ನವರಾತ್ರಿಯ ನಿಮಿತ್ತ ಹಾರ್ದಿಕ ಶುಭಾಶಯಗಳು !

ಎಲ್ಲ ಜಾಹೀರಾತುದಾರರಿಗೆ ಕೃತಜ್ಞತೆ

ಆದ್ಯಾಶಕ್ತಿ

ನವರಾತ್ರಿಯಲ್ಲಿ ಮೊದಲು ಮೂರು ದಿನ ತಮೋಗುಣ ಕಡಿಮೆ ಮಾಡಲು ಮಹಾ ಕಾಳಿಯ, ಮುಂದಿನ ೩ ದಿನ ಸತ್ತ್ವಗುಣ ಹೆಚ್ಚಿಸಲು ರಜೋ ಗುಣಿ ಮಹಾಲಕ್ಷ್ಮಿಯ ಮತ್ತು ಕೊನೆಯ ಮೂರು ದಿನ ಸಾಧನೆ ತೀವ್ರವಾಗಲು ಸತ್ತ್ವಗುಣಿ ಮಹಾ ಸರಸ್ವತಿಯ ಪೂಜೆ ಮಾಡುತ್ತಾರೆ.

ಕುಂಕುಮಾರ್ಚನೆ

ಕುಂಕುಮಾರ್ಚನೆಯನ್ನು ಮಾಡಿದ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಪ್ರಾರ್ಥನೆ ಮತ್ತು ನಾಮಜಪವು ಒಳ್ಳೆಯ ರೀತಿಯಲ್ಲಾಗುವುದು ಮತ್ತು ಉತ್ಸಾಹವೆನಿಸುವುದು !

ನವರಾತ್ರಿಯ ವ್ರತವನ್ನು ಆಚರಿಸುವ ಪದ್ಧತಿ

ಈ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಆಶ್ವಯುಜ ಶುಕ್ಲ ಪಾಡ್ಯದಂದು ಈ ವ್ರತವು ಪ್ರಾರಂಭವಾಗುತ್ತದೆ.

ನವರಾತ್ರಿಯ ಕಾಲದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಿರಿ ಮತ್ತು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಗೆ ಪಾತ್ರರಾಗಿ !

ಉತ್ಸವದ ವಿಕೃತಿಗಳನ್ನು ತಡೆದು ‘ಆದರ್ಶ ನವರಾತ್ರೋತ್ಸವ’ ವನ್ನು ಆಚರಿಸುವುದು ಮತ್ತು ಅದಕ್ಕಾಗಿ ಇತರರನ್ನೂ ಪ್ರೋತ್ಸಾಹಿಸುವುದು, ಇದು ದೇವಿಯ ಶ್ರೇಷ್ಠವಾದ ಉಪಾಸನೆಯಾಗಿದೆ !

ಈಗ ಶ್ರೀ ದುರ್ಗಾದೇವಿಯ ಪೂಜೆ ಮಾಡಿರುವುದರಿಂದ ಭಾಜಪದ ನಾಯಕಿ ರೂಬಿ ಖಾನ್ ಇವರಿಗೆ ಮುಸಲ್ಮಾನರಿಂದ ಕೊಲೆ ಬೆದರಿಕೆ !

ಇಂತಹ ಬೆದರಿಕೆಯ ವಿರುದ್ಧ ಒಬ್ಬನೇಒಬ್ಬ ಮುಸಲ್ಮಾನ ನಾಯಕ, ಮುಸಲ್ಮಾನ ಸಂಘಟನೆ ಅಥವಾ ಮುಸಲ್ಮಾನ ಬುದ್ಧಿವಾದಿಗಳು ಮುಂದೆ ಬಂದು ಮಾತನಾಡುವುದಿಲ್ಲ, ಅಥವಾ ಆಂದೋಲನ ಕೂಡ ನಡೆಸುವುದಿಲ್ಲ, ಇದನ್ನು ತಿಳಿದುಕೊಳ್ಳಿ!

ನವರಾತ್ರಿಯಲ್ಲಿನ ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ.

ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು

‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.

ನವರಾತ್ರಿ ವ್ರತಾಚರಣೆ

ಒಂಬತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.