Patanjali Ramdev Baba Claims : ಕಂಪನಿಯ ಶರಬತ್ತಿನ ಹಣದಿಂದ ಮಸೀದಿ ಮತ್ತು ಮದರಸಾಗಳ ನಿರ್ಮಾಣ !

  • ಯೋಗ ಋಷಿ ರಾಮದೇವ್‌ಬಾಬಾ ಅವರಿಂದ ಪತಂಜಲಿಯ ಶರಬತ್ತಿನ ಜಾಹೀರಾತಿನಲ್ಲಿ ಒಂದು ಸಂಸ್ಥೆಯ ಮೇಲೆ ಆರೋಪ

  • ‘ಶರಬತ ಜಿಹಾದ್’ ಮಾಡಲಾಗುತ್ತಿದೆ ಎಂದೂ ದಾವೆ !

ಹರಿದ್ವಾರ (ಉತ್ತರಾಖಂಡ) – ಯೋಗಋಷಿ ರಾಮದೇವಬಾಬಾ ಅವರು ತಮ್ಮ ಪತಂಜಲಿ ಸಂಸ್ಥೆಯು ತಯಾರಿಸಿದ ಶರಬತ್ತಿನ ಜಾಹೀರಾತಿನಲ್ಲಿ ‘ಶರಬತ ಜಿಹಾದ್’ ಎಂದು ದಾವೆ ಮಾಡಿದ್ದಾರೆ. ಅವರು ಒಂದು ಸಂಸ್ಥೆಯ ಹೆಸರನ್ನು ಉಲ್ಲೇಖಿಸದೆ ಅದರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ದೇಶದಲ್ಲಿ ಚರ್ಚೆ ಪ್ರಾರಂಭವಾಗಿದೆ. ರಾಮದೇವಬಾಬಾ ಅವರು, ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಲು ಜನರು ತಂಪು ಪಾನೀಯಗಳನ್ನು ಕುಡಿಯುತ್ತಾರೆ, ಅವು ಮೂಲತಃ ಶೌಚಾಲಯವನ್ನು ಸ್ವಚ್ಛಗೊಳಿಸುವ ದ್ರಾವಣಗಳಾಗಿವೆ. ಒಂದು ಕಡೆ ಶೌಚಾಲಯವನ್ನು ಸ್ವಚ್ಛಗೊಳಿಸುವ ವಿಷದ ಆಕ್ರಮಣವಿದೆ, ಮತ್ತೊಂದೆಡೆ ಶರಬತ್ತು ಮಾರಾಟ ಮಾಡುವ ಒಂದು ಸಂಸ್ಥೆಯಿದೆ, ಅದು ಶರಬತ್ತಿನಿಂದ ಬಂದ ಹಣವನ್ನು ಮಸೀದಿ ಮತ್ತು ಮದರಸಾಗಳನ್ನು ಕಟ್ಟಲು ಬಳಸುತ್ತದೆ. ಅದು ಸರಿ, ಅದು ಅವರ ಧರ್ಮ. ಆ ಸಂಸ್ಥೆಯ ಶರಬತ್ತನ್ನು ಕುಡಿಯುವುದರಿಂದ ಮಸೀದಿ ಮತ್ತು ಮದರಸಾಗಳ ನಿರ್ಮಾಣಕ್ಕೆ ಹಣ ಸಿಗುತ್ತದೆ, ಆದರೆ ಪತಂಜಲಿಯ ಶರಬತ್ತು ಗುರುಕುಲ, ಆಚಾರ್ಯಕುಲಂ, ಪತಂಜಲಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಶಿಕ್ಷಣ ಮಂಡಳಿಗೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ‘ಲವ್ ಜಿಹಾದ್’ ಮತ್ತು ‘ವೋಟ್ ಜಿಹಾದ್’ ಇರುವಂತೆಯೇ, ‘ಶರಬತ್ ಜಿಹಾದ್’ ಕೂಡ ಇದೆ; ಆದ್ದರಿಂದ ನೀವು ಈ ಶರಬತ ಜಿಹಾದ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು, ಎಂದು ಹೇಳಿದರು.