ಹಿಂದೂಗಳೇ, ಸ್ವಾಮಿ ವಿವೇಕಾನಂದರ ಆಜ್ಞೆಯಂತೆ ವಿದೇಶಿಯಾಗಿದ್ದರೂ ಭಾರತೀಯ ಭಾಷೆ ಉಪಯೋಗಿಸಲು ಹೇಳಿದ ‘ಭಗಿನಿ ನಿವೇದಿತಾ’ರಿಂದ ಕಲಿಯಿರಿ !

ಭಗಿನಿ ನಿವೇದಿತಾರು “ಭಾಷಣದಲ್ಲಿ ಯಾವುದೇ ವಿಷಯವು ಒಳ್ಳೆಯದೆನಿಸಿದರೆ ಸ್ವಭಾಷೆಯಲ್ಲಿ, ಸಚ್ಚಿದಾನಂದ ಪರಮಾತ್ಮಾ ಕೀ ಜೈ, ಭಾರತಮಾತಾ ಕೀ ಜೈ, ಸದ್ಗುರು ಕೀ ಜೈ, ಎಂದು ಜಯಘೋಷ ಮಾಡಿ” ಎಂದರು. ಯುವಕರು ಕೂಡಲೇ ಆ ನಿರ್ದೇಶನ ಪಾಲಿಸಿದರು.

ಭಾರತೀಯರಿಗೆ ಭಿಕ್ಷೆ ಬೇಡುವಂತೆ ಮಾಡಿದ ಆಂಗ್ಲರು

ಗಾಂಧಿವಾದಿ ಲೇಖಕ ಧರ್ಮಪಾಲರು ಹೇಳುತ್ತಾರೆ, ‘ಆಂಗ್ಲರು ಮುಂದಿನ ಮುಖ್ಯ ತಪ್ಪುಮಾರ್ಗಗಳನ್ನು ಅವಲಂಬಿಸುತ್ತ ಭಾರತಕ್ಕೆ ಬಹುದೊಡ್ಡ ಹಾನಿ ಮಾಡಿದರು. ಅವರು ಇಲ್ಲಿಯ ಅಮೂಲ್ಯ ನೈಸರ್ಗಿಕ ಹಾಗೂ ಇತರ ಸಂಪತ್ತುಗಳನ್ನು ದೋಚಿದರು. ಇದರಿಂದ ಜನಸಾಮಾನ್ಯರು ಭಿಕ್ಷೆ ಬೇಡುವಂತಾದರು.

ಸತ್ಯಕ್ಕಿಂತ ಶಕ್ತಿಯುತ ಬೇರಾವುದೂ ಇಲ್ಲ !

ಕೇವಲ ಸತ್ಯ ಪುರಾವೆಯನ್ನು ಮುಂದಿಟ್ಟರೆ ಎಲ್ಲ ಉಹಾಪೋಹಗಳ ಹಾಗೂ ಪ್ರಚಾರಗಳ ಪೊಳ್ಳುತನವು ತನ್ನಿಂದತಾನೆ ಹೊರಬೀಳುತ್ತದೆ. ಏಕೆಂದರೆ ಸತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.

ಕಳೆದ ೫೦ ವರ್ಷದಲ್ಲಿ ನಮಗೆ ದೇಶದ ಭಾಷೆಯನ್ನು ನಿರ್ಧರಿಸಲು ಆಗಲಿಲ್ಲ ಇದು ಲಜ್ಜಾಸ್ಪದ !

‘ಕಳೆದ ೫೦ ವರ್ಷಗಳಲ್ಲಿ ನಮಗೆ ದೇಶದ ಭಾಷೆಯನ್ನು ತಯಾರಿಸಲು ಆಗಲಿಲ್ಲ. ಇದರಷ್ಟು ದುರದೃಷ್ಟದ ವಿಷಯ ಇನ್ನೇನಿಲ್ಲ. ೫೦ ವರ್ಷಗಳಲ್ಲಿ ನಮಗೆ ದೇಶದ ಭಾಷೆಯನ್ನು ತಯಾರಿಸಲಾಗದಿರುವುದರಿಂದ ಇಂದು ಆಂಗ್ಲರ ಬೆರಳನ್ನು ಹಿಡಿದುಕೊಂಡು ನಾವು ನಡೆಯಬೇಕಾಗುತ್ತಿದೆ.

