‘ಶ್ರೀ ದುರ್ಗಾಸಪ್ತಶತಿ’ ಗ್ರಂಥದಲ್ಲಿ ಯೋಗದ ಬಗ್ಗೆ ವಿವಿಧ ಅಂಗಗಳು

‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.

೧. ಶ್ರೀ ದುರ್ಗಾಸಪ್ತಶತಿ ಪಠಣ ಮಾಡುವ ಕಾರಣಗಳು !

ಅ. ವಿವಿಧ ಪ್ರಕಾರದ ಕಾಮನೆಗಳನ್ನು ಪೂರ್ಣಗೊಳಿಸಲು ಹಾಗೂ ಅನಿಷ್ಠಸಂಕಟಗಳನ್ನು ನಿವಾರಿಸಲು ಶ್ರೀ ದುರ್ಗಾಸಪ್ತಶತಿ ಅಥವಾ ಚಂಡೀಪಾಠದ ಕಾಮ್ಯಪ್ರಯೋಗ ಆಗುತ್ತಿರುತ್ತದೆ .

ಆ. ಮುಮುಕ್ಷು ಮತ್ತು ಜ್ಞಾನಾರ್ಥಿಗಳ ದೃಷ್ಟಿಯಲ್ಲಿ ಇದರ ಮಹತ್ವ ಅಸಾಧಾರಣವಾಗಿದೆ.

ಇ. ಆರ್ತ ಭಕ್ತರಿಗೆ ದೇವೀಮಾತೆಯ ಸೆರಗು (ಪದರು) ಇದೇ ಏಕೈಕ ಆಶ್ರಯವಾಗಿದೆ. ಹೀಗಿದ್ದರೂ ಇಂದು ದುರ್ಗಾಸಪ್ತಶತೀ ಕೇವಲ ಪೂಜಾ-ಪಾಒದ ಒಂದು ಪುರಾಣ ಗ್ರಂಥವಾಗಿ ಉಳಿದಿದೆ. ಈ ಗ್ರಂಥದ ತಾತ್ತ್ವಿಕ ಹಿನ್ನೆಲೆ, ಯೋಗದ ವಿವಿಧ ಅಂಗಗಳ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಪ್ರಜ್ಞಾವಂತ ವ್ಯಕ್ತಿಗಳು ಕೂಡ ಅಜ್ಞಾನಿಗಳಾಗಿದ್ದಾರೆ

೨. ದೇವಸಂಸ್ಕೃತಿ ವಿಶ್ವವಿದ್ಯಾಲಯದ ಯೋಗವಿಜ್ಞಾನ ವಿಭಾಗದ ವಿದ್ಯಾರ್ಥಿನಿಯು ಶ್ರೀ ದುರ್ಗಾಸಪ್ತಶತಿಯ ವಿಷಯದಲ್ಲಿ ಮಾಡಿದ ಸಂಶೋಧನೆಯ ಕಾರ್ಯ !

ದೇವಸಂಸ್ಕೃತಿ ವಿಶ್ವವಿದ್ಯಾಲಯದ ‘ಮಾನವಿ ಚೇತನಾ ಹಾಗೂ ಯೋಗವಿಜ್ಞಾನ ವಿಭಾಗ’ದ ಸಂಶೋಧಕಿ ವಿದ್ಯಾರ್ಥಿನಿ ಚಾರು ಶರ್ಮಾ ಇವರು ನವಂಬರ ೨೦೦೮ ರಲ್ಲಿ ಶ್ರೀ ದುರ್ಗಾಸಪ್ತಶತಿಯ ವಿಷಯದಲ್ಲಿ ಸಂಶೋಧನಾತ್ಮಕ ಅಧ್ಯಯನ ಮಾಡಿದ್ದಾರೆ. ಅದರ ವಿಷಯ ಹೀಗಿತ್ತ್ತು, ‘ಶ್ರೀ ದುರ್ಗಾಸಪ್ತಶತಿಯಲ್ಲಿ ಯೋಗದ ವಿವಿಧ ಅಂಗಗಳು-ಒಂದು ವಿವೇಚನಪೂರ್ಣ ಅಧ್ಯಯನ !’ ಈ ಅಧ್ಯಯನವನ್ನು ಕುಲಪತಿ ಡಾ. ಪ್ರಣವ ಪಂಡ್ಯಾ ಇವರ ಉಸ್ತುವಾರಿ, ನಿರ್ದೇಶನದಲ್ಲಿ ಮತ್ತು ಡಾ. ಈಶ್ವರ ಭಾರದ್ವಾಜ ಇವರ ಸಹನಿರ್ದೇಶನದಲ್ಲಿ ಮಾಡಲಾಯಿತು. ಈ ಗಹನ ಹಾಗೂ ಗೂಢ ಶೋಧಕಾರ್ಯ ವನ್ನು ೭ ಅಧ್ಯಾಯಗಳಲ್ಲಿ ಅಧ್ಯಯನ ಮಾಡಲಾಯಿತು.

