ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು ಇದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟನೆ

ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು, ಇದು ಅಪರಾಧವಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿತು.

ಪುದುಚೆರಿಯಲ್ಲಿ ಭಾಜಪದ ೨ ಶಾಸಕರು ಕಬಳಿಸಿದ್ದ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಈ ಕುರಿತು ರಾಜ್ಯದ ತನಿಖಾ ಇಲಾಖೆಯಿಂದ ಈ ಪ್ರಕರಣದ ಮತ್ತು ಇದರಲ್ಲಿ ಸಹಭಾಗಿಯಾಗಿರುವ ಜನಪ್ರತಿನಿಧಿಗಳ ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ಕೂಡ ನೀಡಿದೆ.

ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಕೆನಡಾದ ಗುರುದ್ವಾರಗಳ ಹಣವನ್ನು ಪ್ರಧಾನಿ ಟ್ರುಡೋ ಅವರ ಪಕ್ಷಕ್ಕೆ ನೀಡುತ್ತಿದ್ದ ! – ಪಂಜಾಬ್ ನ ಕಾಂಗ್ರೆಸ್ ಸಂಸದ ರವನೀತ ಸಿಂಗ ಬಿಟ್ಟು

ಹರದೀಪ ಸಿಂಗ ನಿಜ್ಜರ ಮತ್ತು ಅವರ ಗುಂಪು ಕೆನಡಾದ ಗುರುದ್ವಾರಗಳ ಮೇಲೆ ಹಿಡಿತ ಸಾಧಿಸಿದದ್ದರು. ಆ ಗುರುದ್ವಾರಗಳಿಂದ ಸಿಗುವ ಎಲ್ಲಾ ಹಣವು ಪ್ರಧಾನಿ ಜಸ್ಟೀನ ಟ್ರುಡೋ ಅವರ ಪಕ್ಷಕ್ಕೆ ಹೊಗುತ್ತಿತ್ತು, ಎಂದು ಪಂಜಾಬ್ ನ ಕಾಂಗ್ರೆಸ್ ನ ಸಂಸದ ರವನೀತ ಸಿಂಗ ಬಿಟ್ಟು ಆರೋಪ ಮಾಡಿದ್ದಾರೆ.

ಇರಾನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸದಿದ್ದರೆ ೧೦ ವರ್ಷಗಳ ಜೈಲು ಶಿಕ್ಷೆ

ಇರಾನ್ ನ ಸಂಸತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸುವವರನ್ನು ಮತ್ತು ಅವರನ್ನು ಬೆಂಬಲಿಸುವ ಮಹಿಳೆಯರಿಗೆ ಶಿಕ್ಷೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಅಂಗೀಕರಿಸಿದೆ.

ಸಂವಿಧಾನದಿಂದ ‘ಜಾತ್ಯತೀತ’, ‘ಸಮಾಜವಾದ’ ಶಬ್ದ ತೆಗೆಯಲಾಗಿದೆ ! – ಕಾಂಗ್ರೆಸ್ ಆರೋಪ

ನೂತನ ಸಂಸತ್ತಿನ ಎರಡನೇ ದಿನದಂದು ಲೋಕಸಭೆಯ ಕಲಾಪ ಪ್ರಾರಂಭವಾದ ನಂತರ ಸದಸ್ಯರಿಗೆ ಸಂವಿಧಾನದ ಪ್ರತಿಗಳನ್ನು ಕೊಡಲಾಯಿತು ಈ ಪ್ರತಿಯಲ್ಲಿ “ಸಮಾಜವಾದ” ಮತ್ತು ‘ಜಾತ್ಯಾತೀತ’ ಶಬ್ದಗಳು ಇಲ್ಲವೆಂದು ಲೋಕಸಭೆಯ ಕಾಂಗ್ರೆಸ್ ನ ಸಂಸದ ಮತ್ತು ವಿರೋಧ ಪಕ್ಷದ ನಾಯಕ ಅಧೀರ ರಂಜನ ಚೌಧರಿಯವರು ಆರೋಪ ಮಾಡಿದ್ದಾರೆ.

ಹಳೆಯ ಸಂಸತ್ತಿಗೆ ಸಂಸದರಿಂದ ವಿದಾಯ !

ಹಳೆಯ ಸಂಸತ್ತಿನ ಭವನದಿಂದ ಹೊಸ ಸಂಸತ್ ಭವನಕ್ಕೆ ಹೋಗುವ ಮುನ್ನ ಎಲ್ಲಾ ಸಂಸದರು ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಒಂದೆಡೆ ಸೇರಿ ವಿದಾಯ ಹೇಳಿದರು. ಆ ನಂತರ ಪ್ರಧಾನಿ ಮೋದಿಯವರು ಎಲ್ಲಾ ಸಂಸದರನ್ನು ಸಂಸತ್ ಭವನದ ಹೊಸ ಕಟ್ಟಡಕ್ಕೆ ಕರೆದೊಯ್ದರು.

ಸದಸ್ಯರ ವರ್ತನೆಯಲ್ಲಿ ಸುಧಾರಣೆ ಆಗುವವರೆಗೆ ಲೋಕಸಭೆಯ ಕಾರ್ಯಕಲಾಪ ನಡೆಸಲು ನಿರಾಕರಣೆ !

ಕಳೆದ 9 ದಿನಗಳಿಂದ ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದಾಗ 10ನೇ ದಿನದಂದು ಲೋಕಸಭೆಯ ಕಾರ್ಯಕಲಾಗಳನ್ನು ನಡೆಸಲು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ನಿರಾಕರಿಸಿದರು.