ವಿಭಾಗದಲ್ಲಿ, ಕೇಂದ್ರಗಳಲ್ಲಿ ಒಬ್ಬ ಒಳ್ಳೆಯ ಸಾಧಕನಿದ್ದರೆ, ಅಲ್ಲಿ ಕಲಿಯುವ ವೃತ್ತಿ ಇರುವ ಎಲ್ಲ ಸಾಧಕರು ಸುಧಾರಿಸುತ್ತಾರೆ  !

ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಇಡೀ ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆಯನ್ನು ಉತ್ತಮವಾಗಿಡುವುದು ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮತ್ತು ಪಾರಲೌಕಿಕ ಉನ್ನತಿಯಾಗುವುದು ಅಂದರೆ ಮೋಕ್ಷ ಸಿಗುವುದು ಈ ಮೂರು ವಿಷಯಗಳನ್ನು ಸಾಧ್ಯಗೊಳಿಸುವುದಕ್ಕೆ ಧರ್ಮ ಎಂದು ಹೇಳುತ್ತಾರೆ.

ಕಲಿಯುಗದಲ್ಲಿ ‘ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ’ಯೇ ಸಾಧನೆಯ ಅಡಿಪಾಯವಾಗಿದೆ !

ಕಲಿಯುಗದಲ್ಲಿ ಜನಸಾಮಾನ್ಯನಲ್ಲಿ ಸ್ವಭಾವದೋಷ ಮತ್ತು ಅಹಂಗಳ ಪ್ರಮಾಣ ಹೆಚ್ಚಿರುವುದರಿಂದ, ಅಂದರೆ ಅವನು ಸಾತ್ತ್ವಿಕನಾಗಿ ಇಲ್ಲದಿರುವುದರಿಂದ ಅವನಿಗೆ ಸಾಧನೆ ಮಾಡುವುದು ಅಸಾಧ್ಯವಾಗಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಮಾಡಿ ನೋಡಿರಿ ಅದರಲ್ಲಿ ಹೆಚ್ಚಿನ ಆನಂದವಿದೆ’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಯಾರು ಹಿಂದೂ ಧರ್ಮವನ್ನು ಟೀಕಿಸುತ್ತಾರೋ ಅವರಂತಹ ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನಿರ್ಗುಣ ಈಶ್ವರೀತತ್ತ್ವದೊಂದಿಗೆ ಏಕರೂಪವಾದ ಮೇಲೆಯೇ ನಿಜವಾದ ಶಾಂತಿ ಅನುಭವಿಸಬಹುದಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸನಾತನ ಸಂಸ್ಥಯಲ್ಲಿ ಕಾರ್ಯಕರ್ತರಿಲ್ಲ ಬದಲಾಗಿ ಸಾಧಕರಿರುವುದರಿಂದ ಅವರು ಪ್ರತಿಯೊಂದು ಕಾರ್ಯವನ್ನು ಸೇವೆಯೆಂದು ಮಾಡುತ್ತಾರೆ. ಅದುದರಿಂದ ಅವರು ಸ್ವತಃ ಮುಂದಾಳತ್ವ ವಹಿಸಿಕೊಂಡು ಕಾರ್ಯ ಮಾಡುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ವ್ಯವಹಾರದಲ್ಲಿ ಹೆಚ್ಚುಹೆಚ್ಚು ಗಳಿಸುವುದಿರುತ್ತದೆ ಆದರೆ ಸಾಧನೆಯಲ್ಲಿ ಸರ್ವಸ್ವದ ತ್ಯಾಗವಿರುತ್ತದೆ; ಹಾಗಾಗಿ ವ್ಯವಹಾರದ ಮನುಷ್ಯನು ದುಃಖದಲ್ಲಿರುತ್ತಾನೆ, ಆದರೆ ಸಾಧಕರ ಆನಂದದಲ್ಲಿರುತ್ತಾರೆ.

ಸನಾತನ ಸಂಸ್ಥೆಯ ಗ್ರಂಥಗಳು ಎಲ್ಲ ಸ್ತರಗಳ ಜಿಜ್ಞಾಸುಗಳಿಗಾಗಿ ಉಪಯುಕ್ತ !

‘ಸನಾತನ ಸಂಸ್ಥೆಯ ಗ್ರಂಥಗಳಲ್ಲಿ ಅಧ್ಯಾತ್ಮ, ಧರ್ಮ, ವಿವಿಧ ಸಾಧನಾಮಾರ್ಗಗಳು, ದೇವತೆಗಳು ಇಂತಹ ವಿವಿಧ ವಿಷಯಗಳ ಜ್ಞಾನವು ಒಳಗೊಂಡಿವೆ.