೩. ಶ್ರೀ ದುರ್ಗಾಸಪ್ತಶತಿಯ ಅಧ್ಯಾಯಗಳ ವಿಭಜನೆ ಮತ್ತು ಅದರ ಮಾಹಿತಿ

೩ ಅ. ಶಕ್ತಿ ಉಪಾಸನೆಯ ಐತಿಹಾಸಿಕ ಹಿನ್ನೆಲೆ : ಇದರಲ್ಲಿ ವೈದಿಕ ಯುಗ, ಉತ್ತರ ವೈದಿಕಯುಗ, ಮಹಾಕಾವ್ಯಕಾಲ, ರಾಮಾಯಣ ಮತ್ತು ಮಹಾಭಾರತ ಕಾಲ, ಪೌರಾಣಿಕ ಮತ್ತು ಅನಂತರದ ವಿವಿಧ ಕಾಲಖಂಡಗಳ ಶಕ್ತಿ ಉಪಾಸನೆಯ ವಿವೇಚನೆಯಿದೆ.

೩ ಆ. ಜ್ಞಾನಯೋಗ : ಇದರಲ್ಲಿ ‘ದೇವಿ ಬ್ರಹ್ಮರೂಪಿಯಾಗಿದ್ದು, ಸಂಪೂರ್ಣ ಜಗತ್ತಿನಲ್ಲಿ ಅವಳ ಮಾಯೆಯ ವಿಸ್ತಾರವಿದೆ’, ಇದನ್ನು ಸ್ಪಷ್ಟಪಡಿಸಲಾಗಿದೆ. ಮಹಾಮಾಯೆಯ ರೂಪದಲ್ಲಿ ದೇವಿಯೇ ಭಗವಾನ ವಿಷ್ಣುಸಹಿತ ಎಲ್ಲ ದೇವ-ದೇವತೆಗಳನ್ನು ಯೋಗನಿದ್ರೆಯಲ್ಲಿ ಮಲಗಿಸಿಟ್ಟಿದ್ದಾಳೆ. ‘ದುಸ್ತರವಾದ ಅವಳ ಮಾಯೆಯನ್ನು ದಾಟಿ ಹೋಗುವುದು ತುಂಬಾ ಕಷ್ಟಕರವಾಗಿದೆ’, ಇದನ್ನು ವಿವರಿಸಲಾಗಿದೆ. ಶ್ರೀ ದುರ್ಗಾಸಪ್ತಶತಿಯಲ್ಲಿ ಬ್ರಹ್ಮ, ಜಗತ್ತು ಮತ್ತು ಮಾಯೆ ಈ ಜ್ಞಾನಯೋಗದ ಮೂಲ ಧಾರಣೆಯು ದೇವಿಯ ಸುತ್ತಮುತ್ತಲೂ ಸಂಚರಿಸುತ್ತಿರುತ್ತವೆ’, ಎಂಬ ಉಲ್ಲೇಖವಿದೆ.

