ಪರಾತ್ಪರ ಗುರು ಡಾ. ಆಠವಲೆ ಅಮೂಲ್ಯ ವಿಚಾರ !
‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.
‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.
ಎಲ್ಲಿ ಯಾವುದಾದರೊಂದು ವಿಷಯದ ಹಲವು ವರ್ಷ ಸಂಶೋಧನೆಯನ್ನು ಮಾಡಿ ಸಂಖ್ಯಾಶಾಸ್ತ್ರದಿಂದ ನಿಷ್ಕರ್ಷ ಮಾಡುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಯಾವುದೇ ರೀತಿಯ ಸಂಶೋಧನೆಯನ್ನು ಮಾಡದೆ ಈಶ್ವರೀ ಜ್ಞಾನದಿಂದ ಸಿಗುವ ಯಾವುದೇ ವಿಷಯದ ನಿಷ್ಕರ್ಷ ತಕ್ಷಣ ಹೇಳುವ ಋಷಿಗಳು.
ನಾನು ಕರ್ಮಫಲದ ಕಡೆಗೆ ಜ್ಞಾನಯೋಗಕ್ಕನುಸಾರ ಸಾಕ್ಷಿಭಾವದಿಂದ ನೋಡುತ್ತೇನೆ ಮತ್ತು ಭಕ್ತಿಯೋಗದಂತೆ ‘ಎಲ್ಲವೂ ಈಶ್ವರೇಚ್ಛೆಯಿಂದ ಆಗುತ್ತದೆ’, ಎಂಬುದು ತಿಳಿದಿರುವುದರಿಂದ ಕರ್ಮಫಲನ್ಯಾಯದ ವಿಚಾರ ಮಾಡುವುದಿಲ್ಲ; ಹಾಗಾಗಿ ನಾನು ಸದಾ ಆನಂದದಲ್ಲಿರುತ್ತೇನೆ’.
‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’
‘ದೇವರು ಎಲ್ಲ ಮಾನವರಿಗೆ ಸಹಾಯ ಮಾಡುವುದಿಲ್ಲ. ಯಾರಾದರೊಬ್ಬ ದೇವತೆಯ ಭಕ್ತಿ ಮಾಡಲಾರಂಭಿಸಿದಾಗ, ದೇವತೆಯು ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.
ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ.
ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.
ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿಯಾಗುವುದು ಅಂದರೆ ಮೋಕ್ಷ ಸಿಗುವುದು ಈ ಮೂರು ವಿಷಯಗಳನ್ನು ಸಾಧ್ಯಗೊಳಿಸುವುದಕ್ಕೆ ಧರ್ಮ ಎಂದು ಹೇಳುತ್ತಾರೆ.
ಕಲಿಯುಗದಲ್ಲಿ ಜನಸಾಮಾನ್ಯನಲ್ಲಿ ಸ್ವಭಾವದೋಷ ಮತ್ತು ಅಹಂಗಳ ಪ್ರಮಾಣ ಹೆಚ್ಚಿರುವುದರಿಂದ, ಅಂದರೆ ಅವನು ಸಾತ್ತ್ವಿಕನಾಗಿ ಇಲ್ಲದಿರುವುದರಿಂದ ಅವನಿಗೆ ಸಾಧನೆ ಮಾಡುವುದು ಅಸಾಧ್ಯವಾಗಿರುತ್ತದೆ.
‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ ಅದರಲ್ಲಿ ಹೆಚ್ಚಿನ ಆನಂದವಿದೆ’.