಸರಕಾರವು ಔಷಧಿಗಳ ಪರಿಶೀಲನೆಯನ್ನು ಮಾಡಬೇಕು ಹಾಗೂ ಅಲ್ಲಿಯವರೆಗೆ ಅದರ ವಿತರಣೆಯನ್ನು ನಿಲ್ಲಿಸಬೇಕು’, ಎಂದು ಹೇಳಿದರು, ಜೊತೆಗೆ ಲೋಕಾಯುಕ್ತರ ಬಳಿ ದೂರನ್ನೂ ಸಹ ಸಲ್ಲಿಸಲಾಯಿತು.

ಔಷಧದ ಪರೀಕ್ಷಣೆ ಸಕಾರಾತ್ಮಕ !

ನೆಲ್ಲೂರಿನ ಜಿಲ್ಲಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ಆಯುರ್ವೇದ ವೈದ್ಯರು ಪರೀಕ್ಷಿಸಿದರು. ಇದಕ್ಕಾಗಿ ನೇಮಕಗೊಂಡ ಸಮಿತಿಯ ತಜ್ಞರೊಬ್ಬರು, ನಮ್ಮ ಮುಂದೆ ರೋಗಿಯ ಆಮ್ಲಜನಕದ ಮಟ್ಟ ೮೩ ಎಂದು ಹೇಳಿದರು. ಔಷಧದ ೨ ಹನಿಗಳನ್ನು ಕಣ್ಣಿಗೆ ಹಾಕಿದ ನಂತರ, ಅದು ೯೫ ಕ್ಕೆ ಏರಿತು. ಔಷಧಿಯನ್ನು ತೆಗೆದುಕೊಂಡ ಯಾವುದೇ ರೋಗಿಗಳು ಇದರ ಬಗ್ಗೆ ದೂರು ನೀಡಿಲ್ಲ. ಇದಕ್ಕೆ ವಿರುದ್ಧವಾಗಿ, ಆನಂದಯ್ಯ ಅವರಿಂದಾಗಿ ತಮ್ಮ ಜೀವ ಉಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

೩ ವಿಧದ ಔಷಧಗಳು !

ವೈದ್ಯ ಆನಂದಯ್ಯ ಅವರು, ನನ್ನ ಔಷಧಿ ರೋಗಿಗಳ ಜೀವವನ್ನು ಉಳಿಸುತ್ತದೆ. ನಾನು ೩ ರೀತಿಯ ಔಷಧಿಗಳನ್ನು ನೀಡುತ್ತೇನೆ. ಕೊರೊನಾ ಸೋಂಕು ಆಗದಂತೆ, ಸೊಂಕು ತಗಲಿದ್ದಲ್ಲಿ ಅವರು ಗುಣಮುಖರಾಗಲು ಮತ್ತು ಆಮ್ಲಜನಕ ಮಟ್ಟ ಹೆಚ್ಚಿಸುವುದು ಹೀಗೆ ಮೂರು ರೀತಿಯ ಔಷಧಿಗಳಿವೆ. ನಾನು ಔಷಧಿಗಾಗಿ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ.

ಔಷಧಿಗಳ ಬಳಸಲು ಸರಕಾರವು ಪ್ರೋತ್ಸಾಹ ನೀಡಲಿದೆ

ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಅವರು ಔಷಧಿ ಬಳಕೆಯನ್ನು ಉತ್ತೇಜಿಸಲು ಸರಕಾರವು ಚಿಂತನೆ ನಡೆಸುತ್ತಿದೆ.’ ಎಂದು ಹೇಳಿದ್ದಾರೆ. ಅದಕ್ಕಾಗಿ ಅಧಿಕಾರಿಗಳು ಔಷಧಿಗಳು ಮತ್ತು ಇತರ ಪೂರಕ ವಸ್ತುಗಳ ವಿತರಣೆಯ ಅಧ್ಯಯನ ಮಾಡಿದ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮೌಖಿಕವಾಗಿ ಆದೇಶಿಸಲಾಗಿದೆ.