೩ ಇ. ಭಕ್ತಿಯೋಗ : ಈ ಅಧ್ಯಾಯದಲ್ಲಿ ಪ್ರೇಮ, ಶ್ರದ್ಧೆ, ವಿಲಾಸ ಹಾಗೂ ಸಮರ್ಪಣೆ ಇಂತಹ ಭಕ್ತಿಗೆ ಸಂಬಂಧಿತ ವಿವಿಧ ತತ್ತ್ವಗಳನ್ನು ವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಶ್ರೀ ದುರ್ಗಾ ಸಪ್ತಶತಿಯ ವಿವಿಧ ಶ್ಲೋಕಗಳಲ್ಲಿ ‘ಸಮರ್ಪಣೆ, ವಿಸರ್ಜನೆ, ವಿಲಯ ಸಹಿತ ಭಕ್ತಿಯ ತುತ್ತತುದಿಯನ್ನು ಹೇಗೆ ಸಾಧಿಸಬಹುದು ?’, ಎಂಬುದರ ಬಗ್ಗೆ ಬಹಳ ಸುಂದರ ವರ್ಣನೆ ನೋಡಲು ಸಿಗುತ್ತದೆ. ಇದಕ್ಕನುಸಾರ ಸುರಥ ರಾಜನಿಗೆ ತನ್ನ ಸಕಾಮ ಭಕ್ತಿಯ ಮೂಲಕ ಅಖಂಡ ರಾಜ್ಯ ಪ್ರಾಪ್ತಿಯಾಗುತ್ತದೆ, ಹಾಗೂ ಸಮಾಧಿ, ವೈಶ್ಯ ನಿಷ್ಕಾಮ ಭಕ್ತಿಯ ಮಾರ್ಗದಲ್ಲಿ ಹೋಗಿ ಕ್ರಮಕ್ರಮದಲ್ಲಿ ವಿವೇಕ ಮತ್ತು ವೈರಾಗ್ಯದಲ್ಲಿ ಸನ್ಮಾನ ಪಡೆದು ಪರಮಾತ್ಮ ನನ್ನು ಪ್ರಾಪ್ತಿಯಾಗುತ್ತದೆ, ಅಂದರೆ ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

೩ ಈ. ಕುಂಡಲಿನಿಯೋಗ : ಅಡಗಿರುವ ಕುಂಡಲಿನಿಯ ವಿವಿಧ ಪ್ರಕಾರಗಳು, ರೂಪಗಳು ಮತ್ತು ಅಲಂಕಾರಗಳನ್ನು ಶ್ರೀ ದುರ್ಗಾಸಪ್ತಶತಿಯ ಅನೇಕ ಅಧ್ಯಾಯಗಳಲ್ಲಿ ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ‘ಪ್ರಾಣೋತ್ಥಾನ’ವು ಕುಂಡಲಿನಿ ಜಾಗೃತಿಯ ಮೊದಲನೆಯ ರೂಪ ಎಂದು ಪರಿಗಣಿಸಲಾಗಿದೆ. ‘ಪ್ರಕಾಶಮಯ ಅವಸ್ಥೆಯ ಪ್ರಾಪ್ತಿ’ಯು ಎರಡನೆಯ ರೂಪ ವಾಗಿದೆ. ಶ್ರೀ ದುರ್ಗಾಸಪ್ತಶತಿಯಲ್ಲಿ ಕುಂಡಲಿನಿ ಜಾಗೃತಿ ವಿಧಿಯ ಸೂಕ್ಷ್ಮ ವಿವೇಚನೆಯು ಕಂಡುಬರುತ್ತದೆ. ಅದರಲ್ಲಿ ಅದು ಮೂಲಾಧಾರ ಚಕ್ರದಿಂದ ಜಾಗೃತವಾಗಿ ಪ್ರಾಣೋತ್ಥಾನ ಮಾಡುತ್ತಾ ವಾಸನೆಯನ್ನು ರೂಪಾಂತರಿಸಿ ಮಣಿಪುರ ಮತ್ತು ಅನಾಹತ ಚಕ್ರಗಳನ್ನು ದಾಟುತ್ತದೆ. ನಂತರ ಅದು ಆಜ್ಞಾಚಕ್ರದ ಆಚೆಗಿನ ಪ್ರಕಾಶಮಯ ಅವಸ್ಥೆಯ ದಿಕ್ಕಿನಲ್ಲಿ ಮುಂದೆ ಸಾಗತೊಡಗುತ್ತದೆ ಮತ್ತು ಸಹಸ್ರಾರದ ಸ್ಥಳದಲ್ಲಿ ಜ್ಞಾನ ಮತ್ತು ಆನಂದದ ಪೂರ್ಣಾವಸ್ಥೆಯಲ್ಲಿ ಪ್ರತಿಷ್ಠಾಪನೆಯಾಗುತ್ತದೆ; ಆದರೆ ಶ್ರೀ ದುರ್ಗಾಸಪ್ತಶತಿಯಲ್ಲಿ ಈ ಚಕ್ರಗಳ ಸರಳ ಉಲ್ಲೇಖ ಕಾಣಿಸುವುದಿಲ್ಲ; ಆದರೆ ಅವುಗಳ ಜಾಗರಣೆ ಮತ್ತು ವಿಕಾಸಕ್ಕೆ ಸಂಬಂಧಿಸಿದ ಭಾವಾವಸ್ಥೆಯ ಬಗ್ಗೆ ಸ್ಪಷ್ಟವಾಗಿ ವರ್ಣಿಸಲಾಗಿದೆ. ಅದು ಹೃದಯಸ್ಪರ್ಶಿಯಾಗಿದೆ.

