ನವದೆಹಲಿ – ಫ್ರಾನ್ಸ್‌ನಿಂದ 26 ರಫೇಲ್ ನೌಕಾ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲು ಭಾರತ ಸರಕಾರವು ಅನುಮೋದನೆ ನೀಡಿದೆ. 63 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಈ ಸರಕಾರಿ ಒಪ್ಪಂದ ಶೀಘ್ರದಲ್ಲೇ ಆಗಬಹುದು. ಈ ಒಪ್ಪಂದದ ಪ್ರಕಾರ, ಭಾರತೀಯ ನೌಕಾಪಡೆಗೆ 22 ಏಕ ಆಸನದ ಮತ್ತು 4 ಎರಡು ಆಸನಗಳ ವಿಮಾನಗಳು ಸಿಗುವುದು. ಇದಕ್ಕೂ ಮೊದಲು ಭಾರತವು ತನ್ನ ವಾಯುಪಡೆಗಾಗಿ ಫ್ರಾನ್ಸ್‌ನಿಂದ 59 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು.
ಭಾರತೀಯ ನೌಕಾಪಡೆಯ ಯುದ್ಧದ ಶಕ್ತಿ ಹೆಚ್ಚಾಗುವುದು!
ಫ್ರಾನ್ಸ್‌ನ ‘ಡಸಾಲ್ಟ್ ಏವಿಯೇಷನ್’ ಸಂಸ್ಥೆಯು ನಿರ್ಮಿಸಿದ ಭಾರತೀಯ ವಾಯುಪಡೆಯ ರಫೇಲ್ ವಿಮಾನದಂತೆಯೇ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಮರ್ಥ್ಯಗಳನ್ನು ‘ರಫೇಲ್-ಎಂ ಜೆಟ್’ಗಳು ಹೊಂದಿರಲಿವೆ. ಈ ವಿಮಾನಗಳು ಭಾರತೀಯ ನೌಕಾಪಡೆಗೆ ಒಂದು ಹೊಸ ಕ್ರಾಂತಿಯನ್ನು ತರಲಿದ್ದು, ಅದರಿಂದ ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೆಚ್ಚಾಗುವುದು. ಈ ವಿಮಾನಗಳನ್ನು ವಿಮಾನವಾಹಕ ನೌಕೆಗಳಲ್ಲಿಯೂ ಬಳಸಬಹುದು, ಅದರಿಂದ ಭಾರತೀಯ ನೌಕಾಪಡೆಯ ಕಾರ್ಯತಂತ್ರದ ಶಕ್ತಿಯು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವುದು. ಈ ಮೂಲಕ ಭಾರತಕ್ಕೆ ಚೀನಾ ಮತ್ತು ಪಾಕಿಸ್ತಾನದಂತಹ ಶತ್ರು ರಾಷ್ಟ್ರಗಳ ವಿರುದ್ಧ ಒಂದು ಹೋರಾಟದ ಶಕ್ತಿಯೂ ಸಹ ಸಿಗುವುದು.