Kyrgyzstan Burqa Ban : ಕಿರ್ಗಿಸ್ತಾನ್‌ದಲ್ಲಿ ಬುರ್ಖಾ ಮತ್ತು ಹಿಜಾಬ್ ಮೇಲೆ ನಿಷೇಧ

ಶರಿಯಾ ಕಾನೂನಿನಲ್ಲಿ ಬುರ್ಖಾ ಕಡ್ಡಾಯವಲ್ಲ

ಬಿಶ್ಕೆಕ್ – ಮಧ್ಯ ಏಷ್ಯಾದಲ್ಲಿ ಕಿರ್ಗಿಸ್ತಾನ್ ಇಸ್ಲಾಮೀ ದೇಶದಲ್ಲಿ ಮಹಿಳೆಯರು ಬುರ್ಖಾ ಮತ್ತು ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ‘ಬುರ್ಖಾ ಮತ್ತು ಹಿಜಾಬ್ ಇವುಗಳಲ್ಲಿ ಭಯೋತ್ಪಾದಕರು ಅಡಗಿಕೊಳ್ಳ ಬಹುದು’, ಎಂದು ಕಿರ್ಗಿಸ್ತಾನ್ ಸರಕಾರ ಹೇಳಿದೆ. ‘ಅದರಿಂದ ಮಹಿಳೆಯರು ಹಿಜಾಬ ಧರಿಸಿ ರಸ್ತೆಯಲ್ಲಿ ಓಡಾಡಬಾರದು, ಎಂದು  ಕಿರ್ಗಿಸ್ತಾನ್ ಸರಕಾರ ನಿಶ್ಚಯಿಸಿದೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು.

೧. ಕಿರ್ಗಿಸ್ತಾನದಲ್ಲಿನ ಮುಸಲ್ಮಾನರ ಆಧ್ಯಾತ್ಮಿಕ ಆಡಳಿತವು (‘ಮುಫ್ತಯಾತ’) ಸರಕಾರದ ಪ್ರಸ್ತಾವವನ್ನು ಅಂಗೀಕರಿಸಿದೆ. ‘ಯಾವ ಮಹಿಳೆಯರು ಸಂಪೂರ್ಣ ಶರೀರ ಮುಚ್ಚಿಕೊಂಡು ಹೋಗುತ್ತಾರೆ, ಅವರು ಇತರ ಗ್ರಹಗಳ ಜೀವಿ ಅನಿಸುತ್ತದೆ. ಆದ್ದರಿಂದ ಮಹಿಳೆಯರು ಕೇವಲ ಮುಖ ಮುಚ್ಚಿಕೊಂಡು ಹೋಗಬಹುದು ಎಂದು, ‘ಮುಫ್ತಯಾತ’ ಹೇಳಿದೆ.

೨. ಶರಿಯಾ ಕಾನೂನಿನಲ್ಲಿ ತಲೆಯಿಂದ ಕಾಲಿನವರೆಗೆ ಶರೀರ ಮುಚ್ಚುವುದು ಅನಿವಾರ್ಯಗೊಳಿಸಿಲ್ಲ. ಆದ್ದರಿಂದ ಇಂತಹ ನಿರ್ಣಯದ ವಿರುದ್ಧ ಫತ್ವಾ ಹೊರಡಿಸಲು ಸಾಧ್ಯವಿಲ್ಲ.

೩. ಎಲ್ಲರೂ ಸರಕಾರದ ಆದೇಶವನ್ನು ತಕ್ಷಣ ಪಾಲಿಸಬೇಕು. ಸರಕಾರವು ಸುರಕ್ಷಯ ಕಾರಣದಿಂದ ಈ ನಿರ್ಣಯ ತೆಗೆದುಕೊಂಡಿದೆ. ಸರಕಾರದ ಮಾತು ಕೇಳಬೇಕು; ಕಾರಣ ಬುರ್ಖಾ ನಿಷೇಧ ಹೇರದಿದ್ದರೇ ಅಪರಾಧ ಹೆಚ್ಚಾಗಬಹುದು’, ಎಂದು ಮುಫ್ತಯಾತ ಹೇಳಿದೆ.

ನಿಯಮ ಉಲ್ಲಂಘಿಸಿದೆ ಕಠಿಣ ಶಿಕ್ಷೆ

ಅಪರಾಧಿಗಳು ಬುರ್ಖದ ದುರುಪಯೋಗ ಮಾಡಿಕೊಳ್ಳತಾರೆ. ಇದರ ಬಗ್ಗೆ ಅನೇಕ ಉದಾಹರಣೆಗಳು ಬೆಳಕಿಗೆ ಬಂದಿವೆ. ಬುರ್ಖಾ ಮತ್ತು ಹಿಜಾಬ್ ಇವುಗಳ ಮೇಲಿನ ನಿಷೇಧ ಉಲ್ಲಂಘನೆ ಮಾಡುವವರಿಗೆ ಜೈಲು ಶಿಕ್ಷೆ ಹಾಗೂ ೨೦ ಸಾವಿರ ಸೋಮ (ಕಿರ್ಗಿಸ್ತಾನ್ ದ ಆರ್ಥಿಕ ಚಲನ) ದಂಡ ವಿಧಿಸುವ ವ್ಯವಸ್ಥೆ ಇದೆ. ಜನವರಿ ೨೦೨೫ ರಲ್ಲಿ ಸರಕಾರ ಕಾನೂನು ಜಾರಿಗೊಳಿಸುವ ನಿರ್ಣಯ ತೆಗೆದುಕೊಂಡಿತ್ತು. ದೇಶದ ರಾಷ್ಟ್ರಪತಿಗಳು ಬುರ್ಖಾಧರಿಸುವ ದರ ವಿರುದ್ಧ ವಿಶೇಷ ಅಭಿಯಾನ ನಡೆಸಲು ಸೂಚಿಸಿದ್ದಾರೆ. ಕಿರ್ಗಿಸ್ತಾನ್ ದಲ್ಲಿ ಶೇಕಡ ೯೦ ರಷ್ಟು ಜನಸಂಖ್ಯೆ ಮುಸಲ್ಮಾನದ್ದಾಗಿದೆ. ಇಲ್ಲಿ ಸುನ್ನಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗಿದೆ.

ಸಂಪಾದಕೀಯ ನಿಲುವು

  • ಇಸ್ಲಾಮಿ ದೇಶದಲ್ಲಿ ಬುರ್ಖಾ ಮತ್ತು ಹಿಜಾಬ್ ನಿಷೇಧಿಸಲಾಗುತ್ತದೆ ಆದರೆ ಜಾತ್ಯತೀತ ಭಾರತದಲ್ಲಿ ಅದು ಏಕೆ ಸಾಧ್ಯವಿಲ್ಲ ?
  • ಯಾವಾಗಲೂ ಶರಿಯಾ ಎಂದು ಹೇಳಿ ಮುಸಲ್ಮಾನರು ಮಹಿಳೆಯರಿಗೆ ಬುರ್ಖಾಧರಿಸಲು ಅನಿವಾರ್ಯ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಮುಸಲ್ಮಾನರು ಏನು ಹೇಳುವರು ?