`ಮುಸ್ಲಿಮನೊಬ್ಬ ಹಿಂದೂ ದೇವತೆಗಳ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ಒಂದು ಘಟನೆ ನನಗೆ ನೆನಪಿಲ್ಲ'(ವಂತೆ)

ನೂಪುರ ಶರ್ಮಾ ಪ್ರಕರಣದಲ್ಲಿ ನಟ ನಾಸಿರುದ್ದಿನ ಶಾ “ಸತ್ಯವಂತಿಕೆ”

ನವ ದೆಹಲಿ – ಮುಸ್ಲಿಮನೊಬ್ಬ ಹಿಂದೂ ದೇವತೆಗಳ ವಿರುದ್ಧ ಅಕ್ಷೇಪಾರ್ಹ ಹೇಳಿಕೆ ನೀಡಿದ ಒಂದೇ ಒಂದು ಘಟನೆ ನನಗೆ ನೆನಪಾಗುತ್ತಿಲ್ಲ ಎಂದು ನಟ ನಾಸಿರುದ್ದಿನ ಶಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನೂಪುರ ಶರ್ಮಾ ಅವರು ಪ್ರವಾದಿ ಮೊಹಮ್ಮದ ಅವರನ್ನು ತಥಾಕಥಿತವಾಗಿ ಅವಮಾನಿಸಿರುವ ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿದ್ದರು.

ಮುಂದುವರೆಸುತ್ತಾ…

೧. ಈ ಜನರಲ್ಲಿ (ನೂಪುರ ಶರ್ಮಾ ಅವರಂತೆ) ಒಳ್ಳೆಯ ಭಾವನೆಗಳನ್ನು ಮೂಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿ ಟ್ವಿಟರನಲ್ಲಿ ಈ ಜನರನ್ನು “ಫಾಲೋ” ಮಾಡುತ್ತಾರೆ. ಅವರು ಏನಾದರೂ ಮಾಡಬೇಕು, ಈ ವಿಷ ಇನ್ನಷ್ಟು ಹರಡುವುದನ್ನು ತಡೆಯಬೇಕು.

೨. ನೂಪಪುರ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿದ್ದರೆ ಅವುಗಳನ್ನು ಖಂಡಿಸಬೇಕು, ಹಾಗೆ ಯೋಚಿಸುವುದೂ ತಪ್ಪು. ಅದು ಮಾಡದೇ ಇರುವುದರಿಂದ ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸ್ಥಿತಿ ಹೀಗಾಗಿದೆ. ನಾವು ಆ ದೇಶಗಳನ್ನು ಅನುಕರಿಸಲು ಬಯಸುವದಿಲ್ಲ; ಆದರೆ ನಾವು ಸ್ವಲ್ಪ ಅದೇ ರೀತಿಯಲ್ಲಿ ಅದನ್ನೇ ಮಾಡುತ್ತಿದ್ದೇವೆ. ಗೋ ಹತ್ಯೆಯ ಶಂಕೆಯಲ್ಲಿ ಜನರನ್ನು ಕೊಲ್ಲಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದೂ ವಿರೋಧಿ ಚಿತ್ರಕಾರ ಎಮ್. ಎಫ್ ಹುಸೇನ ಇವನು ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳನ್ನು ಬಿಡಿಸಿದ್ದನ್ನದರೂ ನಾಸಿರುದ್ದಿನ ಶಾ ಹೇಗೆ ಮರೆತರು?

ಮುಸ್ಲಿಂ ದಾಳಿಕೋರರು ಈ ದೇಶದಲ್ಲಿ ಸಾವಿರಾರು ಹಿಂದೂ ದೇವಾಲಯಗಳನ್ನು ಕೆಡವಿದರು. ಈ ಇತಿಹಾಸವನ್ನು ಶಾ ಏಕೆ ಹೇಳುವದಿಲ್ಲ? ಈಗಲೂ ದೇಶದ ಅನೇಕ ಕಡೆಗಳಲ್ಲಿ ಶಾ ಅವರ ಧಾರ್ಮಿಕ ಬಂಧುಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿವೆ, ಹಿಂದೂಗಳ ಧಾರ್ಮಿಕ ಮೆರವಣಿಗೆಗಳು ಮೇಲೆ ಕಲ್ಲುತೂರಾಟ ನಡೆಸಲಾಗುತ್ತದೆ, ಇದೆಲ್ಲ ಶಾ ಗೆ ಕಾಣಿಸುವುದಿಲ್ಲವೇ?

ಜ್ಞಾನವ್ಯಾಪಿ ಪ್ರಕರಣದಲ್ಲಿ ಅನೇಕ ಮುಸಲ್ಮಾನ ಮುಖಂಡರು ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದನ್ನು ಶಾ ಗೆ ಕೇಳಿಸುವುದಿಲ್ಲವೇ?