ಆಧ್ಯಾತ್ಮಿಕತೆಯ ಪರಂಪರೆ ಇರುವ ವರೆಗೆ ಜಗತ್ತಿನ ಯಾವುದೇ ಶಕ್ತಿಯು ಭಾರತದ ವಿನಾಶ ಮಾಡಲು ಸಾಧ್ಯವಿಲ್ಲ !

ನಮ್ಮ ಜೀವನರಕ್ತವೆಂದರೆ ಆಧ್ಯಾತ್ಮಿಕತೆಯಾಗಿದೆ. ಒಂದು ವೇಳೆ ಅದು ನಮ್ಮ ಶರೀರದಿಂದ ಸ್ಪಷ್ಟವಾಗಿ, ಬಲವಾಗಿ, ಶುದ್ಧ ಹಾಗೂ ಬಲಸಂಪನ್ನವಾಗಿ ಹರಿಯುತ್ತಿದ್ದರೆ ಎಲ್ಲವೂ ಸರಿಯಾಗಬಹುದು. ಅದೇ ರಕ್ತವು ಶುದ್ಧವಾಗಿದ್ದರೆ ರಾಜಕೀಯ, ಸಾಮಾಜಿಕ ಹಾಗೂ ಇತರ ಭೌತಿಕ ದೋಷ ಅಲ್ಲದೇ ಈ ಭೂಮಿಯ ಬಡತನವು ಸಹ ಸುಧಾರಿಸಬಹುದು.

ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯಗಳನ್ನು ಗಮನಕ್ಕೆ ತಂದು ಕೊಡುವುದರೊಂದಿಗೆ, ಅವರಿಗೆ ಧರ್ಮಶಿಕ್ಷಣವನ್ನು ನೀಡಬೇಕು – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷತ್

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ, ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ

ಮತಾಂತರವು ಮಹಾಪಾಪವಾಗಿದೆ !

ಹಿಂದೂ ಧರ್ಮವನ್ನು ತ್ಯಜಿಸಿದರೆ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಆಗುವುದಿಲ್ಲ.

ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶ ಇವುಗಳ ತಲೆಗೆ ಕಟ್ಟುತ್ತಾರೊ, ಅವರು ಖಂಡಿತ ಬಹುದೊಡ್ಡ ಅಪರಾಧ ಮಾಡುತ್ತಾರೆ !

ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ. ತದ್ವಿರುದ್ಧ ಎಲ್ಲಿ ಅಜ್ಞಾನ, ರಾಕ್ಷಸಿತನ ಮತ್ತು ಸಂಕಟಗಳು ಇರುತ್ತವೆ ಅಲ್ಲಿ ನರಕ ಇರುತ್ತದೆ.

ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದು ಅವರನ್ನು ಕಾಪಾಡುವುದು ಅತ್ಯಗತ್ಯ

‘ಯುವಕರು ದೇಶದ ಬೆನ್ನೆಲುಬು ಆಗಿದ್ದಾರೆ’ ಅವರು ದೇಶದ ಭವಿಷ್ಯವಾಗಿದ್ದಾರೆ. ಇಂದು ಅವರನ್ನು ಕಾಪಾಡದಿದ್ದರೆ ಒಂದು ದಿನ ನಮ್ಮ ಸಮೃದ್ಧ ಭಾರತ ದೇಶವು ತಲೆಬಾಗಬೇಕಾಗಬಹುದು’.

ವಿಶ್ವಕಲ್ಯಾಣಕ್ಕಾಗಿ ಭಾರತದ ರಕ್ಷಣೆ ಅಗತ್ಯ  !

‘ವಿಶ್ವದ ಕಲ್ಯಾಣ ಮತ್ತು ಲಾಭ ಇವುಗಳಿಗಾಗಿ ಭಾರತದ ರಕ್ಷಣೆಯನ್ನು ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವಕ್ಕೆ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಕೊಡಬಲ್ಲದು.