ಕಲಿಯುಗದಲ್ಲಿ ‘ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ’ಯೇ ಸಾಧನೆಯ ಅಡಿಪಾಯವಾಗಿದೆ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಮನುಷ್ಯರು ಸಾತ್ತ್ವಿಕರಾಗಿದ್ದರು. ಅವರಲ್ಲಿ ಸ್ವಭಾವದೋಷ ಮತ್ತು ಅಹಂ ಕಡಿಮೆಯಿತ್ತು. ಇದರಿಂದ ಯಾವುದೇ ಯೋಗಮಾರ್ಗದಿಂದಲೂ ಅವರಿಗೆ ಸಾಧನೆ ಮಾಡಲು ಸಾಧ್ಯವಿತ್ತು. ಈಗ ಕಲಿಯುಗವಿದೆ. ಈಗ ಜನಸಾಮಾನ್ಯನಲ್ಲಿ ಸ್ವಭಾವದೋಷ ಮತ್ತು ಅಹಂಗಳ ಪ್ರಮಾಣ ಹೆಚ್ಚಿರುವುದರಿಂದ, ಅಂದರೆ ಅವನು ಸಾತ್ತ್ವಿಕನಾಗಿ ಇಲ್ಲದಿರುವುದರಿಂದ ಅವನಿಗೆ ಸಾಧನೆ ಮಾಡುವುದು ಅಸಾಧ್ಯವಾಗಿರುತ್ತದೆ. ಕಲಿಯುಗದಲ್ಲಿ ಮನುಷ್ಯನು ಮೊದಲು ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ ಮಾಡಿದರೆ, ಅವನು ಸಾತ್ತ್ವಿಕನಾಗಿ ಸಾಧನೆಯನ್ನು ಮಾಡಬಲ್ಲನು; ಆದ್ದರಿಂದ ಸನಾತನ ಸಂಸ್ಥೆಯಲ್ಲಿ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ ಮಾಡಲು ಪ್ರಾಮುಖ್ಯತೆ ನೀಡಲಾಗುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೬.೯.೨೦೨೧)