ಬಿಜೆಪಿಯಿಂದ ನೂಪುರ ಶರ್ಮಾ ಅಮಾನತ್ತು !

ಹೊಸ ದೆಹಲಿ : ಬಿಜೆಪಿ ತನ್ನ ವಕ್ತಾರೆ ನೂಪುರ ಶರ್ಮಾ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಿದೆ. ಪ್ರವಾದಿ ಮೊಹಮ್ಮದ ಬಗ್ಗೆ ಅವರ ಅವಹೆಳನಕಾರಿ ಹೇಳಿಕೆಯನ್ನು ಸುದ್ದಿ ವಾಹಿನಿಯೊಂದು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನವೀನ ಜಿಂದಾಲ ಅವರನ್ನೂ ಅಮಾನತ್ತು ಮಾಡಲಾಗಿದೆ. ನೂಪುರ ಶರ್ಮಾ ವಿರುದ್ಧ ದೇಶದ ಕೆಲವು ಭಾಗಗಳಲ್ಲಿ ಅಪರಾಧಗಳು ನೋಂದಾಯಿಸಲಾಗಿವೆ. ಕಾನಪುರದಲ್ಲಿ ಹಿಂಸಾಚಾರಕ್ಕೆ ನೂಪುರ ಶರ್ಮಾ ಪ್ರಕರಣವೇ ಕಾರಣ.

ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಅವಮಾನಿಸುವುದು ಅನುಚಿತ! – ಬಿಜೆಪಿ

ಬಿಜೆಪಿಯು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತದೆ ಮತ್ತು ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಅವಮಾನಿಸುವುದನ್ನು ವಿರೋಧಿಸುತ್ತದೆ ಎಂದು ನೂಪುರ ಶರ್ಮಾ ಹೆಸರನ್ನು ಉಲ್ಲೇಖಿಸದೆ ಬಿಜೆಪಿ ಹೇಳಿಕೆ ನೀಡಿದೆ.