ಪ್ರವಾದಿ ಏನಾದರೂ ಈಗ ಇದ್ದಿದ್ದರೆ, ಕಟ್ಟರ ಮುಸಲ್ಮಾನರ ಮೂರ್ಖತನಕ್ಕೆ ಆಶ್ಚರ್ಯ ಪಡುತ್ತಿದ್ದರು ! – ತಸ್ಲೀಮಾ ನಸ್ರಿನ್

ಒಂದುವೇಳೆ ಪೈಗಂಬರ ಇದ್ದಿದ್ದರೆ ಜಗತ್ತಿನಲ್ಲಿನ ಕಟ್ಟರ ಮುಸಲ್ಮಾನರ ಮೂರ್ಖತನವನ್ನು ನೋಡಿ ಅವರಿಗೆ ಆಶ್ಚರ್ಯವಾಗುತ್ತಿತ್ತು, ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರಿನ್ ಇವರು ನೂಪೂರ ಶರ್ಮಾ ಪ್ರಕರಣದಲ್ಲಿ ಮುಸಲ್ಮಾನರಿಂದಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದರು

ರಾಷ್ಟ್ರಪತಿ ಹುದ್ದೆಗೆ ಜುಲೈ ೧೮ ರಂದು ಮತದಾನ !

೧೫ನೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆಯನ್ನು ಕೇಂದ್ರೀಯ ಚುನಾವಣೆ ಆಯೋಗವು ಘೋಷಿಸಿದ್ದೂ ಜುಲೈ ೧೮ರಂದು ನಡೆಯಲಿದೆ ಹಾಗೂ ಜುಲೈ ೨೧ ರಂದು ಏಣಿಕೆಯಾಗಲಿದೆ ಎಂದು ಪ್ರಕಟಿಸಿದೆ. ಜುಲೈ ೨೫ರಂದು ನೂತನ ಅಧ್ಯಕ್ಷರು ಪ್ರಮಾಣ ವಚನ ಸ್ವಿಕರಿಸಲಿದ್ದಾರೆ.

`ಮುಸ್ಲಿಮನೊಬ್ಬ ಹಿಂದೂ ದೇವತೆಗಳ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ಒಂದು ಘಟನೆ ನನಗೆ ನೆನಪಿಲ್ಲ'(ವಂತೆ)

ಮುಸ್ಲಿಮನೊಬ್ಬ ಹಿಂದೂ ದೇವತೆಗಳ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ಒಂದು ಘಟನೆ ನನಗೆ ನೆನಪಾಗುತ್ತಿಲ್ಲ ಎಂದು ನಟ ನಾಸಿರುದ್ದಿನ ಶಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನೂಪುರ ಶರ್ಮಾ ಅವರು ಪ್ರವಾದಿ ಮೊಹಮ್ಮದ ಅವರನ್ನು ತಥಾಕಥಿತವಾಗಿ ಅವಮಾನಿಸಿರುವ ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿದ್ದರು.

‘ಹದಿಸ’ನಲ್ಲಿ ಏನು ತಪ್ಪಿದೆ, ಅದನ್ನು ತಕ್ಷಣ ಅಳಿಸಿ !

ನೂಪುರ ಶರ್ಮಾ ಮತ್ತು ಭಾಜಪ ವಿರುದ್ಧ ವಾಗ್ದಾಳಿ ನಡೆಸುವ ಬದಲು ‘ಹದಿಸ’ ಅನ್ನು ಏಕೆ ಖಚಿತಪಡಿಸಬಾರದು ? ಇದಕ್ಕೆ ಮುಸ್ಲಿಂ ಮುಖಂಡರು ಮುಂದಾಗಬೇಕು ಮತ್ತು ತಪ್ಪೇನು, ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಹಾಗಾಗಿ ನಂತರ ಯಾರೂ ಟೀಕೆ ಮಾಡುವುದಿಲ್ಲ ಎಂದು ಪಾಕಿಸ್ತಾನ ಮೂಲದ ಪತ್ರಕರ್ತೆ ತಹಾ ಸಿದ್ಧಿಕಿ ಟ್ವೀಟನಲ್ಲಿ ಹೇಳಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಭಾರತವನ್ನು ವಿರೋಧಿಸುವ ದೇಶಗಳ ಕಡೆಗೆ ಭಾರತವು ಗಮನ ನೀಡಬಾರದು ! – ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನ

