Bilaspur Conversion Racket Busted : ಬಿಲಾಸಪುರ(ಛತ್ತೀಸಗಢ)ದಲ್ಲಿ ಹಿಂದೂಗಳ ಮತಾಂತರಕ್ಕೆ ಪ್ರಯತ್ನ, ಪಾದ್ರಿ ಸೇರಿದಂತೆ 6 ಜನರ ಬಂಧನ !

ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ ರೋಗ ಮತ್ತು ಬಡತನ ನಿವಾರಣೆಯಾಗುವುದಾಗಿ ಹೇಳಿಕೆ !

ಬಿಲಾಸಪುರ (ಛತ್ತೀಸಗಢ) – ಛತ್ತೀಸಗಢದ ಬಿಲಾಸಪುರದಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಶ್ರೀರಾಮನವಮಿ ದಿನದಂದು ಬಹತರಾಯಿಯಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ನಡೆಯುತ್ತಿದ್ದ ಹಿಂದೂಗಳ ಮತಾಂತರದ ಪ್ರಯತ್ನವನ್ನು ಹಿಂದೂ ಸಂಘಟನೆಗಳು ವಿಫಲಗೊಳಿಸಿವೆ. ಅನಂತರ ಪೊಲೀಸರು ಘಟನಾಸ್ಥಳಕ್ಕೆ ತೆರಳಿ ಪಾದ್ರಿ ದೀಪಕ ಸಿಂಗ ಸಿದಾರ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ.

1. ಬಹತರಾಯಿಯಲ್ಲಿರುವ ಅಟಲ ಆವಾಸನಲ್ಲಿ ದೀಪಾ ಗೋಟೆಲ, ಪಾದ್ರಿ ದೀಪಕ ಸಿಂಗ ಸಿದಾರ ಮತ್ತು ಅವರ ಪತ್ನಿ ಪೂಜಾ ಸಿದಾರರವರು ಸೇರಿ ಸುಮಾರು 50 ಹಿಂದೂಗಳನ್ನು ತಮ್ಮ ಧರ್ಮವನ್ನು ತೊರೆದು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಪ್ರೇರೇಪಿಸುತ್ತಿದ್ದರು.

2. ಶ್ರೀರಾಮನವಮಿಯಂದು ಚಿಕಿತ್ಸಾ ಸಭೆಯ ನೆಪದಲ್ಲಿ ಹಿಂದೂಗಳನ್ನು ಕರೆಯಿಸಲಾಗಿತ್ತು. ಕ್ರೈಸ್ತ ಮಿಷನರಿಗಳು ಈ ಜನರಿಗೆ ಆಮಿಷವೊಡ್ಡಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು. ಈ ಮತಾಂತರದ ಬಗ್ಗೆ ಮಾಹಿತಿ ದೊರೆಯುತ್ತಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಮತಾಂತರ ತಡೆಯಲು ಯತ್ನಿಸಿದರು.

3. ಮತಾಂತರದ ಮಾಹಿತಿ ದೊರೆಯುತ್ತಲೇ ಸರಕಂಡಾ ಪೊಲೀಸ ಠಾಣೆಯ ಉಸ್ತುವಾರಿ ನೀಲೇಶ ಪಾಂಡೆಯವರು ತಮ್ಮ ತಂಡದೊಂದಿಗೆ ಘಟನಾಸ್ಥಳಕ್ಕೆ ಆಗಮಿಸಿದರು. ಘಟನಾಸ್ಥಳದಿಂದ ಪೊಲೀಸರು ದೀಪಾ ಗೋಟೆಲ, ಪಾದ್ರಿ ದೀಪಕ ಸಿಂಗ ಸಿದಾರ, ಪೂಜಾ ಸಿದಾರ, ಗುರ್ವಿಂದರ ಸಿಂಗ, ಶಿವಕುಮಾರ ಧಿವಾರ ಮತ್ತು ಮಧು ಕುಮಾರ ಕೆವಟ ಅವರನ್ನು ವಶಕ್ಕೆ ಪಡೆದರು.

ಸಂಪಾದಕೀಯ ನಿಲುವು

  • ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಈ ರೀತಿಯಲ್ಲಿ ಹಿಂದೂಗಳ ಮತಾಂತರ ನಡೆಯುತ್ತಿದ್ದರೂ, ಇಲ್ಲಿಯವರೆಗೂ ದೇಶವ್ಯಾಪಿ ಮತಾಂತರ ವಿರೋಧಿ ಕಾನೂನು ಜ್ಯಾರಿಯಾಗದಿರುವುದು ವಿಪರ್ಯಾಸ !
  • ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಅವರಲ್ಲಿನ ಧರ್ಮಾಭಿಮಾನವನ್ನು ಹೆಚ್ಚಿಸುವುದೇ ಅವರ ಮತಾಂತರವನ್ನು ತಡೆಯಲು ಇರುವ ಪರಿಣಾಮಕಾರಿ ಉಪಾಯ !