ನೆಲದ ಮೇಲೆ, ಬನ್ನಿಯ ಪೂಜೆಯನ್ನು ಮಾಡಿದ ಜಾಗದಲ್ಲಿ ಅಷ್ಟದಳಗಳನ್ನು ಬಿಡಿಸಿ ಅದರ ಮೇಲೆ ಅಪರಾಜಿತೆಯ ಮೂರ್ತಿಯನ್ನಿಟ್ಟು ಪೂಜೆಯನ್ನು ಮಾಡಿ ಮುಂದಿನ ಮಂತ್ರದಿಂದ ಪ್ರಾರ್ಥನೆಯನ್ನು ಮಾಡುತ್ತಾರೆ.
ಹಾರೇಣ ತು ವಿಚಿತ್ರೇಣ ಭಾಸ್ವತ್ಕನಕಮೇಖಲಾ |
ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ ||
ಅರ್ಥ : ಕೊರಳಿನಲ್ಲಿ ಚಿತ್ರವಿಚಿತ್ರ ಮಾಲೆಯನ್ನು ಧರಿಸಿದ, ಸೊಂಟದಲ್ಲಿ ಹೊಳೆಯುವ ಸುವರ್ಣ ನಡುಪಟ್ಟಿಯಿರುವ ಮತ್ತು ಯಾವಾಗಲೂ ಭಕ್ತರ ಕಲ್ಯಾಣ ಕಾರ್ಯದಲ್ಲಿ ತತ್ಪರಳಾಗಿರುವ ಅಪರಾಜಿತಾ ದೇವಿಯು ನನ್ನನ್ನು ವಿಜಯಿಯನ್ನಾಗಿಸಲಿ. ಕೆಲವು ಕಡೆಗಳಲ್ಲಿ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ದೇವಿಯ ಪೂಜೆಯನ್ನು ಮಾಡುತ್ತಾರೆ.