ಹಿಂದೂಗಳೇ, ಸ್ವಾಮಿ ವಿವೇಕಾನಂದರ ಆಜ್ಞೆಯಂತೆ ವಿದೇಶಿಯಾಗಿದ್ದರೂ ಭಾರತೀಯ ಭಾಷೆ ಉಪಯೋಗಿಸಲು ಹೇಳಿದ ‘ಭಗಿನಿ ನಿವೇದಿತಾ’ರಿಂದ ಕಲಿಯಿರಿ !

ಮಾರ್ಗರೇಟ್ ಎಲಿಝಾಬೆತ್ ನೋಬಲ ಇವಳು ಐರ್ಲ್ಯಾಂಡನ ನಿವಾಸಿಯಾಗಿದ್ದಳು. ಅವಳು ನಂತರ ಸ್ವಾಮಿ ವಿವೇಕಾನಂದರ ಶಿಷ್ಯೆಯಾದಳು ಹಾಗೂ ಭಗಿನಿ ನಿವೇದಿತಾ ಎಂದು ಪ್ರಸಿದ್ಧಳಾದಳು.

ಮಿದನಾಪುರದಲ್ಲಿ ಸ್ವಾಮೀಜಿಯವರ ಭಾಷಣ ನಡೆಯುತ್ತಿತ್ತು ಎಲ್ಲರೂ ಮಂತ್ರಮುಗ್ಧರಾಗಿ ಕೇಳುತ್ತಿದ್ದರು ಕೆಲವು ಯುವಕರು ಸಂತೋಷದಿಂದ ಹಿಪ್ ಹಿಪ್ ಹುರ್ರ‍ೆಯ ಜಯಘೋಷ ಮಾಡಿದರು. ಇದಕ್ಕೆ ಸ್ವಾಮೀಜಿಯವರು ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಅವರಿಗೆ ಗದರಿಸುತ್ತಾ “ಸುಮ್ಮನಿರಿ ನಾಚಿಕೆಯಾಗಬೇಕು. ನಿಮಗೆ ನಮ್ಮ ಭಾಷೆಯ ಸ್ವಲ್ಪವು ಅಭಿಮಾನವಿಲ್ಲವೇ ? ನಿಮ್ಮ ತಂದೆ ಆಂಗ್ಲರೆ ? ನಿಮ್ಮ ತಾಯಿ ಬಿಳಿ ಚರ್ಮದ ಯುರೋಪಿಯನ್ ಆಗಿದ್ದಳೇ ? ನಿಮಗೆ ಆಂಗ್ಲರ ಅನುಕರಣೆ ಮಾಡುವುದು ಶೋಭಿಸುತ್ತದೆಯೇ ?”, ಎಂದರು. ಇದನ್ನು ಕೇಳಿದ ಯುವಕರು ಸುಮ್ಮನಾದರು. ಎಲ್ಲರೂ ತಲೆಕೆಳಗೆ ಹಾಕಿದರು. ನಂತರ ಭಗಿನಿ ನಿವೇದಿತಾರು “ಭಾಷಣದಲ್ಲಿ ಯಾವುದೇ ವಿಷಯವು ಒಳ್ಳೆಯದೆನಿಸಿದರೆ ಸ್ವಭಾಷೆಯಲ್ಲಿ, ಸಚ್ಚಿದಾನಂದ ಪರಮಾತ್ಮಾ ಕೀ ಜೈ, ಭಾರತಮಾತಾ ಕೀ ಜೈ, ಸದ್ಗುರು ಕೀ ಜೈ, ಎಂದು ಜಯಘೋಷ ಮಾಡಿ” ಎಂದರು. ಯುವಕರು ಕೂಡಲೇ ಆ ನಿರ್ದೇಶನ ಪಾಲಿಸಿದರು. ಭಾರತದಲ್ಲಿ ಪ್ರಾಚೀನ ಕಾಲದಲ್ಲಿಯೂ ಪ್ರಸನ್ನತೆಯ ಪ್ರಸಂಗದಲ್ಲಿ ಸಾಧೋ, ಸಾಧೋ ಎಂದು ಹೇಳುವ ಪದ್ಧತಿಯಿತ್ತು. ಅದು ಪಾಶ್ಚಾತ್ಯ ಅಂಧಾನುಕರಣೆಯಿಂದ ಲೋಪವಾಯಿತು.

(ಆಧಾರ : ಮಾಸಿಕ ಋಷಿಪ್ರಸಾದ, ನವೆಂಬರ್ ೧೯೯೯)