ವಿಭಾಗದಲ್ಲಿ, ಕೇಂದ್ರಗಳಲ್ಲಿ ಒಬ್ಬ ಒಳ್ಳೆಯ ಸಾಧಕನಿದ್ದರೆ, ಅಲ್ಲಿ ಕಲಿಯುವ ವೃತ್ತಿ ಇರುವ ಎಲ್ಲ ಸಾಧಕರು ಸುಧಾರಿಸುತ್ತಾರೆ  !

ಪರಾತ್ಪರ ಗುರು ಡಾ. ಆಠವಲೆ

‘ಸಾಧಕರ ಸಾಧಕತ್ವವು ಅವರ ನಡತೆ-ಮಾತುಗಳಿಂದ ವ್ಯಕ್ತವಾಗುತ್ತಿರುತ್ತದೆ’. ಸಾಧಕತ್ವ ಇರುವವರ ಪ್ರಭಾವ ಇತರರ ಮೇಲೆ ತಕ್ಷಣ ಆಗುತ್ತದೆ. ಆ ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ. ಆದ್ದರಿಂದ ಅವರ ಸಾಧನೆಯೂ ಚೆನ್ನಾಗಿ ಆಗುತ್ತದೆ. ಆದುದರಿಂದ ಬೌದ್ಧಿಕಶಾಸ್ತ್ರದ ಸ್ಪಂದನಗಳ ಪರಿಣಾಮದಂತೆ (ರೆಝೊನನ್ಸ ಇಫೆಕ್ಟ್ನಂತೆ) ಆ ಸಾಧಕರ ಸಂಪರ್ಕದಲ್ಲಿರುವ ಸಾಧಕರಲ್ಲಿಯೂ ಸಕಾರಾತ್ಮಕ ಬದಲಾವಣೆ ಕಂಡು ಬರುತ್ತದೆ.

‘ವಿಜ್ಞಾನಕ್ಕೆ ಅಧ್ಯಾತ್ಮಶಾಸ್ತ್ರದ ಪ್ರಮಾಣಪತ್ರ ಬೇಕಾಗುವುದಿಲ್ಲ, ಹಾಗಾದರೆ ಅಧ್ಯಾತ್ಮಕ್ಕೆ ವಿಜ್ಞಾನದ ಪ್ರಮಾಣಪತ್ರ ಏತಕ್ಕೆ ?’

– (ಪರಾತ್ಪರ ಗುರು) ಡಾ. ಆಠವಲೆ (೧.೧೦.೨೦೨೧)