ಭಾರತಕ್ಕೆ ಇಸ್ಲಾಮೀ ದೇಶಗಳಿಂದ ಉಂಟಾಗುವ ವಿರೋಧ ಹಾಗೂ ಕ್ಷಮೆ ಕೇಳಬೇಕು ಎಂಬ ಬೇಡಿಕೆಗಳು ಮಹತ್ವದ್ದಲ್ಲ. ಭಾರತವು ಇಂತಹ ಚಿಕ್ಕ ಚಿಕ್ಕ ಪ್ರತಿಕ್ರಿಯೆಗಳಿಂದ ತೊಂದರೆಗೊಳಗಾಗಲು ಸಾಧ್ಯವಿಲ್ಲ, ಎಂಬ ಶಬ್ದಗಳಲ್ಲಿ ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ನೂಪುರ ಶರ್ಮಾರವರ ಪ್ರಕರಣದಲ್ಲಿ ಇಲ್ಲಿನ ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಸೇನಾಧಿಕಾರಿಗಳಿಂದ `ಧಾರ್ಮಿಕ ಸ್ಥಳ ಕಾಯಿದೆ ೧೯೯೧’ ವಿರುದ್ಧ ಸುಪ್ರಿಂ ಕೋರ್ಟನಲ್ಲಿ ಅರ್ಜಿ ಸಲ್ಲಿಕೆ

೧೯೯೧ರ ಪೂಜಾ ಸ್ಥಳಗಳ ಕಾಯ್ದೆ ವಿರುದ್ಧ ನಿವೃತ್ತ ಕರ್ನಲ ಅನಿಲ ಕಬೋತ್ರಾ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಮೊದಲು ಈ ಕಾಯ್ದೆಯ ವಿರುದ್ಧ ಕೆಲವು ಅರ್ಜಿಗಳು ಸಲ್ಲಿಸಲಾಗಿದ್ದವು. ಅನಿಲ ಕಬೋತ್ರಾ ಅವರು ಈ ಅರ್ಜಿಯಲ್ಲಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಇಸ್ಲಾಮೀ ರಾಷ್ಟ್ರಗಳಿಂದ ಭಾರತಕ್ಕಾಗುವ ವಿರೋಧದ ಹಿಂದೆ ಓಮಾನ ಪ್ರಮುಖ ಧರ್ಮಗುರುಗಳ ಕೈವಾಡ !

ನೂಪುರ ಶರ್ಮಾ ಪ್ರಕರಣದಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಇಸ್ಲಾಮಿಕ ರಾಷ್ಟ್ರಗಳು ಆರಂಭಿಸಿವೆ. ಇದ್ರ ಹಿಂದೆ ಒಮಾನಿನ ಮುಖ್ಯ ಗುರು ಮುಫ್ತಿ ಶೇಖ ಅಹ್ಮದ ಬಿನ ಹಮದ ಅಲ-ಖಲೀಲಿ (ವಯಸ್ಸು ೭೯ ವರ್ಷ) ಇವರ ಕೈವಾಡವಿದೆ.

ಅರಬ ದೇಶದಲ್ಲಿ ಕಸದ ತೊಟ್ಟಿಯ ಮೇಲೆ ಪ್ರಧಾನಿ ಮೋದಿಯವರ ಛಾಯಾಚಿತ್ರ !

ಅರಬ ದೇಶದಲ್ಲಿನ ಒಂದು ಛಾಯಾಚಿತ್ರವು ಸದ್ಯ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಇದರಲ್ಲಿ ಕಸದ ತೊಟ್ಟಿಯ ಮೇಲೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಹಚ್ಚಲಾಗಿದ್ದು ಅದರ ಮೇಲೆ ಬೂಟಿನಿಂದಾದ ಕಲೆಗಳು ಕಂಡುಬರುತ್ತಿವೆ.

ಮುಸಲ್ಮಾನ, ಕ್ರೈಸ್ತ, ಸಿಖ್ಖ ಮುಂತಾದವರನ್ನು ಅಲ್ಪಸಂಖ್ಯಾತರೆಂದು ಘೋಷಿಸುವ ಅಧಿಸೂಚನೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇಂದ್ರ ಸರಕಾರದಿಂದ ಮುಸಲ್ಮಾನ, ಕ್ರೈಸ್ತ, ಸಿಖ್ಖ, ಬೌದ್ಧ, ಪಾರಸಿ ಹಾಗೂ ಜೈನರನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಘೋಷಿಸಿದ ೧೯೯೩ರಲ್ಲಿನ ಅಧಿಸೂಚನೆಯ ವಿರುದ್ಧ ದೇವಕೀನಂದನ ಠಾಕೂರ ರವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಬಿಜೆಪಿಯಿಂದ ನೂಪುರ ಶರ್ಮಾ ಅಮಾನತ್ತು !

ಬಿಜೆಪಿ ತನ್ನ ವಕ್ತಾರೆ ನೂಪುರ ಶರ್ಮಾ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಿದೆ. ಪ್ರವಾದಿ ಮೊಹಮ್ಮದ ಬಗ್ಗೆ ಅವರ ಅವಹೆಳನಕಾರಿ ಹೇಳಿಕೆಯನ್ನು ಸುದ್ದಿ ವಾಹಿನಿಯೊಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.