R Ashok Criticizes Karnataka Govt : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ!

ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಇವರಿಂದ ತೀವ್ರ ವಾಗ್ದಾಳಿ

ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಕಾರ್ಯಕರ್ತರನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಇಸ್ಲಾಮಿಕ್ ಸಂಘಟನೆಗಳು ಕೊಂದಿವೆ ಎಂದು ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಸರಕಾರವನ್ನು ಟೀಕಿಸಿದ್ದಾರೆ. ಅವರು ರಾಜ್ಯದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ರಾಜು, ರಾಜೇಶ್ ಕೋಟ್ಯಾನ್, ಪ್ರವೀಣ್ ಪೂಜಾರಿ, ಚರಣ್ ಪೂಜಾರಿ, ವಿಶ್ವನಾಥ್ ಮುಂತಾದ ಸಂಘದ ಹಲವು ಕಾರ್ಯಕರ್ತರ ಹೆಸರುಗಳನ್ನು ಉಲ್ಲೇಖಿಸಿದರು. ಇವರೆಲ್ಲರನ್ನೂ ಹತ್ಯೆ ಮಾಡಲಾಗಿದೆ.

ಅಶೋಕ ಇವರು ಮಾತು ಮುಂದುವರೆಸಿ,

೧. ಕೊಡಗಿನ ವಿನಯ ಸೋಮಯ್ಯ ಎಂಬ ಕಾರ್ಯಕರ್ತ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೂ ಮೊದಲು ಟಿಪ್ಪು ಸುಲ್ತಾನ್ ಜಯಂತಿಯ ಸಂದರ್ಭದಲ್ಲಿ ವೃದ್ಧರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಕಾಂಗ್ರೆಸ್ ಸರಕಾರ ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ.

೨. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆದರೆ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುತ್ತಾರೆ.

೩. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿದ್ದವು; ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆದರೆ ಕೊಡಗು ಕೂಡ ಕಾಶ್ಮೀರದಂತಾಗುತ್ತದೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ಸರಕಾರವೆಂದರೆ ಪಾಕಿಸ್ತಾನದ ಆಡಳಿತವಿದ್ದಂತೆ! ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸದೆ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ; ಆದರೆ ಇದಕ್ಕೆ ಹಿಂದೂಗಳು ಸಿದ್ಧರಿದ್ದಾರೆಯೇ? ಏಕೆಂದರೆ ಹಿಂದೂಗಳೇ ಕಾಂಗ್ರೆಸ್ ವನ್ನು ರಾಜಕೀಯವಾಗಿ ಇಂದಿಗೂ ಜೀವಂತವಾಗಿಟ್ಟಿದ್ದಾರೆ!