೩ ಉ. ಮಂತ್ರಯೋಗ : ಇದರಲ್ಲಿ ಶ್ರೀ ದುರ್ಗಾಸಪ್ತಶತಿಯ ಪ್ರತಿಯೊಂದು ಶ್ಲೋಕವನ್ನು ಮಂತ್ರಮಯವೆಂದು ಪರಿಗಣಿಸ ಲಾಗಿದೆ. ಮಂತ್ರದ ಪ್ರಕಾರವನ್ನು ಮಾಲಾಮಂತ್ರದ ರೂಪದಲ್ಲಿ ಸ್ವೀಕರಿಸಲಾಗಿದೆ. ಅದರಲ್ಲಿ ಅಲ್ಲಲ್ಲಿ ಬೀಜಮಂತ್ರಗಳು ಹರಡಿರುವುದು ಕಾಣಿಸುತ್ತವೆ. ನಿಜವಾಗಿ ನೋಡಿದರೆ ಶ್ರೀ ದುರ್ಗಾಸಪ್ತಶತಿಯನ್ನು ಮಂತ್ರಗಳ ಗ್ರಂಥವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ‘ವಿನಿಯೋಗದ ೫ ಅಂಗಗಳು, ಅಂದರೆ ಋಷಿ, ಛಂದ, ದೇವತೆ, ಬೀಜ ಹಾಗೂ ತತ್ತ್ವ ಈ ಅಂಗಗಳ ಹೊರತು ಇದು ಅಪೂರ್ಣವೆನಿಸುತ್ತದೆ’, ಎಂದು ಹೇಳಲಾಗಿದೆ. ಈ ೫ ಅಂಗಗಳ ಪ್ರಯೋಗದಿಂದಲೇ ‘ಮಂತ್ರಶಕ್ತಿಯ ಎಲ್ಲ ಆಯಾಮಗಳು ಜೋಡಿಸಲ್ಪಡುತ್ತವೆ’, ಎನ್ನುವ ತತ್ತ್ವವನ್ನು ಹೇಳಲಾಗಿದೆ.

‘ಶ್ರೀ ದುರ್ಗಾಸಪ್ತಶತಿಯ ಮೂರೂ ಚರಿತ್ರೆಗಳ ವಿನಿಯೋಗವನ್ನು ‘ಜೀವನದ ಸಮಗ್ರ ಉತ್ಕರ್ಷ ಹಾಗೂ ಉನ್ನತಿ’ಗೆ ಆವಶ್ಯಕವಾಗಿದೆ’, ಎಂದು ತಿಳಿದು ಅದನ್ನು ಮಾಡಲಾಗಿದೆ. ಇದರಲ್ಲಿ ಹಂತಹಂತವಾಗಿ ತಮ, ತಜ ಮತ್ತು ಸತ್ತ್ವ ಇವುಗಳ ಜಾಗರಣೆ ಮತ್ತು ಸ್ಥಾಪನೆ ಹಾಗೂ ಅವುಗಳ ಪರಿಶೋಧನೆ ಮಾಡಲು ಮಂತ್ರಗಳನ್ನು ಪ್ರಯೋಗಿಸಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕೂ ಪುರುಷಾರ್ಥಗಳ ಸಿದ್ಧಿಯನ್ನು ಪಡೆಯಬಹುದು.

