ಆಧ್ಯಾತ್ಮಿಕತೆಯ ಪರಂಪರೆ ಇರುವ ವರೆಗೆ ಜಗತ್ತಿನ ಯಾವುದೇ ಶಕ್ತಿಯು ಭಾರತದ ವಿನಾಶ ಮಾಡಲು ಸಾಧ್ಯವಿಲ್ಲ !

ಧರ್ಮವೇ ಭಾರತದ ಆತ್ಮವಾಗಿದೆ. ಆಧ್ಯಾತ್ಮಿಕತೆ ಇರುವುದರಿಂದಲೇ ಭಾರತದ ಪುನರುತ್ಥಾನವು ಕೂಡ ಧರ್ಮದ ಮೂಲಕವೇ ಆಗುವುದು. ಭಾರತದ ಪ್ರಾಣವು ಧರ್ಮದಲ್ಲಿ ಒಂದಾಗಿದೆ. ಹಿಂದೂಗಳು ಎಲ್ಲಿಯವರೆಗೆ ನಮ್ಮ ಪೂರ್ವಜರ ಮಹಾನ್ ಪರಂಪರೆಯನ್ನು ಮರೆಯುವುದಿಲ್ಲವೋ ಅಲ್ಲಿಯವರೆಗೆ ಈ ಜಗತ್ತಿನ ಯಾವುದೇ ಶಕ್ತಿಯು ಅವರನ್ನು ನಾಶಮಾಡಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶರೀರದಲ್ಲಿಯ ರಕ್ತವು ಶುದ್ಧ ಹಾಗೂ ಶಕ್ತಿಸಂಪನ್ನವಾಗಿದೆಯೋ ಅಲ್ಲಿಯವರೆಗೆ ಆ ದೇಹದಲ್ಲಿ ಯಾವುದೇ ರೋಗದ ಜಂತುಗಳು ಜೀವಂತವಾಗಿರಲು ಸಾಧ್ಯವಿಲ್ಲ. ನಮ್ಮ ಜೀವನರಕ್ತವೆಂದರೆ ಆಧ್ಯಾತ್ಮಿಕತೆಯಾಗಿದೆ. ಒಂದು ವೇಳೆ ಅದು ನಮ್ಮ ಶರೀರದಿಂದ ಸ್ಪಷ್ಟವಾಗಿ, ಬಲವಾಗಿ, ಶುದ್ಧ ಹಾಗೂ ಬಲಸಂಪನ್ನವಾಗಿ ಹರಿಯುತ್ತಿದ್ದರೆ ಎಲ್ಲವೂ ಸರಿಯಾಗಬಹುದು. ಒಂದು ವೇಳೆ ಅದೇ ರಕ್ತವು ಶುದ್ಧವಾಗಿದ್ದರೆ ರಾಜಕೀಯ, ಸಾಮಾಜಿಕ ಹಾಗೂ ಇತರ ಭೌತಿಕ ದೋಷ ಅಲ್ಲದೇ ಈ ಭೂಮಿಯ ಬಡತನವು ಸಹ ಸುಧಾರಿಸಬಹುದು.

– ಶ್ರೀ. ರಾಜಾಭಾವು ಜೋಶಿ (ಮಾಸಿಕ ಲೋಕಜಾಗರ, ದೀಪಾವಳಿ ವಿಶೇಷಾಂಕ ೨೦೦೮)