ನವರಾತ್ರಿಯ ಎಂಟನೇ ದಿನ

ಮಹಾಗೌರಿ

ಶ್ವೇತೆ ವೃಷೆ ಸಮಾರೂಢಾ ಶ್ವೇತಾಂಬರಧರಾ ಶುಚಿಃ |

ಮಹಾಗೌರಿ ಶುಭಂ ದದ್ಯಾನ್ಮ ಹಾದೇವ ಪ್ರಮೋದದಾ ||

ಅರ್ಥ : ಶುಭ್ರ ಎತ್ತಿನ ಮೇಲೆ ಆರೂಢಳಾಗಿರುವ, ಪವಿತ್ರ ಶುಭ್ರ ವಸ್ತ್ರಗಳನ್ನು ಧರಿಸುವ, ಭಗವಾನ ಶಂಕರನಿಗೆ ಆನಂದವನ್ನು ನೀಡುವ ಮಹಾಗೌರಿ ನನ್ನ ಕಲ್ಯಾಣವನ್ನು ಮಾಡಲಿ.

ಆಶ್ವಯುಜ ಶುಕ್ಲ ಅಷ್ಟಮಿ ನವರಾತ್ರಿಯ ಎಂಟನೇಯ ದಿನ. ದುರ್ಗೆಯ ಎಂಟನೇಯ ರೂಪವಾದ ಮಹಾಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಇದರಿಂದ ಪಾಪಮುಕ್ತರಾಗಿ ಅಕ್ಷಯ ಪುಣ್ಯಪ್ರಾಪ್ತವಾಗುತ್ತದೆ. ಭಗವಾನ ಶಂಕರನ ಪ್ರಾಪ್ತಿಗಾಗಿ ಪಾರ್ವತಿಯ ರೂಪದಲ್ಲಿ ಘೋರ ತಪಸ್ಸನ್ನು ಮಾಡಿದ್ದರಿಂದ ಇವಳ ಸಂಪೂರ್ಣ ಶರೀರ ಕಪ್ಪಾಯಿತು. ಭಗವಾನ ಶಂಕರನು ಅವಳಿಗೆ ಪವಿತ್ರ ಗಂಗಾಜಲದಿಂದ ಸ್ನಾನ ಮಾಡಿಸಿದಾಗ ಅವಳಿಗೆ ಗೌರವರ್ಣ ಪ್ರಾಪ್ತವಾಯಿತು. ಆದ್ದರಿಂದ ಅವಳನ್ನು ‘ಮಹಾಗೌರಿ’ ಎಂದು ಕರೆಯುತ್ತಾರೆ. ಅವಳು ಶುಭ್ರ ವಸ್ತ್ರ ಮತ್ತು ಆಭರಣಗಳನ್ನು ಧರಿಸಿದ್ದಾಳೆ. ಎತ್ತಿನ ಮೇಲೆ ಆರೂಢಳಾಗಿರುವ ಚತುರ್ಭುಜಳಾಗಿರುವ, ಇವಳ ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳಗಿನ ಬಲಗೈ ವರಮುದ್ರೆಯಲ್ಲಿ, ಮೇಲಿನ ಎಡಗೈ  ಅಭಯಮುದ್ರೆಯಲ್ಲಿದ್ದು ಕೆಳಗಿನ ಎಡಗೈಯಲ್ಲಿ ಡಮರು ಇದೆ.