೩ ಊ. ವೈಜ್ಞಾನಿಕ ಪ್ರಯೋಗ : ಆರನೇ ಅಧ್ಯಾಯದಲ್ಲಿ ಶ್ರೀ ದುರ್ಗಾಸಪ್ತಶತಿಯ ಪಠಣ ಮತ್ತು ಮಂತ್ರಜಪದ ಮನಃಶಾಸ್ತ್ರೀಯ ಪ್ರಭಾವದ ಜ್ಞಾನವನ್ನು ಪಡೆಯಲು ಪ್ರಯೋಗಾತ್ಮಕ ಅಧ್ಯಯನ ಮಾಡಲಾಯಿತು. ಇದರಲ್ಲಿ ದೇವಸಂಸ್ಕೃತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅನಿರೀಕ್ಷಿತವಾಗಿ ಆರಿಸುವ ಪದ್ಧತಿಯ ಮೂಲಕ ಆರಿಸಲಾಯಿತು. ಇದರಲ್ಲಿ ೨೦ ರಿಂದ ೨೪ ವರ್ಷ ವಯಸ್ಸಿನ ೬೦ ವಿದ್ಯಾರ್ಥಿಗಳನ್ನು ಆರಿಸಲಾಯಿತು ಹಾಗೂ ಅನಂತರ ಅವರನ್ನು ೩ ಗುಂಪಿನಲ್ಲಿ ವಿಂಗಡಿಸÀಲಾಯಿತು. ಮೊದಲ ಗುಂಪಿಗೆ ಒಂದು ತಿಂಗಳವರೆಗೆ ನಿಯಮಗಳು ಮತ್ತು ನ್ಯಾಸ ವಿಧಿಸಹಿತ ೧೧ ಮಾಲೆ ನವಾರ್ಣ ಮಂತ್ರವನ್ನು ನಿತ್ಯ ಜಪಿಸಲು ಹೇಳಲಾಯಿತು. ಎರಡನೆಯ ಗುಂಪಿಗೆ ನವಾರ್ಣ ಮಂತ್ರದೊಂದಿಗೆ ಜೋಡಿಸಿ ಸಪ್ತಶ್ಲೋಕಿ ದುರ್ಗಾಪಾಠ ಮಾಡಲು ಹೇಳಲಾಯಿತು. ಮೂರನೆ ಗುಂಪಿಗೆ ಎಲ್ಲಕ್ಕಿಂತ ಮೊದಲು ವಿನಿಯೋಗ, ನ್ಯಾಸ, ಅನಂತರ ಒಂದು ಮಾಲೆ ನವಾರ್ಣಮಂತ್ರ ಪಠಣ ಮತ್ತು ಕೊನೆಗೆ ಪುನಃ ಒಂದು ಮಾಲೆ ನವಾರ್ಣ ಮಂತ್ರಜಪ ಮಾಡಲು ಹೇಳಲಾಯಿತು. ಈ ಪ್ರಯೋಗದಲ್ಲಿ ವಿದ್ಯಾರ್ಥಿಗಳ ಪ್ರಾರಂಭಿಕ ಹಾಗೂ ಅಂತಿಮ ಪರೀಕ್ಷೆಗಾಗಿ ಒಂದು ಪ್ರಶ್ನಾವಳಿಯ ಪ್ರಯೋಗ ಮಾಡಲಾಯಿತು. ಇದರಲ್ಲಿ ವಿದ್ಯಾರ್ಥಿಗಳ ಚಿಂತೆ, ಮನಸ್ಸಿನ ಆಯಾಸ, ಅಪರಾಧ ಬೋಧ, ಆಯಾಸ, ಹಿಂದೆ ಹೋಗುವ ಪ್ರವೃತ್ತಿ, ಬಹಿರ್ಮುಖ ಪ್ರವೃತ್ತಿ, ಉತ್ತೇಜನ ಮತ್ತು ಒತ್ತಡ ಇವುಗಳ ಮಟ್ಟವನ್ನು ಪರಿಶೀಲಿಸಲಾಯಿತು. ಕೊನೆಗೆ ಪರಿಣಾಮವನ್ನು ನೋಡುವಾಗ ಬಹಿರ್ಮುಖಿ ಪ್ರವೃತ್ತಿಯ ಹೊರತು ಏಳೂ ಮನಶಾಸ್ತ್ರೀಯ ಸ್ಥಿತಿಯ ಮಟ್ಟವು ಸಾಕಷ್ಟು ಕಡಿಮೆಯಾಗಿರುವುದು ಕಾಣಿಸಿತು ಹಾಗೂ ಬಹಿರ್ಮುಖಿ ಪ್ರವೃತ್ತಿಯ ಮಟ್ಟವು ಸಾಕಷ್ಟು ಹೆಚ್ಚಳವಾಗಿರುವುದು ಕಾಣಿಸಿತು. ಇದರಲ್ಲಿ ಎರಡು ಪ್ರಯೋಗಾತ್ಮಕ ಅಧ್ಯಯನ ಮಾಡಲಾಯಿತು.

