ಸಿದ್ಧಮಂತ್ರ-ಸಾಧನಾ ಮಂತ್ರವನ್ನು ಹೇಗೆ ಪಠಿಸಬೇಕು ?

‘ಹಿಂದೂ ಧರ್ಮದಲ್ಲಿ ಉಪಾಸನೆಗೆ ಅತ್ಯಂತ ಮಹತ್ವವಿದೆ. ಪ್ರಾಚೀನ ಕಾಲದಿಂದಲೂ ಭಗವಂತನ ಈ ಉಪಾಸನೆಯನ್ನು ಬಹಳ ಶ್ರದ್ಧೆಯಿಂದ ಹಾಗೂ ನಿಷ್ಠೆಯಿಂದ ಮಾಡಲಾಗುತ್ತದೆ. ಈ ಉಪಾಸನೆಯಲ್ಲಿ ಶಕ್ತಿ ಉಪಾಸನೆಗೆ ಅಸಾಧಾರಣ ಮಹತ್ವವಿದೆ. ಈ ಶಕ್ತಿ ಉಪಾಸನೆಯನ್ನು ಅನೇಕ ವಿಧಗಳಲ್ಲಿ ಹೇಳಲಾಗಿದೆ. ಅದರಲ್ಲಿ ‘ದುರ್ಗಾಸಪ್ತಮಿಯು ಸರ್ವಶ್ರೇಷ್ಠ ಮಂತ್ರಶಕ್ತಿ ಹಾಗೂ ಶಕ್ತಿ ಉಪಾಸನೆಯಾಗಿದೆ. ‘ದೇವಿಯ ಉಪಾಸನೆಯು ಭಗವತಿದೇವಿ ಈ ವಿಶ್ವದ ತಾಯಿ-ಮಾತೆ-ಆದಿಮಾತೆ ಪಾಲನೆ ಮಾಡುತ್ತಾಳೆ ಹಾಗೂ ಪ್ರತಿಯೊಂದು ಜೀವವನ್ನು ತನ್ನ ಭವ್ಯ ರೂಪದಲ್ಲಿ ಸಮಾವೇಶ ಮಾಡಿಕೊಳ್ಳುತ್ತಾಳೆ’, ಎಂಬ ಅಂಶವನ್ನು ಗಮನದಲ್ಲಿಟ್ಟು ದೇವಿ ಉಪಾಸನೆಯನ್ನು ಪ್ರತಿಯೊಬ್ಬ ದೇವಿಭಕ್ತನು ಶ್ರದ್ಧೆಯಿಂದ, ಅಂತಃಕರಣದಿಂದ ಮಾಡಬೇಕಾಗಿದೆ. ‘ಶ್ರೀ ದುರ್ಗಾಸಪ್ತಶತಿ’ಯಲ್ಲಿ ಒಟ್ಟು ೭೦೦ ಶ್ಲೋಕಗಳಿವೆ.

ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು. ಮನೆಯ ದೇವರ ಕೋಣೆಯಲ್ಲಿನ ಮೂರ್ತಿಯ ಪೂಜೆ ಮಾಡಬೇಕು ಅಥವಾ ದುರ್ಗಾದೆವಿಯ ಮೂರ್ತಿ ಅಥವಾ ಚಿತ್ರದ ಪೂಜೆ ಮಾಡಬೇಕು. ಅನಂತರ ಕೈಯಲ್ಲಿ ನೀರು ತೆಗೆದುಕೊಂಡು ಸಂಕಲ್ಪ ಮಾಡಿ ಮಂತ್ರವನ್ನು ಕನಿಷ್ಟ ೧೧ ಬಾರಿ, ೨೧ ಬಾರಿ, ೨೯ ಬಾರಿ ಅಥವಾ ೧೦೮ ಬಾರಿ ಜಪಿಸಬೇಕು. ನಮ್ಮ ಸುತ್ತಲಿನ ವಾತಾವರಣ ಶುದ್ಧಿಗಾಗಿ ಊದುಬತ್ತಿ, ಶುದ್ಧ ತುಪ್ಪದ ದೀಪ ಹಚ್ಚಬೇಕು. ಮನೆಯಲ್ಲಿ ಗೋಮೂತ್ರ ಸಿಂಪಡಿಸಬೇಕು. ಒಮ್ಮೆ ಶ್ರದ್ಧೆ ಭಕ್ತಿಯಿಂದ ವಾತಾವರಣ ಶುದ್ಧವಾದ ನಂತರ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪುನಃ ಆಸನದಲ್ಲಿ ಕುಳಿತುಕೊಳ್ಳಬೇಕು. ಮೊದಲು ಕೆಳಗಿನ ೪ ಮಂತ್ರಗಳನ್ನು ಹೇಳಬೇಕು.

ಐಂ ಆತ್ಮತತ್ತ್ವಂ ಶೋಧಯಾಮಿ ನಮಃ ಸ್ವಾಹಾ |

ಹ್ರೀಂ ವಿದ್ಯಾತತ್ತ್ವಂ ಶೋಧಯಾಮಿ ನಮಃ ಸ್ವಾಹಾ |

ಕ್ಲೀಂ ಶಿವತತ್ತ್ವಂ ಶೋಧಯಾಮಿ ನಮಃ ಸ್ವಾಹಾ |

ಐಂ ಹ್ರೀಂ ಕ್ಲೀಂ ಸರ್ವತತ್ತ್ವಂ ಶೋಧಯಾಮಿ ನಮಃ ಸ್ವಾಹಾ ||

ಅನಂತರ ‘ಕವಚ ಅರ್ಗಲಾಕೀಲಕ’ ಹಾಗೂ ‘ದೇವಿ ಅಥರ್ವಶೀರ್ಷ’ ಸಂಕಲ್ಪಪೂರ್ವಕ ಪಠಿಸಬೇಕು. ಅನಂತರ ಆರತಿ ಹಾಡಬೇಕು. ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ನೈವೇದ್ಯ ತೋರಿಸಬೇಕು. ದೇವಿಯ ಭಕ್ತರೇ, ತಮ್ಮ ಆಹಾರದಲ್ಲಿ ಸ್ವಲ್ಪ ಹಣ್ಣು, ಹಾಲು ಮಾತ್ರವಿರಬೇಕು. ತಿಂಗಳಿಗೊಮ್ಮೆಯಾದರೂ ದುರ್ಗಾಷ್ಟಮಿಯಂದು ಶ್ರೀ ದುರ್ಗಾಸಪ್ತಶತಿಯ ಮಂತ್ರ ಸಾಧನೆ ಮಾಡಿದರೆ ಉತ್ತಮ. ನವರಾತ್ರಿಯಲ್ಲಿ ಪೂರ್ಣ ಶ್ರೀ ದುರ್ಗಾಸಪ್ತಶತಿ ಸಾಮಾನ್ಯ ಅಥವಾ ಗದ್ಯರೂಪ ವನ್ನು ಕಥೆಯ ಹಾಗೆ ಓದಬೇಕು.

– ಜ್ಯೋತಿಷ್ಯ ಬ.ವಿ. ತಥಾ ಚಿಂತಾಮಣಿ ದೇಶಪಾಂಡೆ (ಗುರೂಜಿ), ಪುಣೆ.