ನವದೆಹಲಿ – ಕೇಂದ್ರ ಸರಕಾರದಿಂದ ಮುಸಲ್ಮಾನ, ಕ್ರೈಸ್ತ, ಸಿಖ್ಖ, ಬೌದ್ಧ, ಪಾರಸಿ ಹಾಗೂ ಜೈನರನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಘೋಷಿಸಿದ ೧೯೯೩ರಲ್ಲಿನ ಅಧಿಸೂಚನೆಯ ವಿರುದ್ಧ ದೇವಕೀನಂದನ ಠಾಕೂರ ರವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ. ಈ ಅಧಿಸೂಚನೆಯನ್ನು ಯದೃಚ್ಛೆ. ತರ್ಕರಹಿತ ಹಾಗೂ ಸಂವಿಧಾನದ ಕಲಂ ೧೪, ೧೫, ೨೧, ೨೯ ಹಾಗೂ ೩೦ರ ವಿರುದ್ಧವಿದೆ ಎಂದೂ ಅವರು ಹೇಳಿದ್ದಾರೆ.
ಈ ಅರ್ಜಿಯಲ್ಲಿ ‘ಕೆಲವು ರಾಜ್ಯಗಳಲ್ಲಿ ಹಾಗೂ ಭಾಗಗಳಲ್ಲಿ ಹಿಂದೂಗಳ ಸಂಖ್ಯೆಯು ಕಡಿಮೆ ಇದ್ದರೂ ಅವರಿಗೆ ಅಲ್ಪಸಂಖ್ಯಾತರ ಅಧಿಕಾರಗಳನ್ನು ನೀಡಲಾಗಿಲ್ಲ. ಲಡಾಖನಲ್ಲಿ ಶೇ. ೧ರಷ್ಟು, ಮಿಝೋರಾಮಿನಲ್ಲಿ ಶೇ. ೨.೭೫ರಷ್ಟು, ಲಕ್ಷದ್ವೀಪದಲ್ಲಿ ಶೇ. ೨.೭೭ರಷ್ಟು, ಕಾಶ್ಮೀರದಲ್ಲಿ ಶೇ. ೪, ನಾಗಾಲ್ಯಾಂಡನಲ್ಲಿ ೮.೭೪, ಮೇಘಾಲಯದಲ್ಲಿ ೧೧.೫೨, ಅರುಣಾಚಲ ಪ್ರದೇಶದಲ್ಲಿ ೨೯, ಪಂಜಾಬಿನಲ್ಲಿ ೩೮.೪೯ ಹಾಗೂ ಮಣಿಪುರದಲ್ಲಿ ೪೧.೨೯ರಷ್ಟು ಹಿಂದೂಗಳಿದ್ದಾರೆ; ಆದರೆ ಕೇಂದ್ರ ಸರಕಾರವು ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಿಲ್ಲ. ಇನ್ನೊಂದು ಕಡೆಯಲ್ಲಿ ಮುಸಲ್ಮಾನ ಬಹುಸಂಖ್ಯಾತರಿರುವಾಗಲೂ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಲಾಗಿದೆ. ಲಕ್ಷದ್ವೀಪದಲ್ಲಿ ಮುಸಲ್ಮಾನರ ಜನಸಂಖ್ಯೆಯು ೯೬.೫೮ರಷ್ಟು, ಕಾಶ್ಮೀರದಲ್ಲಿ ೯೫ರಷ್ಟು, ಲಡಾಖಿನಲ್ಲಿ ೪೬ರಷ್ಟು ಇದೆ. ಇದರೊಂದಿಗೆ ನಾಗಾಲ್ಯಾಂಡನಲ್ಲಿ ಕ್ರೈಸ್ತರ ಜನಸಂಖ್ಯೆಯು ೮೮.೧೦ರಷ್ಟು, ಮೊಝೋರಾಮಿನಲ್ಲಿ ೮೭.೧೬ರಷ್ಟು, ಮೇಘಾಲಯದಲ್ಲಿ ೭೪.೫೯ರಷ್ಟು ಇದೆ. ಪಂಜಾಬಿನಲ್ಲಿ ೫೭.೬೯ರಷ್ಟು ಸಿಖ್ಖರಿದ್ದರೆ ಲಡಾಖಿನಲ್ಲಿ ಶೇ. ೫೦ರಷ್ಟು ಬೌದ್ಧರಿದ್ದಾರೆ’ ಎಂದು ಹೇಳಲಾಗಿದೆ.