ಅ. ಬೇರೆಬೇರೆ ಪ್ರಕಾರದ ಮಂತ್ರ ಶೈಲಿಯ (ನವಾರ್ಣಮಂತ್ರ, ಶ್ರೀ ದುರ್ಗಾಸಪ್ತಶತೀ, ಸಮ್ಮಿಶ್ರ ರೂಪದಲ್ಲಿ ನವಾರ್ಣ ಮಂತ್ರ ಮತ್ತು ಶ್ರೀ ದುರ್ಗಾಸಪ್ತಶತೀ ಪಠಣ) ಚಿಂತೆÉ ಮತ್ತು ಭಾವನೆಯ ಪರಿಪಕ್ವತೆಯ ಮಟ್ಟದಲ್ಲಿ ಪ್ರಭಾವವನ್ನು ನೋಡಲಾಯಿತು.

ಆ. ಎರಡನೆಯ ಪ್ರಯೋಗದಲ್ಲಿ ಶ್ರೀಸೂಕ್ತಮಂತ್ರದ ಪಠಣದಿಂದ ಉಚ್ಚ ರಕ್ತದೊತ್ತಡದ ವ್ಯಕ್ತಿಯ ಮೇಲಾಗುವ ಪ್ರಭಾವನ್ನು ಪರಿಶೀಲಿಸಲಾಯಿತು. ಎರಡೂ ಪ್ರಯೋಗಗಳಲ್ಲಿ ಭಾಗವಹಿಸಿದ ವ್ಯಕ್ತಿಗಳಲ್ಲಿ ಈ ಎರಡೂ ಪ್ರಯೋಗಗಳ ಸಾರ್ಥಕ ಪರಿಣಾಮ ಕಾಣಿಸಿತು. ಪ್ರಯೋಗದಲ್ಲಿ ಭಾಗವಹಿಸಿದ ವ್ಯಕ್ತಿಗಳ ಚಿಂತೆಯ ಮಟ್ಟವು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿ ಭಾವದ ಪರಿಪಕ್ವತೆಯ ಮಟ್ಟವು ಹೆಚ್ಚಾಗಿರುವುದು ಕಾಣಿಸಿತು. ಉಚ್ಚ ರಕ್ತದೊತ್ತಡದ ವ್ಯಕ್ತಿಗಳಲ್ಲಿ ‘ಸಿಸ್ಟಾಲಿಕ್’ (ಮೇಲಿನ) ಮತ್ತು ‘ಡಾಯಸ್ಟಾಲಿಕ್’ (ಕೆಳಗಿನ) ರಕ್ತದೊತ್ತಡದ ಪ್ರಮಾಣವು ಸಾರ್ಥಕ ವಾಗಿ ಕಡಿಮೆಯಾಗಿರುವುದು ಕಾಣಿಸಿತು. ಶ್ರೀ ದುರ್ಗಾಸಪ್ತಶತಿಯ ಅಧ್ಯಯನದ ಅಂತರ್ಗತ ಮಾಡಿರುವ ಈ ಮೇಲಿನ ಪ್ರಯೋಗ ಗಳಿಂದ ಸಿದ್ಧವಾಗುವುದೇನೆಂದರೆ, ಸಾಮಾನ್ಯ ವ್ಯಕ್ತಿಗೆ ತಿಳಿಯದ ಅನೇಕ ರಹಸ್ಯಗಳು ಈ ಗ್ರಂಥದಲ್ಲಿ ಅಡಗಿವೆ. ಈ ಗ್ರಂಥದ ಮಹತ್ವವನ್ನು ತಿಳಿದುಕೊಂಡು ನಿಷ್ಕಾಮ ಭಾವದಿಂದ ದೇವಿಯ ಆರಾಧನೆ ಮಾಡಿದರೆ, ಇದರಿಂದ ವ್ಯಕ್ತಿಯು ಅಲೌಕಿಕ ಅನುಭವ ವನ್ನು ಪಡೆಯಬಹುದು.’

– ಶ್ರೀ. ಮನೋಹರ ಝೋಡೆ (ಆಧಾರ : ಮಾಸಿಕ ‘ಆಧ್ಯಾತ್ಮಿಕ ‘ಚೈತನ್ಯ’)