ದೇವತೆಯ ಬಗ್ಗೆ ಭಾವವಿರುವ ಹಾಗೂ ಗುರುಕೃಪಾಯೋಗಾನುಸಾರ ಸಮಷ್ಟಿ ಸಾಧನೆ (ಟಿಪ್ಪಣಿ ೧) ಮಾಡುವ ಪೂಜಕನು ತನ್ನ ಭಾವಕ್ಕನುಸಾರ ದೇವಿಗೆ ಯಾವುದೇ ಸೀರೆಯನ್ನು ಅರ್ಪಿಸಬಹುದು; ಏಕೆಂದರೆ ಅವನ ಭಾವದಿಂದ ಅವನಿಗೆ ಅಪೇಕ್ಷಿತ ಫಲ ಸಿಗುತ್ತದೆ. ಆದರೆ ಪ್ರಾಥಮಿಕ ಹಂತದ ಸಾಧಕರು ಮತ್ತು ಕರ್ಮಕಾಂಡಕ್ಕನುಸಾರ ಸಾಧನೆ ಮಾಡುವವರು ಪ್ರತಿಯೊಂದು ವಿಷಯವನ್ನು ನಿಯಮಕ್ಕನುಸಾರವೇ ಮಾಡಬೇಕು. ಆದುದರಿಂದ ಅವರು ದೇವಿಗೆ ೬ ಗಜದ ಸೀರೆಗಿಂತ ೯ ಗಜದ ಸೀರೆಯನ್ನು ಅರ್ಪಿಸುವುದು ಯೋಗ್ಯವಾಗಿದೆ. ೯ ಗಜದ ಸೀರೆಯನ್ನು ಅರ್ಪಿಸುವುದೆಂದರೆ, ಪೂಜಿಸುವವರ ಆವಶ್ಯಕತೆಗನುಸಾರ ದೇವಿಯು ೯ ರೂಪಗಳ ಮಾಧ್ಯಮದಿಂದ ಕಾರ್ಯ ಮಾಡುವುದರ ಪ್ರತೀಕವಾಗಿದೆ. ೯ ಗಜದ ಸೀರೆಯಲ್ಲಿನ ೯ ಗಜಗಳು (ಸ್ತರಗಳು) ದೇವಿಯ ಕಾರ್ಯ ಮಾಡುವ ೯ ರೂಪಗಳನ್ನು ದರ್ಶಿಸುತ್ತವೆ. ೯ ಗಜದ ಸೀರೆಯನ್ನು ಅರ್ಪಿಸುವುದೆಂದರೆ ಯಾರಲ್ಲಿ ಶಕ್ತಿಯ (ದೇವಿಯ ತತ್ತ್ವದ) ಎಲ್ಲ ರೂಪಗಳು ಸಮಾವೇಶಗೊಂಡಿವೆಯೋ, ಅಂತಹ ಮೂಲ ನಿರ್ಗುಣ ಶಕ್ತಿಯನ್ನು ಅಂದರೆ ಶ್ರೀ ದುರ್ಗಾದೇವಿಯನ್ನು ತನ್ನ ೯ ಅಂಗಗಳ (ಒಂಬತ್ತು ರೂಪಗಳ ಸಹಿತ) ಸಹಿತ ಪ್ರಕಟವಾಗಿ ಕಾರ್ಯ ಮಾಡಲು ಆವಾಹನೆ ಮಾಡುವುದು. ‘೯’ ಸಂಖ್ಯೆಯು ಶ್ರೀ ದುರ್ಗಾದೇವಿಯ ಕಾರ್ಯಮಾಡುವ ಪ್ರಮುಖ ೯ ರೂಪಗಳನ್ನು ಪ್ರತಿನಿಧಿಸುತ್ತದೆ.
ಟಿಪ್ಪಣಿ ೧ – ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳೆಂದರೆ ವ್ಯಷ್ಟಿ ಸಾಧನೆ ಮತ್ತು ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳೆಂದರೆ ಸಮಷ್ಟಿ ಸಾಧನೆ. ‘ಗುರುಕೃಪಾಯೋಗಾನುಸಾರ’ ಸಾಧನೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಳ ಉತ್ತಮ ಸಮನ್ವಯವಿದೆ.